Advertisement

ವೈದ್ಯ ಪರೀಕ್ಷೆ ಶೀಘ್ರ ನಡೆಸಿ: ಕೇಂದ್ರಕ್ಕೆ ಐಎಂಎ ಆಗ್ರಹ

11:52 PM Apr 19, 2021 | Team Udayavani |

ಹೊಸದಿಲ್ಲಿ: ಪ್ರಸ್ತುತ ಉದ್ಭವಿಸಿರುವ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ವೈದ್ಯ ಸಂಪನ್ಮೂಲವನ್ನು ಬಲಪಡಿಸಲು ಎಂಬಿಬಿಎಸ್‌, ನೀಟ್‌ ಪಿಜಿ ಮತ್ತು ವಿದೇಶೀ ಮೆಡಿಕಲ್‌ ಗ್ರಾಜ್ಯುಯೇಟ್‌ ಪರೀಕ್ಷೆ (ಎಫ್ಎಂಜಿಇ) ಪ್ರಕ್ರಿಯೆಗಳ ವೇಗ ಹೆಚ್ಚಿಸುವಂತೆ ಅಖೀಲ ಭಾರತ ವೈದ್ಯರ ಸಂಘಟನೆ (ಐಎಂಎ) ಸರಕಾರವನ್ನು ಒತ್ತಾಯಿಸಿದೆ. ಸ್ನಾತಕೋತ್ತರ ಪದವೀಧರ ಮತ್ತು ಕಿರಿಯ ವೈದ್ಯರ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಬೇಕು ಎಂದು ಐಎಂಎಯ ಮಹಾ ಕಾರ್ಯದರ್ಶಿ ಜಯೇಶ್‌ ಎಂ. ಲೇಲೆ ಹೇಳಿದ್ದಾರೆ.

Advertisement

ದೇಶದಲ್ಲಿ ಪ್ರಸ್ತುತ ಈ ವರ್ಷದ ನೀಟ್‌ ಪಿಜಿ ಬರೆಯಲು 1,74,886 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ. ಪರೀಕ್ಷೆ ಮುಗಿದೊಡನೆ ಇವರಲ್ಲಿ ಸ್ನಾತಕೋತ್ತರ ಪದವಿಗೆ ಆಯ್ಕೆಯಾಗದವರು ವಿವಿಧ ಆಸ್ಪತ್ರೆಗಳಲ್ಲಿ ಜೂನಿಯರ್‌ ರೆಸಿಡೆಂಟ್‌ಗಳಾಗಿ ಸೇರಿಕೊಳ್ಳುತ್ತಾರೆ. ಆದರೆ ಪ್ರಸ್ತುತ ನೀಟ್‌ ಪಿಜಿ ಮುಂದೂಡಿಕೆ ಯಾಗಿರುವುದರಿಂದ ಇವರು ಪರೀಕ್ಷಾ ಸಿದ್ಧತೆಯಲ್ಲೇ ಮುಳುಗಿದ್ದು, ಆಸ್ಪತ್ರೆಯಲ್ಲಿ ಸೇವೆ ಒದಗಿಸುವ ಸಾಧ್ಯತೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next