Advertisement
ತಮಿಳುನಾಡಿನ ಥೇನಿ ಜಿಲ್ಲೆಯ ಆಂಡಿಪಟ್ಟಿ ತಾಲೂಕಿನ ಕಾಮರಾಜಪುರಂ ಗ್ರಾಮದ ಈಶ್ವರನ್- ಕುಂಜರಮ್ ದಂಪತಿಯ ಪುತ್ರ ಈ ಜ್ಯೋತಿರಾಜ್ ಬಂಡೆ ಹತ್ತುವುದರಲ್ಲಿ ಪಂಟನಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಯಾರೂ ಯಾಕೆ, ನಾನೇ ಸ್ವತಃ ಅದನ್ನು ಊಹಿಸಿರಲಿಲ್ಲ. ನನ್ನ ಬದುಕೊಂದು ಅಸಂಖ್ಯ ಮತ್ತು ಅಸಾಧಾರಣ ತಿರುವುಗಳ ಯಾನ. ಹತ್ತು ವರ್ಷದ ಬಾಲಕನಿದ್ದಾಗಲೇ ಮನೆ ತೊರೆದೆ.
Related Articles
ವಿಷ ಕುಡಿದರೂ ಬದುಕಿದೆ!: ವಿಜಯಪುರದಲ್ಲಿ ನಾಲ್ಕಾರು ವರ್ಷಗಳ ಕಾಲ ಗಾರೆ ಕೆಲಸ ಮಾಡಿ ಅಲ್ಲಿಂದಲೂ ಓಡಿ ಬಂದುಬಿಟ್ಟೆ. ನಾನೇಕೆ ಊರೂರು ಅಲೆಯುತ್ತಿದ್ದೇನೆ, ನನ್ನ ಜೀವನದ ಗುರಿ ಏನು ಮುಂತಾದ ಪ್ರಶ್ನೆಗಳು ಪೆಂಡಭೂತದಂತೆ ಕಾಡತೊಡಗಿದ್ದವು. ಯಾಕೋ ಈ ಜೀವನವೇ ಬೇಡ ಎನಿಸಲು ಶುರುವಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ವಿಷದ ಬಾಟಲಿ ಹಿಡಿದು, ಏಳು ಸುತ್ತಿನ ಕೋಟೆಗೆ ಬಂದೆ.
Advertisement
ವಿಷ ಸೇವಿಸಿ ಹತ್ತಿರದಲ್ಲೇ ಇದ್ದ ಏಕನಾಥೇಶ್ವರಿ ದೇಗುಲದ ಬಳಿ ಹೋದೆ. ಭಕ್ತರು ಯಾರೋ ಪ್ರಸಾದವೆಂದು ಬಾಳೆಹಣ್ಣು ಕೊಟ್ರಾ. ಅದನ್ನು ತಿಂದು ಮಲಗಿದೆ. ಗಂಟೆಗಳು ಕಳೆದಿರಬಹುದು. ಮಂಪರಿನಿಂದ ಎದ್ದೆ. ವಿಷ ಕುಡಿದರೂ ಅದ್ಹೇಗೋ ನಾನು ಬದುಕಿಬಿಟ್ಟಿದ್ದೆ! ವಿಷದಿಂದ ಸಾಯದಿದ್ದರೇನಂತೆ ಬಂಡೆಯಿಂದ ಬಿದ್ದು ಸಾಯೋಣ ಅಂತ ಗೋಪಾಲಸ್ವಾಮಿ ಹೊಂಡದ ಬಳಿ ಬಂದೆ. ಆ ಹೊತ್ತಿಗೆ ಸುತ್ತಮುತ್ತಲಿದ್ದ ಮಂಗಗಳ ಆಟ ಕುತೂಹಲ ಮೂಡಿಸಿತು.
