Advertisement
ಅಸಲಿಗೆ, ಕೆಸಿಆರ್ ಅವರಿಗೆ ಬಿಜೆಪಿ, ಕಾಂಗ್ರೆಸ್ ಹೊರತಾದ ಸ್ಥಳೀಯ ಪಕ್ಷಗಳ ಮೈತ್ರಿಕೂಟ ರಚಿಸುವ ಮಹತ್ವಾಕಾಂಕ್ಷೆಯಿದೆ. ಇದೇ ಆಶಯದೊಂದಿಗೆ ಅವರು ಕಳೆದ ವರ್ಷ ಡಿ. 24ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮಾತುಕಡೆ ನಡೆಸಿದ್ದರು. ಈ ಮಾತು ಕತೆಯ ವೇಳೆ ಕಾಂಗ್ರೆಸ್ಸನ್ನು ಬದಿಗಿಟ್ಟು ಮೈತ್ರಿಕೂಟ ರಚಿಸುವ ಬಗ್ಗೆ ಮಮತಾ ಒಲವು ತೋರಲಿಲ್ಲವಾದ್ದರಿಂದ ರ್ಯಾಲಿಯಿಂದ ದೂರ ಉಳಿಯಲು ಕೆಸಿಆರ್ ನಿರ್ಧರಿಸಿದ್ದಾರೆನ್ನಲಾಗಿದೆ.
ಲೋಕಸಭೆ ಚುನಾವಣೆಗಾಗಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವಿನ ಸ್ಥಾನ ಹೊಂದಾಣಿಕೆ ಮಾತುಕತೆ ಯಶಸ್ವಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಬುಧವಾರ, ಹೊಸದಿಲ್ಲಿಯ ಜನಪಥ್‌ನಲ್ಲಿರುವ ಶರದ್ ಪವಾರ್ ನಿವಾಸದಲ್ಲಿ ರಾಹುಲ್-ಪವಾರ್ ಮಾತುಕತೆ ನಡೆಸಿದ್ದು, ಈ ವೇಳೆ, ಯವತ್ಮಾಲ್, ವಾಶಿಂ, ಬುಲಾœನಾ, ನಂದೂರ್ಬರ್, ರಾವೇರ್, ಅಹ್ಮದಾನಗರ್, ರತ್ನಗಿರಿ, ಸಿಂಧುಗಢ್ ಹಾಗೂ ಪುಣೆ ಕ್ಷೇತ್ರಗಳ ಹಂಚಿಕೆ ಕಗ್ಗಂಟಾಗಿಯೇ ಉಳಿಯಿತು ಎನ್ನಲಾಗಿದೆ. ಸದ್ಯದಲ್ಲೇ ಕಾಂಗ್ರೆಸ್ ಮಹಾ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮಹಾ ಕಾರ್ಯದರ್ಶಿ ಪ್ರಫುಲ್ ಪಟೇಲ್ ನಡುವೆ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದೆ. ಶೀಲಾ ದೀಕ್ಷಿತ್‌ಗೆ ಹೊಣೆ
ಹೊಸದಿಲ್ಲಿ: ದಿಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (80)ರನ್ನು ಗುರುವಾರ ನೇಮಿಸಲಾಗಿದೆ. ಜತೆಗೆ ಮೂವರು ನಾಯಕರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೀಕ್ಷಿತ್ ಪಕ್ಷದ ನಿರ್ಧಾರವನ್ನು ಗೌರವದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಮಾಜಿ ಅಧ್ಯಕ್ಷ ಅಜಯ್ ಮಕಾನ್ ಹಿರಿಯ ನಾಯಕಿಯನ್ನು ಅಭಿನಂದಿಸಿದ್ದಾರೆ.
Related Articles
ರಾಹುಲ್ ಜತೆಗೆ ವೇದಿಗೆ ಹಂಚಿಕೊಳ್ಳಲು ಕೆ. ಚಂದ್ರಶೇಖರ್ ರಾವ್ ನಿರಾಕರಣೆ
ಕಾಂಗ್ರೆಸ್, ಬಿಜೆಪಿ ಹೊರತಾದ ಮೈತ್ರಿಕೂಟ ರಚನೆ ಬಗ್ಗೆ ರಾವ್ ಒಲವು
ಸದ್ಯದ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಇರುವ ಕಾರಣ ರ್ಯಾಲಿಯಲ್ಲಿ ಭಾಗವಹಿಸಲು ನಕಾರ
Advertisement