Advertisement

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

07:09 PM Apr 22, 2024 | Team Udayavani |

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದ ತೋಟದಲ್ಲಿ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

Advertisement

ಶ್ರೀನಿವಾಸ ಗೊಲ್ಲರ್(16) ಸಿಡಿಲಿಗೆ ಬಲಿಯಾದ ದುರ್ದೈವಿ. ಕುರಿ ಮೇಯಿಸುತ್ತಿದ್ದ ವೇಳೆ ಮಳೆ ಬಂದಿದ್ದು ಈ ವೇಳೆ ಸಿಡಿಲಿನ ಹೊಡೆತಕ್ಕೆ ಬಾಲಕ ಮೃತಪಟ್ಟಿದ್ದಾನೆ. ಜತೆಯಲ್ಲಿದ್ದ ಬಾಲಕನ ತಂದೆಯೂ ಗಾಯಗೊಂಡಿದ್ದಾರೆ. ಯಲಬುರ್ಗಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಿಡಿಲು ಬಡಿದು ಯುವಕ ಸಾವು

ಬೀದರ್ : ಜಿಲ್ಲೆಯ ನಿಟ್ಟೂರ್‌ (ಬಿ) ಗ್ರಾಮದಲ್ಲಿ ಸೋಮವಾರ ಸಾಯಂಕಾಲ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ವೇಳೆ ಸಿಡಿಲು ಬಡಿದು ಗ್ರಾಮದ ಸುನೀಲ್ ಕುಮಾರ (32) ಎಂಬ ಯುವಕ ಮೃತಪಟ್ಟಿದ್ದಾನೆ.

ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಸಿಡಿಲಬ್ಬರಕ್ಕೆ ತೀವ್ರಗೊಂಡು ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ. ಈ ವೇಳೆ ಆತನ ಸಹೋದರ ಮತ್ತು ಅಜ್ಜಿ ಸಹ ಇದ್ದು, ಅವರಿಬ್ಬರು ಪಾರಾಗಿದ್ದಾರೆ. ನಿಟ್ಟೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಿಡಿಲಿನ ಹೊಡೆತಕ್ಕೆ ತಾಲೂಕಿನ ಬಂಪಳ್ಳಿ ಗ್ರಾಮದಲ್ಲಿ ಮನೆ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಎಮ್ಮೆ ಕರು ಪ್ರಾಣ ಬಿಟ್ಟಿದೆ. ಗ್ರಾಮದ ಪ್ರಭು ಬಿರಾದಾರ ಅವರಿಗೆ ಸೇರಿದ ಕರು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದೆ. ಬೀದರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಯಂಕಾಲ ಗುಡುಗು, ಬಿರುಗಾಳಿ ಸಹಿತ ತುಂತುರು ಮಳೆಯಾಗಿದೆ. ಬೆಳಿಗ್ಗೆಯಿಂದ  ಮಳೆಯ ಮುನ್ಸೂಚನೆ ನೀಡಿತ್ತು. ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next