ಮಂಗಗಳ ಬೆನ್ನು ಹತ್ತಿ “ಹಂಸಗೀತೆ’ ಬಂಡೆ ಬಳಿ ಬಂದೆ. ಅವು ಬಂಡೆ ಏರುವ ಪರಿಗೆ ನಾನು ಬೆರಗಾದೆ. ಅರಿವಿಲ್ಲದಂತೆ ನಾನೂ ಮಂಗಗಳ ಥರ ಬಂಡೆ ಏರಿದೆ. ಸುಮಾರು 15 ಅಡಿಗಳಷ್ಟು ಏರಿದ ಬಳಿಕ ಆತ್ಮಹತ್ಯೆಯ ವಿಚಾರ ನೆನಪಾಯಿತು. ಇಲ್ಲಿಂದ ಬಿದ್ದರೆ ಸಾಯಲಾರೆ, ಕೈ- ಕಾಲು ಮುರಿದುಕೊಂಡು ಮತ್ತೂಂದು ಸಮಸ್ಯೆ ತಂದುಕೊಳ್ಳುತ್ತೇನೆ ಎಂದುಕೊಂಡು ಸುಮಾರು 70 ಅಡಿಯ “ಹಂಸಗೀತೆ’ ಬಂಡೆಯನ್ನು ಪೂರ್ತಿ ಏರಿ, ಮೇಲಿಂದ ಹಾರೋಣ ಅಂತ ಹತ್ತಿಯೇ ಬಿಟ್ಟೆ.
ಆಮೇಲಾಗಿದ್ದೆಲ್ಲಾ ದೈವೇಚ್ಚೆ. ಮೇಲಕ್ಕೆ ಏರಿದ ನಂತರ ಜನರೆಲ್ಲಾ ಬಂಡೆ ಸುತ್ತ ನೆರೆದರು. ಇವನ್ಯಾರೋ ಅಪ್ರತಿಮ ಸಾಹಸಿಗ ಎನ್ನುವ ರೀತಿಯಲ್ಲಿ ಚಪ್ಪಾಳೆ ತಟ್ಟತೊಡಗಿದರು, ಫೋಟೊ ಕ್ಲಿಕ್ಕಿಸತೊಡಗಿದರು. ಅವರನ್ನು ನೋಡಿ ಕಣ್ತುಂಬಿ ಬಂತು. ನನ್ನವರು ಯಾರೂ ಇಲ್ಲ ಎಂದುಕೊಂಡಾಗಲೇ ಜನರು ನನ್ನನ್ನು ತಮ್ಮವನನ್ನಾಗಿ ಮಾಡಿಕೊಂಡಿದ್ದರು. ಅವರಿಗೇನು ಗೊತ್ತು, ನಾನು ಸಾಯಲು ಏರಿದವನೆಂದು! ಜ್ಯೋತಿರಾಜ ಜನರ ಪ್ರೀತಿಯಿಂದ “ಕೋತಿರಾಜ’ನಾಗಿದ್ದು ಅವತ್ತೇ.
ವಿದೇಶಿಗರಿಗೂ ಟ್ರೈನಿಂಗ್ ಕೊಟ್ಟೆ…: ತಲೆ ಮುಚ್ಚುವಂತೆ ಬಣ್ಣದ ಬಟ್ಟೆ ಸುತ್ತಿ, ಸೊಂಟಕ್ಕೊಂದು ಪೌಡರ್ ಡಬ್ಬಿ, ಪಾದಕ್ಕೆ ಶೂ, ಟೀ ಶರ್ಟು, ಚಡ್ಡಿ ಹಾಕಿಕೊಂಡು ಕಲ್ಲಿನ ಕೋಟೆ ಬೀದಿಗಳಲ್ಲಿ ಓಡಾಡುತ್ತಿದ್ದರೆ ಜನರೆಲ್ಲಾ ಪ್ರೀತಿಯಿಂದ ಕರೆದು ಮಾತನಾಡಿಸುತ್ತಾರೆ. ಅದಕ್ಕಿಂತ ಹೆಚ್ಚಿನದು ಇನ್ನೇನೂ ಬೇಕಿಲ್ಲ. ಕೋಟೆಗೆ ನನ್ನನ್ನು ನೋಡಲೆಂದೇ ಬರುವವರಿದ್ದಾರೆ.
