Advertisement

ಹಾಳಾದ ವಿದ್ಯುತ್‌ ದೀಪ-ಬಾಕ್ಸ್; ತಪ್ಪದ ಜನರ ಪರದಾಟ

12:10 PM Jan 10, 2022 | Team Udayavani |

ಚಿಂಚೋಳಿ: ಪಟ್ಟಣದ ಮುಖ್ಯರಸ್ತೆಯಲ್ಲಿ ಜೋಡಿಸಿರುವ ಹೈಮಾಸ್ಟ್‌ ದೀಪ, ಸ್ಟ್ರೀಟ್‌ ಲೈಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ತಂತಿಗಳು ಕಡಿದು ಹೋಗಿದ್ದರಿಂದ ರಾತ್ರಿ ಹೊತ್ತಿನಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುವಂತೆ ಆಗಿದೆ.

Advertisement

ಪಟ್ಟಣದ ಅನೇಕ ಪ್ರಮುಖ ಸ್ಥಳಗಳಲ್ಲಿ ಜೋಡಣೆ ಮಾಡಿರುವ ವಿದ್ಯುತ್‌ ತಂತಿಗಳ ಬಾಕ್ಸ್‌ಗಳು ಒಡೆದುಹೋಗಿವೆ. ಮಕ್ಕಳಿಗಾಗಲಿ, ಪಾದಚಾರಿಗಳಿಗಾಗಲಿ, ದನಕರುಗಳಿಗಾಗಲಿ ಈ ಬಾಕ್ಸ್‌ ಬಳಿಯಲ್ಲಿರುವ ತಂತಿ ತಗುಲಿದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಗುತ್ತಿಗೆದಾರನಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ಕ್ರಾಸ್‌, ಎಸ್‌ಬಿಐ ಬ್ಯಾಂಕ್‌, ತಾಂಡೂರ ಕ್ರಾಸ್‌, ಲೋಕೋಪಯೋಗಿ ಇಲಾಖೆ ಹತ್ತಿರ, ಗಾಂಧಿ ಚೌಕ್‌ ಆಶ್ರಯ ಕಾಲೋನಿ, ಹರಿಜನವಾಡ, ಕಲ್ಯಾಣಗಡ್ಡಿ, ಬಡಿದರ್ಗಾ ಹತ್ತಿರ ಹೈಮಾಸ್ಟ್‌ ದೀಪಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಬಟನ್‌ಗಳು ಒಡೆದು ಹೋಗಿವೆ. ವಿದ್ಯುತ್‌ ತಂತಿಗಳು ಹಾಳಾಗಿ ಹೋಗಿವೆ. ಹೀಗಾಗಿ ಕಳೆದ ಒಂದು ವರ್ಷಗಳಿಂದ ಲೈಟುಗಳು ಬೆಳಕು ಚೆಲ್ಲಿಲ್ಲ.

ಹೈಮಾಸ್ಟ್‌ ಮತ್ತು ವಿದ್ಯುತ್‌ ತಂತಿಗಳನ್ನು ಪರಿಶೀಲಿಸಿ ದುರಸ್ತಿ ಕೈಗೊಳ್ಳುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಸಂತೋಷ ಗುತ್ತೇದಾರ, ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next