Advertisement

ಬಿಜೆಪಿ-ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ

02:41 PM Jan 08, 2018 | |

ತಾಳಿಕೋಟೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಆಡಳಿತಗಾರರಿಗೆ ಸಂವಿಧಾನವೇ ಧರ್ಮ ಗ್ರಂಥವಾಗಿದೆ. ಹಿಂದೂ-ಮುಸ್ಲಿಂ, ಕ್ರೈಸ್ತ್, ಸೀಖ್‌ ಅವರವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದನ್ನು ಕೋಮುವಾದಿತ ಮೂಡಿಸಲು ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಕಾಂಗ್ರೆಸ್‌-ಬಿಜೆಪಿ ಹವಣಿಸುತ್ತಿವೆ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪದ ಸಮಯದಲ್ಲಿ ಕರಾವಳಿ ಭಾಗದಲ್ಲಿ ಎರಡೂ ಧರ್ಮದ ಯುವಕರ ಕೊಲೆಗಳು ಹೆಚ್ಚುತ್ತಿರುವುದು ಖಂಡನೀಯ. ಒಂದು ದಿನ ಹಿಂದೂ ಯುವಕನ ಮೇಲೆ ಹಲ್ಲೆ ಕೊಲೆ ಯಾಗುತ್ತಿದೆ. ಮತ್ತೂಂದು ದಿನ ಮುಸ್ಲಿಂ ಯುವಕನ
ಮೇಲೆ ಹಲ್ಲೆ ಕೊಲೆಯಾಗುತ್ತದೆ. ಈ ರೀತಿ ರಾಜಕಾರಣವನ್ನು ಜನ ಉಗ್ರವಾಗಿ ಖಂಡಿಸುತ್ತಾರೆ ಎಂದರು.

ಜನರಿಗೆ ಬೇಕಾಗಿರುವದು ಅಭಿವೃದ್ಧಿ. ಅದನ್ನು ಮಾಡದೆ ಎರಡೂ ರಾಷ್ಟ್ರೀಯ ಪಕ್ಷಗಳು ಕರಾವಳಿ ಭಾಗದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚುವಂತೆ ಮಾಡುತ್ತಿವೆ. ಬಿಜೆಪಿಯ ಪರಿವರ್ತನಾ ಯಾತ್ರೆ, ಕಾಂಗ್ರೆಸ್‌ ಸಾಧನಾ ಸಮಾವೇಶ ಮಾಡುತ್ತಿವೆ. ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳಲಾಗದೇ ಯಾತ್ರೆ ನಡೆಸಿದ್ದರೆ, ಕಾಂಗ್ರೆಸ್‌ನವರು ಉಕಕ್ಕೆ ಶೂನ್ಯ ಸಾಧನೆಗೈದು ಸಾಧನಾ ಸಮಾವೇಶ ಮಾಡುತ್ತಿದ್ದಾರೆಂದು ವಾಗ್ಧಾಳಿ ನಡೆಸಿದರು.