ಚಿತ್ರದುರ್ಗ ಮಾತ್ರವಲ್ಲದೆ ಬಾದಾಮಿ, ಹಂಪಿ, ಬೆಂಗಳೂರು, ಯಾಣ ಸೇರಿದಂತೆ ರಾಜ್ಯ ಹೊರ ರಾಜ್ಯಗಳಲ್ಲೂ ನನ್ನ ಸಾಹಸ ಯಾತ್ರೆ ಮುಂದುವರೆದಿದೆ. ಇಂಡಿಯಾ ಮಾತ್ರವಲ್ಲ, ಹೊರದೇಶಗಳಿಂದಲೂ ನನ್ನನ್ನು ಕಾಣಲೆಂದು ಕೆಲ ಮಂದಿ ಬಂದಿದ್ದರು. ಅವರಿಗೆಲ್ಲ ರಾಕ್ ಕ್ಲೈಂಬಿಂಗ್ ಹೇಳಿಕೊಟ್ಟೆ. ಆ ತರಬೇತಿಯ ಹಣದಿಂದ ನನ್ನ ಜೀವನ ನಿರ್ವಹಣೆ ಸಾಧ್ಯವಾಗುತ್ತಿದೆ. ಅದರ ಜೊತೆಗೆ ಸುಮಾರು 15 ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ.
ಜೋಗದಲ್ಲಿ ಮಾಯವಾಗಿದ್ದು!: ಬಂಡೆ ಕೊರಕಲುಗಳಿದ್ದ ಹೊಳೆಯಲ್ಲಿ ಕೊಚ್ಚಿಕೊಂಡು ಹೋದವರನ್ನು ಹುಡುಕುವುದು ತುಂಬಾ ಕಷ್ಟ. ಆದರೆ, ನನಗೆ ಅದು ಕಷ್ಟದ ಕೆಲಸವಾಗಿರಲಿಲ್ಲ. ಹೀಗಾಗಿ ಅಂಥ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಅದೇ ರೀತಿ ಫೆ.26ರಂದು ಜೋಗಕ್ಕಿಳಿದಿದ್ದೆ. ಮಧ್ಯಾಹ್ನ ಇಳಿದವನು ಹೊರಜಗತ್ತಿನ ಪಾಲಿಗೆ ಮಾಯವಾಗಿಬಿಟ್ಟಿದ್ದೆ.
ಅಂದು ಆಗಿದ್ದಿಷ್ಟೇ… ಶವ ಹುಡುಕಲು ಹೋದಾಗ ನೀರಿನ ಗುಂಡಿಯೊಳಗೆ ಬಿದ್ದುಬಿಟ್ಟೆ. ಗುಂಡಿ ಸುತ್ತಲೂ ಪಾಚಿ ಕಟ್ಟಿದ್ದರಿಂದ ಹೊರಕ್ಕೆ ಬರಲಾಗಲಿಲ್ಲ. ಕೈಗೆ ಸಿಕ್ಕ ಕಲ್ಲಿನಿಂದ ಪಾಚಿ ತೆಗೆಯುತ್ತಾ ಬಂದೆ. ಒಂಚೂರು ಗ್ರಿಪ್ ಸಿಕ್ಕಿತು. ಇಷ್ಟಾಗುವಷ್ಟರಲ್ಲಿ ಕತ್ತಲಾವರಿಸಿತು. ಮೂಳೆಯನ್ನು ಕೊರೆಯುವಂಥ ಚಳಿ ಹೈರಾಣಾಗಿಸಿತ್ತು. ಹಸಿವಿನಿಂದ ನಿತ್ರಾಣಗೊಂಡಿ¨ªೆ. ನನ್ನ ಕೂಗು ಕಡೆಗೂ ದೇವರಿಗೆ ಮುಟ್ಟಿತ್ತು. ಬೆಳಗ್ಗೆ ರಕ್ಷಣಾ ತಂಡ ನಾನಿದ್ದಲ್ಲಿಗೆ ಬಂತು!
