Advertisement

ದಲಿತರಿಗೆ ಮೀಸಲಿಟ್ಟ ಅನುದಾನ ಖರ್ಚು ಮಾಡಿ

12:22 PM Mar 31, 2017 | |

ಮೈಸೂರು: ನಾನೊಬ್ಬನೆ ದಲಿತರು, ಹಿಂದುಳಿದವರ್ಗಗಳ ಚಾಂಪಿಯನ್‌ ಎಂದು ಪೋಷಾಕು ಧರಿಸಿ, ಖಡ್ಗ ಹಿಡಿದು ಸಂಭ್ರಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವರ್ಗದವರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಅರ್ಧದಷ್ಟನ್ನಾದರೂ ಖರ್ಚು ಮಾಡದಿದ್ದರೆ, ಖಡ್ಗ ಇಳಿಸಿ, ಪೋಷಾಕು ಕಳಚಬೇಕಾಗುತ್ತದೆ ಎಂದು ವಿಪ ವಿರೋಧಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರು, ಹಿಂದುಳಿದವರ್ಗಗಳವರಿಗೆ ಕಾಂಗ್ರೆಸ್‌ ಹಿಂದಿನಿಂದಲೂ ವಂಚಿಸುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವರ್ಗದ ಜನರ ಮೂಗಿಗೆ ತುಪ್ಪ ಸವರಿ ಮೋಸ ಮಾಡುತ್ತಿದ್ದಾರೆ ಎಂದರು.

ನಾನೊಬ್ಬನೆ ದಲಿತರ ಚಾಂಪಿಯನ್‌ ಎಂದು ತಿಳಿದುಕೊಂಡಿರುವ ಸಿದ್ದರಾಮಯ್ಯ, ದಲಿತರ ಏಳಿಗೆಗೆ ನಾನೊಬ್ಬನೆ ಅನುದಾನ ನೀಡಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸನ್ಮಾನ ಸಮಾರಂಭದಲ್ಲಿ ಸಿದ್ದರಾಮಯ್ಯ ಪೋಷಾಕು ತೊಟ್ಟು, ಖಡ್ಗ ಹಿಡಿದು ಸಂಭ್ರಮಿಸಿದರು. ಅವರ ಮದುವೆಯಲ್ಲೂ ಸಿದ್ದರಾಮಯ್ಯ ಈ ರೀತಿಯ ಪೋಷಾಕು ಧರಿಸಿರಲಿಲ್ಲವೇನೋ, ಆದರೆ, ಅರ್ಧಂಬರ್ಧ ಸಾಧನೆ ಮಾಡಿ ಬಹಳ ಸಂಭ್ರಮಪಟ್ಟಿದ್ದಾರೆ.

ಆದರೆ, ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ದಲ್ಲಿ ಅರ್ಧದಷ್ಟನ್ನಾದರೂ ಖರ್ಚು ಮಾಡದಿದ್ದಲ್ಲಿ ಅವರು ಖಡ್ಗ ಇಳಿಸಿ, ಪೋಷಾಕು ಕಳಚಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ದಲಿತ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಶೇ.72ಕ್ಕೆ ಹೆಚ್ಚಿಸು ವುದಾಗಿ ಹೇಳಿಕೆ ನೀಡಿ, ಆ ವರ್ಗದವರಲ್ಲಿ ಭ ರವಸೆ ಮೂಡಿಸಿದ್ದಾರೆ. ಆದರೆ, ಅವರ ಭರವಸೆ ಈಡೇರುವುದಿಲ್ಲ.

ಇನ್ನು ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿ ಈ ವರ್ಷಾಂತ್ಯದೊಳಗೆ ಪ್ರಕಟಿಸುವುದಾಗಿ ತಿಳಿಸಿದ್ದರೂ ಅದು ಕೂಡ ಹೊರಬರುವುದಿಲ್ಲ. ಇನ್ನು ಪ. ಜಾತಿ ಹಾಗೂ ಪಂಗಡಗಳ ಜನರ ಕಲ್ಯಾಣಕ್ಕಾಗಿ ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ 19 ಸಾವಿರ ಕೋಟಿ ರೂ ಹಣದಲ್ಲಿ ಅರ್ಧದಷ್ಟು ಕೂಡ ಖರ್ಚಾಗಿಲ್ಲ. ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿರುವ ಈ ಮೂರು ವಿಷಯಗಳೂ ಕೇವಲ ಭರ ವಸೆಯಾ ಗಿಯೇ ಉಳಿಯಲಿವೆ ಎಂದು ಹರಿಹಾಯ್ದರು.

Advertisement

ಅಲ್ಪಸಂಖ್ಯಾತರ ರಕ್ಷಣೆ ವಿಚಾರದಲ್ಲೂ ರಾಜ್ಯ ಸರ್ಕಾರ ವಿಫ‌ಲವಾಗಿದೆ. ವಕ್‌ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅನ್ವರ್‌ ಮಾಣಿಪ್ಪಾಡಿ ವರದಿ ಅನುಷ್ಠಾನಗೊಳಿಸಲು ಮುಂದಾಗುತ್ತಿಲ್ಲ. ರಾಜ್ಯಸರ್ಕಾರದ ಹಲವು ಮಂತ್ರಿಗಳು ಹಾಗೂ ಕಾಂಗ್ರೆಸ್‌ ನಾಯಕರುಗಳೇ ಅಲ್ಪ ಸಂಖ್ಯಾತರಿಗೆ ಸೇರಿದ 54 ಸಾವಿರ ಕೋಟಿ ಮೊತ್ತದ ಆಸ್ತಿ ಕಬಳಿಸಿದ್ದಾರೆ. ಆದರೂ ಅಲ್ಪಸಂಖ್ಯಾತರು ನಮ್ಮ ವಿರುದ್ಧ ಮಾತ್ರ ತಿರುಗಿಬೀಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next