Advertisement

ಒತ್ತಡ ನಿಗ್ರಹಕ್ಕೆ ಆಧ್ಯಾತ್ಮ ರಾಜಮಾರ್ಗ

06:11 PM Dec 28, 2021 | Team Udayavani |

ಗದಗ: ಆಧುನಿಕತೆಯ ಇಂದಿನ ದಿನಗಳಲ್ಲಿ ಮನುಷ್ಯ ಅವಸರ, ಒತ್ತಡದಲ್ಲಿ ಬದುಕು ಸಾಗಿಸುತ್ತಿದ್ದಾನೆ. ಒತ್ತಡಗಳಿಂದಾಗಿ ಮಾನಸಿಕ ನೆಮ್ಮದಿ, ಕಾರ್ಯಕ್ಷಮತೆ ಕುಗ್ಗುತ್ತಿದೆ. ಅದನ್ನು ಸರಿಪಡಿಸಿಕೊಳ್ಳಲು ಅಧ್ಯಾತ್ಮ ದಾರಿಯೊಂದೇ ರಾಜಮಾರ್ಗ ಎಂದು ಆಧ್ಯಾತ್ಮ ವಿದ್ಯಾಶ್ರಮದ ಡಾ| ನೀಲಮ್ಮತಾಯಿ ಅಸುಂಡಿ ಹೇಳಿದರು.

Advertisement

ಗದುಗಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ನಡೆದ ಶ್ರೀ ಶಾರದಾ ದೇವಿಯ 169ನೇ ಜಯಂತ್ಯುತ್ಸವ ಹಾಗೂ ಜೀವಂತ ಶಾರದೆಯರ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ನಿತ್ಯ ಕಾಯಕದೊಂದಿಗೆ ಧಾರ್ಮಿಕ, ಆಧ್ಯಾತ್ಮ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಧಾರ್ಮಿಕ ಚಿಂತನ, ಧ್ಯಾನ, ಭಜನೆ, ಮನಸ್ಸಿಗೆ ಮುದ ನೀಡುವ ಲಘು ಸಂಗೀತ ಆಲಿಕೆ, ಯೋಗ, ವಾಯುವಿಹಾರ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಒತ್ತಡ ನಿಗ್ರಹಗೊಂಡು, ಮನಸ್ಸು ನಿಯಂತ್ರಣ ಮತ್ತು ಶಾಂತಚಿತ್ತದಿಂದ ಇರುತ್ತದೆ. ಇದರಿಂದ ಮನಸ್ಸಿನಲ್ಲಿ ಚೈತನ್ಯ ಉಂಟಾಗಿ ನಮ್ಮ ಕಾಯಕದಲ್ಲಿ ಪ್ರಗತಿ ಸಾಧಿಸಲು
ಸಾಧ್ಯವಾಗುತ್ತದೆ. ಆಧ್ಯಾತ್ಮ ಚಿಂತನೆಗಳಿಂದ ಸಾರ್ಥಕ ಬದುಕು ಸಾಕಾರಗೊಳ್ಳತ್ತದೆ ಎಂದರು.

ಆಶ್ರಮದ ಪೂಜ್ಯ ಜಗನ್ನಾಥಾನಂದಜೀ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾರದಾ ದೇವಿ ಅವರ ಜಯಂತಿ ಅಂಗವಾಗಿ ಬಡ ಮಹಿಳೆಯರಿಗೆ ಸೀರೆ, ಅಕ್ಕಿ, ಬೇಳೆ ನೀಡಿ ಆರತಿ ಮಾಡಿದ ಡಾ| ನೀಲಮ್ಮತಾಯಿ ಅಸುಂಡಿ ಹಾಗೂ ಜಗನ್ನಾಥಾನಂದಜೀ ಸ್ವಾಮೀಜಿ ಸಾಷ್ಟಾಂಗ ನಮಸ್ಕಾರ ಮಾಡಿ, ಅವರನ್ನೇ ಜೀವಂತ ಶಾರದೆ ಎಂದು ಭಕ್ತಿ ಸಮರ್ಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜಗನ್ನಾಥಾನಂದಜೀ ಸ್ವಾಮೀಜಿ ನೇತೃತ್ವದಲ್ಲಿ ಶಾರದಾ ಪೂಜೆ, ಆರತಿ, ಪ್ರಾರ್ಥನೆ, ಹೋಮ, ಭಜನೆ ಇತರೆ ಕಾರ್ಯಕ್ರಮಗಳು ನಡೆದವು. ಮಹಾಪ್ರಸಾದದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು.

Advertisement

ಸಂಜೆ ಲಲಿತಾ ಸಹಸ್ರನಾಮ ನಾಮಾವಳಿ ಪಠಣ, ಕುಂಕುಮಾರ್ಚನೆ, ವಿಶೇಷ ಭಜನೆ, ಆರತಿ, ಡಾ| ನಾರಾಯಣ ಹಿರೇಕೊಳಚಿ, ಡಾ| ಹನುಮಂತ ಕೊಡಗಾನೂರ ಅವರಿಂದ ಸಂಗೀತ, ಉಪನ್ಯಾಸ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ಜರುಗಿತು.

ಸಮಾರಂಭದಲ್ಲಿ ಬಾಗಮಾರ ದಂಪತಿ, ಪ್ರೊ| ಎಸ್‌.ವೈ. ಚಿಕ್ಕಟ್ಟಿ, ಶ್ರೀನಿವಾಸ ಹುಯಿಲಗೋಳ, ಡಾ| ರಾಧಿಕಾ ಕುಲಕರ್ಣಿ, ಡಾ| ಕುನಾಲ್‌ ಅಳ್ಳೊಳ್ಳಿ, ಡಾ|ಪುನೀತಕುಮಾರ ಬೆನಕನವಾರಿ, ರಂಗನಾಥ  ಹಟ್ಟಿ, ಕೇಶವರಾಮ ಕೊಳ್ಳಿ, ಮುಕುಂದ ಪೊತ್ನಿಸ್‌, ಈಶ್ವರಪ್ಪ ಹಂಚಿನಾಳ, ಡಾ| ಕೆ. ಯೋಗೇಶನ್‌ ಮತ್ತಿತರರುಪಾಲ್ಗೊಂಡಿದ್ದರು. ಎಸ್‌.ಎಚ್‌. ದೇಶಪ್ಪನವರ ನಿರೂಪಿಸಿದರು. ರಾಮಚಂದ್ರ ಕುಲಕರ್ಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next