Advertisement

ಒಡೆದ ಪೈಪ್‌: ಅಗಾಧ ನೀರು ಪೋಲು

01:16 PM May 22, 2017 | Team Udayavani |

ದಾವಣಗೆರೆ: ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಪುನಾಃ ಉಲ್ಬಣವಾಗುತ್ತಿರುವ ನೀರಿನ ಸಮಸ್ಯೆ ಪರಿಹರಿಸಬೇಕಾದ ಮಹಾನಗರ ಪಾಲಿಕೆ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗುತ್ತಿದೆ ಎಂಬುದಕ್ಕೆ ಭಾನುವಾರ ಸಂಜೆ ವಿನೋಬ ನಗರ 4ನೇ ಮುಖ್ಯ ರಸ್ತೆಯಲ್ಲಿ ಪೈಪ್‌ ಒಡೆದು ಗಂಟೆಗಟ್ಟಲೆ ನೀರು ಪೋಲಾಗಿದ್ದು ಸಾಕ್ಷಿ. 

Advertisement

ವಿನೋಬ ನಗರ 4ನೇ ಮುಖ್ಯ ರಸ್ತೆಯಲ್ಲಿ ನೀರಿನ ಪೈಪ್‌ ಒಡೆದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನೀರು ರಸ್ತೆಗೆ ಹರಿಯುತ್ತಿದ್ದನ್ನು ಕಂಡ ನಾಗರಿಕರು ಸಂಬಂಧಿತರ  ಗಮನಕ್ಕೆ ತಂದರೂ ಬಹು ಹೊತ್ತಿನವರೆಗೆ ಯಾರು ಸಹ ಸ್ಥಳಕ್ಕೆ ಬಂದು ನೀರು ಪೋಲಾಗುವುದನ್ನ ತಡೆಗಟ್ಟಲಿಲ್ಲ. ದಾವಣಗೆರೆಯಲ್ಲಿ ಮತ್ತೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ನಲ್ಲಿಯಲ್ಲಿ ನೀರು ಬರದೆ 8-10 ದಿನಗಳಾಗಿವೆ. ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು, ವಯೋವೃದ್ಧರು ಬಿಂದಿಗೆ ನೀರಿಗಾಗಿ ಹಗಲು- ರಾತ್ರಿಯೆನ್ನದೆ ಪರದಾಡುತ್ತಿದ್ದಾರೆ. ಟ್ಯಾಂಕರ್‌ನಲ್ಲಿ ಮನೆಗೆ 4-5 ಕೊಡಪಾನ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆಗಾಲದ ಪ್ರಾರಂಭದ ದಿನಗಳಲ್ಲೇ ನೀರಿನ ಸಮಸ್ಯೆ ತೀವ್ರವಾಗಿದೆ. 

ಇಂತಹ ಸಂದರ್ಭದಲ್ಲಿ  ಸಾಕಷ್ಟು ಜವಾಬ್ದಾರಿಯಿಂದ ನೀರು ಪೂರೈಕೆ ಮಾಡಬೇಕಾದ ನಗರಪಾಲಿಕೆ ಬೇಜವಾಬ್ದಾರಿ ತೋರುತ್ತಿದೆ. ನಾಗರಿಕರು ಗಮನಕ್ಕೆ ತಂದ ನಂತರವಾದರೂ ನೀರು ಪೋಲಾಗುವುದ ತಡೆಗಟ್ಟಿದ್ದಲ್ಲಿ ಜನರಿಗೆ ಉಪಯೋಗವಾಗುತ್ತಿತ್ತು ಎಂದು ಸಾರ್ವಜನಿಕರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next