Advertisement

ಮನೆಮನೆ ಸರ್ವೇ ಕಾರ್ಯ ತ್ವರಿತಗೊಳಿಸಿ

02:59 PM Apr 10, 2022 | Team Udayavani |

ಗುರುಮಠಕಲ್‌: ಚುನಾವಣೆ ಶಾಖೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣೆ, ಯುವ ಮತದಾರರ ನೋಂದಣಿಗಾಗಿ ಮನೆ ಮನೆ ಸರ್ವೇ ಕಾರ್ಯ ತ್ವರಿತಗತಿಯಲ್ಲಿ ನಿರ್ವಹಿಸಲು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕಿನ ಬೂದೂರು ಗ್ರಾಮ ಮತ್ತು ಪಟ್ಟಣದಲ್ಲಿ ಕಂದೂರು ಓಣಿ, ಮಜ್ಜಿಗೇರಿ, ಕಟೇಲಗೇರಿ ಓಣಿಗಳಿಗೆ ಖುದ್ದಾಗಿ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.

ಕೆಳಹಂತದಲ್ಲಿ ಬಿಎಲ್‌ಒ, ಬಿಎಲ್‌ಒ ಮೇಲ್ವಿಚಾರಕರು, ಚುನಾವಣಾ ಶಾಖೆ ಸಿಬ್ಬಂದಿಯವರು ಬಿಎಲ್‌ಒ ತಮ್ಮ ಮತಗಟ್ಟೆಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಸಲ್ಲಿಸದೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜನನ ಪ್ರಮಾಣಪತ್ರ, ಹೆಸರು ನೋಂದಣಿ, ವಯಸ್ಸಿನ ದೃಢೀಕರಣ, ಪಡಿತರ ಚೀಟಿಗಳನ್ನು ಪರಿಶೀಲಿಸಿ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದರು.

ಗುರುಮಠಕಲ್‌ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿವೆ. ಇದರಲ್ಲಿ ಯಾದಗಿರಿ ತಾಲೂಕಿಗೆ 141 ಮತಗಟ್ಟೆಗಳು ಒಳಪಟ್ಟಿವೆ. ಗುರುಮಠಕಲ್‌ ತಾಲೂಕಿನಲ್ಲಿ 143 ಮತಗಟ್ಟೆಗಳಿವೆ. ಗುರುಮಠಕಲ್‌ ತಾಲೂಕಿನಲ್ಲಿ 70 ಗ್ರಾಮಗಳು, 2 ಹೋಬಳಿಗಳು, 4 ಜಿಲ್ಲಾ ಪಂಚಾಯಿತಿ, 10 ತಾಪಂ ಮತ್ತು 18 ಗ್ರಾಪಂಗಳಿದ್ದು, ತಾಲೂಕಿನಲ್ಲಿ 65,686 ಗಂಡು, 66,692 ಹೆಣ್ಣು, ಎರಡು ಇತರೆ ಸೇರಿದಂತೆ ಒಟ್ಟು 1,32,380 ಮತದಾರರ ಸಂಖ್ಯೆ ಇರುವುದೆಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್‌, ಗುರುಮಠಕಲ್‌ ತಹಶೀಲ್ದಾರ್‌ ಶರಣಬಸವ, ಚುನಾವಣೆ ತಹಶೀಲ್ದಾರ್‌ ಸಂತೋಷರಾಣಿ, ಗ್ರೇಡ್‌- 2 ತಹಶೀಲ್ದಾರ್‌ ನರಸಿಂಹಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next