ಬದುಕಿ ಬಂದಾಗ, ಅವಳು ದೃಷ್ಟಿ ತೆಗೆದಳು!: ಮಕ್ಕಳಿಗೆ ಟ್ರೈನಿಂಗ್ ಕೊಡುವ ಸಂದರ್ಭದಲ್ಲಿ ಕೋಟೆಯ ಗೋಡೆ ಮೇಲೆ ಲಾಗ ಹಾಕಲು ಹೋಗಿ 20 ಅಡಿ ಎತ್ತರದಿಂದ ಆಯತಪ್ಪಿ ಬಿದ್ದಿ¨ªೆ. ವೈದ್ಯರು ನನ್ನ ಎಡಗಡೆಯ ಕಾಲಿನ ಮೂಳೆ ಮುರಿದು ಇಂಟರ್‌ಲಾಕಿಂಗ್ ಮೈಲಿಂಗ್ ಆಪರೇಷನ್ ಮಾಡಿದರು. ಈ ರೀತಿಯ ಅವಘಡಗಳನ್ನು ಅದೆಷ್ಟೋ ನೋಡಿದ್ದೇನೆ. ಆದರೆ, ಅವಕ್ಕೆಲ್ಲಾ ನಾನು ಹಿಂದೆ ತಲೆಕೆಡಿಸಿಕೊಂಡಿದ್ದೇ ಇಲ್ಲ.
ತಲೆಕೆಡಿಸಿಕೊಂಡಿದ್ದು ಯಾವಾಗ ಅಂದರೆ, ನನ್ನ ಬದುಕಿನಲ್ಲಿ ಒಬ್ಬಳು ಹುಡುಗಿ ಬಂದ ಮೇಲೆ! ಶೀಘ್ರದÇÉೇ ನಾನು ಅವಳ ಕೈ ಹಿಡಿಯಲಿದ್ದೇನೆ. ಗುಡ್ಡದ ರಂಗವ್ವನಹಳ್ಳಿಯವಳು, ಹೆಸರು: ಅರ್ಚನಾ. ನನ್ನ ಮೇಲೆ ಪ್ರೀತಿ ಮತ್ತು ಕಾಳಜಿ ಇರುವ ಹುಡುಗಿ ಅವಳು. ಮೊದಮೊದಲು ನನ್ನ ಸಾಹಸವನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದವಳು ಈಗ ಭಯ ಪಡುತ್ತಾಳೆ!
ಜೋಗದ ಗುಂಡಿಯಲ್ಲಿ ಕಳೆದುಹೋಗಿದ್ದಾಗ ಮನೆ ಮಂದಿಗೆಲ್ಲಾ ಧೈರ್ಯ ಹೇಳಿದ್ದು ಅವಳೇ! ನಾನು ಸುರಕ್ಷಿತವಾಗಿ ಹಿಂತಿರುಗಿ ಬಂದಾಗ ಆಂಜನೇಯ ದೇಗುಲಕ್ಕೆ ಕರೆದೊಯ್ದು ಕಾಯಿ ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ, ದೃಷ್ಟಿ ತೆಗೆದಳು. “ಇನ್ನು ಮುಂದೆ ಇಂಥ ದುಸ್ಸಾಹಸ ಬೇಡ ಪ್ಲೀಸ್’ ಅಂದಳು!
ಸಾಹಸಿಗರ ಸಹವಾಸ: ಶಕ್ತಿಮಾನ್, ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್ ಅವರನ್ನೊಳಗೊಂಡ ಸಾಹಸಿಗರ ವಲ್ಡ…ì ಟಾಪ್ ಟೆನ್ ಲಿÓr…ನಲ್ಲಿ ನಾನೂ ಒಬ್ಬನಾಗಿದ್ದೇನೆ. ಹತ್ತು ಜನರ ಪೈಕಿ ಕೆಲವರೊಂದಿಗೆ ವಿವಿಧ ಮಾಧ್ಯಮಗಳ ಮೂಲಕ ಮಾತಾಡಿದ್ದೇನೆ. ಬಹುತೇಕರು ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಫ್ರೆಂvÕ… ಆಗಿದ್ದಾರೆ. ನನ್ನ ಹಾಗೆಯೇ ಕಟ್ಟಡ, ಬಂಡೆಗಳನ್ನು ಏರಿ “ರಿಯಲ್ ಸ್ಪೈಡರ್‌ಮ್ಯಾನ್’ ಎಂದೇ ಹೆಸರು ಮಾಡಿರುವ ಫ್ರೆಂಚ್ ರಾಕ್ ಕ್ಲೈಂಬರ್ ಅಲೈ
* ಬಸವರಾಜ ಮುದನೂರ್