Advertisement

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

07:47 AM Oct 30, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆಗೆ ಕೇಂದ್ರ ಸರಕಾರ ಅನುದಾನ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Advertisement

ಪದಕ ಗೆಲ್ಲುವುದು ಗ್ಯಾರಂಟಿ ಎಂಬ ಹಂತ ತಲುಪಿದವರಿಗೆ ಮಾತ್ರ ಮುಂದಿನದಿನಗಳಲ್ಲಿ ಹಣ ನೀಡಲಾಗುವುದು, ಯೋಜನೆಯ ಲಾಭ ಪಡೆಯುತ್ತಿರುವ ಕ್ರೀಡಾಪಟುಗಳ ಸಂಖ್ಯೆಯನ್ನು ಕಡಿತಗೊಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಕೇಂದ್ರದ ಮಿಷನ್‌ ಒಲಿಂಪಿಕ್‌ ಸೆಲ್‌ ನಲ್ಲಿ (MOC) ಚಿಂತನೆ ನಡೆಯುತ್ತಿದೆ.  ಆ್ಯತ್ಲೀಟ್‌ಗಳು,ತರಬೇತುದಾರರು, ಸರಕಾರಿ ಅಧಿಕಾರಿಗಳು, ಆಡಳಿತಗಾರರು ಇರುವ ಉನ್ನತ ಸಮಿತಿ ಇದಾಗಿದೆ.
ಈ ಸಮಿತಿಯ ಪ್ರಕಾರ, ಬರುವ ವಾರಗಳಲ್ಲಿ ಸಭೆ ನಡೆಸಿ ನೂತನ ಆಯ್ಕೆ ಮಾನದಂಡಗಳನ್ನು ರಚಿಸುವ
ಸಾಧ್ಯತೆಯಿದೆ.

ಸದ್ಯ ದೇಶದಲ್ಲಿ ಹತ್ತಿರಹತ್ತಿರ 300 ಆ್ಯತ್ಲೀಟ್‌ಗಳು ‘ಟಾಪ್‌’ ಯೋಜನೆಯಿಂದ ನೆರವು ಪಡೆಯುತ್ತಿದ್ದಾರೆ. ಹೊಸ ನಿಯಮ ಜಾರಿಗೆ ಬಂದರೆ ಈ ಸಂಖ್ಯೆಯಲ್ಲಿ ಅರ್ಧಕ್ಕರ್ಧ ಕಡಿಮೆಯಾಗಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next