ಕುಮಾರಸ್ವಾಮಿಯವರ ವಿಕಾಸಯಾತ್ರೆ ಬಿಟ್ಟರೆ ಉಳಿದೆಲ್ಲ ಪಕ್ಷಗಳ ನಾಯಕರ ಮಾತುಗಳು ಅಭಿವೃದ್ಧಿಗೆ ವಿರುದ್ಧವಾಗಿವೆ. ಇದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ನೀತಿ ಮತ್ತು ನಿಲುವುಗಳ ವಿಚಾರಗಳನ್ನು ಜನ ತಿರಸ್ಕಾರ ಮಾಡಿ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ಕೊಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕಕ್ಕಾದ ಅನ್ಯಾಯಗಳು, ಜಲ್ವಂತ ಸಮಸ್ಯೆಗಳ ಪರಿಹಾರ ಕುರಿತು ಜನರಿಗೆ ಜಾಗೃತಿ ಮೂಡಿಸಿ ಮುಂದಿನ ದಿನಗಳಲ್ಲಿ ಸರಿಪಡಿಸುವಂತಹ ಕಾರ್ಯಕ್ಕಾಗಿ ಪ್ರಾದೇಶಿಕ ಪಕ್ಷ ಗಟ್ಟಿಗೊಳಿಸಲು ಉತ್ತರ ಕರ್ನಾಟಕ ಐಟಿ ಸೇಲ್‌ (ಸಾಮಾಜಿಕ ಜಾಲತಾಣ) ನೇಮಕ ಮಾಡಿದ್ದೇವೆ.
ಇದಕ್ಕೆ ಬೆಂಗಳೂರಿನ ಸಾವಿರಾರು ಸಾಫ್ಟವೇರ್‌ ಎಂಜಿನಿಯರ್‌ ಗಳು ಫಲಾಪೇಕ್ಷವಿಲ್ಲದೇ ಮುಂದೆ ಬಂದಿದ್ದಾರೆ. ವೆಬ್‌ಸೈಟ್‌, ಟ್ವಿಟರ್‌, ಫೇಸ್‌ಬುಕ್‌, ಯುಟ್ಯೂಬ್‌ ಮೂಲಕ ಉಕ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

Advertisement

ವೆಬ್‌ಸೈಟ್‌ ಮೂಲಕ ಹೋದರೆ ಉತ್ತರ ಕರ್ನಾಟಕ ಸಮಗ್ರ ಚಿತ್ರಣ ಕಾಣಲಿದೆ. ಪ್ರತಿ ಕ್ಷೇತ್ರವನ್ನು 5 ಜನರ ಟಿಮ್‌ ಈ ಕಾರ್ಯ ಮಾಡಲಿದೆ. ಉರ್ದು, ಇಂಗ್ಲಿಷ್‌, ಹಿಂದಿ, ಕನ್ನಡ ಭಾಷೆಗಳಲ್ಲಿ ಒಳಗೊಂಡಿರುತ್ತವೆ. ಮುದ್ದೇಬಿಹಾಳ ಕ್ಷೇತ್ರವನ್ನು ಈರಣ್ಣ ಹಿರೇಮಠ, ಮುತ್ತು ಪತ್ತಾರ, ಹರೀಶ ಬಡಿಗೇರ, ಶರಣು ನಂದಿಕೋಲಮಠ, ಮಲ್ಲನಗೌಡ ಅಸ್ಕಿ ನಿರ್ವಹಿಸಲಿದ್ದಾರೆಂದರು. ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಸಂಗನಗೌಡ
ಹೆಗರಡ್ಡಿ, ಎಪಿಎಂಸಿ ಸದಸ್ಯ ಬಿಜ್ಜಾನಲಿ ನೀರಲಗಿ, ತಾಪಂ ಸದಸ್ಯ ಬಸನಗೌಡ ಬಿರಾದಾರ, ವಿಠ್ಠಲ ಮೋಹಿತೆ, ಸನಾ ಕೆಂಭಾವಿ, ವಾಸು ಹೆಬಸೂರ, ಸುನೀಲ ಕಟ್ಟಿಮನಿ ಇದ್ದರು.

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಜೆಡಿಎಸ್‌ ಪ್ರಾದೇಶಿಕ ಪಕ್ಷ ಬೆಂಬಲಿಸಲು ಮಿಸ್ಡ್ಕಾಲ್‌ ಅಭಿಯಾನ ಪ್ರಾರಂಭಗೊಳ್ಳಲಿದೆ. ಮೋ.ನಂ. 8882331144 ಮಿಸ್ಡ್ಕಾಲ್‌ ಗೆ ಜೋಡಿಸಲಾಗಿದ್ದು ಕಾಲ್‌ ಮಾಡಿದವರಿಗೆ ಅಭಿನಂದನಾ ಸಂದೇಶ ಬರಲಿದೆ.
ಎ.ಎಸ್‌. ಪಾಟೀಲ (ನಡಹಳ್ಳಿ)

Advertisement

Udayavani is now on Telegram. Click here to join our channel and stay updated with the latest news.

Next