Advertisement

ವಜ್ರಮಹೋತ್ಸವ: ಉಳ್ಳಾಲ ಬೀಚ್‌ ಉತ್ಸವ ಸಂಭ್ರಮ

01:25 PM Feb 12, 2018 | Team Udayavani |

ಉಳ್ಳಾಲ: ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ, ಬ್ರದರ್ಸ್‌ ನ್ಪೋರ್ಟ್ಸ್ ಕ್ಲಬ್‌ ಮತ್ತು ಬ್ರದರ್ಸ್‌ ಯುವಕ ಮಂಡಲದ ವಜ್ರ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದ ಒಂದು ಅಂಗವಾಗಿ ಉಳ್ಳಾಲದಲ್ಲಿ ಬೀಚ್‌ ಉತ್ಸವ ರವಿವಾರ ಸಂಭ್ರಮದಿಂದ ನಡೆಯಿತು.

Advertisement

ಬೀಚ್‌ ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಸ್ಪರ್ಧಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಮುದ್ರದಲ್ಲಿ ಈಜು ಸ್ಪರ್ಧೆ, ಬಲೆ ಬೀಸುವ ಸ್ಪರ್ಧೆ, ತ್ರೋಬಾಲ್‌, ದೋಣಿ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ತೊಡಗಿಸಿಕೊಂಡರೆ, ಸ್ಪೀಡ್‌ ಬೋಟ್‌ ಜನರನ್ನು ರಂಜಿಸಿತು.

ಮರಳು ಶಿಲ್ಪದಲ್ಲಿ ಅಬ್ಬಕ್ಕ
ಬೀಚ್‌ ಉತ್ಸವದ ಅಂಗವಾಗಿ ಕಲಾವಿದರಾದ ಹರೀಶ್‌ ಆಚಾರ್ಯ, ಪ್ರಸಾದ್‌ ಮೂಲ್ಯ, ಅಯ್ಯಪ್ಪ ಮತ್ತು ಪ್ರೇಮ್‌ ಕುಲಾಲ್‌ ಮರಳಿನಲ್ಲಿ ಅಬ್ಬಕ್ಕನ ಶಿಲ್ಪವನ್ನು ರಚಿಸಿ ಮನಸೆಳೆದರು.

ದಣಿ ಸ್ಪರ್ಧೆಗೆ ಮೊಗವೀರ ಸಮಾಜದ ಹಿರಿಯ ಮುಖಂಡ ವಿಠಲ ಪುತ್ರನ್‌ ಚಾಲನೆ ನೀಡಿದರು. ಬಲೆ ಬೀಸಿ ಮೀನು
ಹಿಡಿಯುವ ಸ್ಪರ್ಧೆಗೆ ಮೊಗವೀರ ಹಿ.ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ರಾಮದಾಸ ಅಮೀನ್‌ ಚಾಲನೆ ನೀಡಿದರು.

ತ್ರೋಬಾಲ್‌ ಪಂದ್ಯಾಟಕ್ಕೆ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್‌ ಉಳ್ಳಾಲ್‌ ಚಾಲನೆ ನೀಡಿದರು. ಪಣಂಬೂರು ಬೀಚ್‌ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯತೀಶ್‌ ಬೈಕಂಪಾಡಿ ಸಹಿತ ವಜ್ರಮಹೋತ್ಸವದ ಹಾಗೂ ಮೊಗವೀರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next