ಮಂಗಳೂರು/ ಉಡುಪಿ: ಕರಾವಳಿಯ ಕ್ರೈಸ್ತರು ಸೋಮವಾರ ರಾತ್ರಿ ಚರ್ಚ್‌ಗಳಲ್ಲಿ ಪರಮ ಪ್ರಸಾದದ ಆರಾಧನೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿ ಬಲಿ ಪೂಜೆಯಲ್ಲಿ ಪಾಲುಗೊಂಡು ಹೊಸ ವರ್ಷವನ್ನು ಸ್ವಾಗತಿಸಿದರು.
ಪರಮ ಪ್ರಸಾದದ ಆರಾಧನೆಯ ವೇಳೆ ಗತ ವರ್ಷದಲ್ಲಿ ದೇವರು ತೋರಿದ ಕೃಪೆ ಮತ್ತು ಆಶೀರ್ವಾದಗಳಿಗಾಗಿ ಕೃತಜ್ಞತೆ ಸಲ್ಲಿಸಿದರು ಹಾಗೂ ಹೊಸ ವರ್ಷವು ಶುಭವನ್ನು ತರಲಿ ಎಂದು ಪ್ರಾರ್ಥಿಸಿದರು. ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.
ಮಂಗಳೂರಿನ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ ಸಲ್ಡಾನ್ಹಾ ಅವರು ಕೊಡಿಯಾಲಬೈಲ್‌ನ ಬಿಷಪ್ಸ್ ಹೌಸ್ ಚಾಪೆಲ್‌ನಲ್ಲಿ ನಡೆದ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಉಡುಪಿಯಲ್ಲಿ ಬಿಷಪ್ ರೈ| ರೆ| ಡಾ| ಜೆರಾಲ್ಡ ಐಸಾಕ್ ಲೋಬೊ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಬಲಿಪೂಜೆ ಅರ್ಪಿಸಿದರು.
ಧರ್ಮ ಪ್ರಾಂತದಾದ್ಯಂತ ಇರುವ ವಿವಿಧ ಚರ್ಚ್‌ಗಳಲ್ಲಿ ಹೊಸ ವರ್ಷಾಚರಣೆಯ ಅಂಗವಾಗಿ ಪರಮ ಪ್ರಸಾದದ ಆರಾಧನೆ ಮತ್ತು ಬಲಿಪೂಜೆ ನಡೆಯಿತು. ಮಂಗಳೂರಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಧರ್ಮ ಪ್ರಾಂತದ ಗ್ಲಾಡ್‌ಸಂ ಸೆಮಿನರಿಯ ರೆಕ್ಟರ್ ಫಾ| ಅನಿಲ್ ಫೆರ್ನಾಂಡಿಸ್ ಬಲಿಪೂಜೆಯ ಮುಖ್ಯ ಗುರುಗಳಾಗಿದ್ದರು. ಕೆಥೆಡ್ರಲ್‌ನ ರೆಕ್ಟರ್ ಫಾ| ಜೆ.ಬಿ. ಕ್ರಾಸ್ತಾ ಮತ್ತು ಇತರ ಗುರುಗಳು ಇದ್ದರು.
ಉಡುಪಿಯಲ್ಲಿ ಇದೇ ವೇಳೆ ಧರ್ಮಾಧ್ಯಕ್ಷರು ಯುವಜನರ ವರುಷಕ್ಕೆ ಧರ್ಮಪ್ರಾಂತದ ಮಟ್ಟದಲ್ಲಿ ಚಾಲನೆ ನೀಡಿದರು. ಮಿಲಾಗ್ರಿಸ್ ಕೆಥೆಡ್ರಲ್ ರೆಕ್ಟರ್ ವಂ| ಡಾ| ಲೊರೇನ್ಸ್ ಡಿ’ಸೋಜಾ, ಸಹಾಯಕ ಧರ್ಮಗುರು ವಂ| ಕ್ಯಾನ್ಯೂಟ್ ನೊರೋನ್ಹಾ, ವಂ| ಲ್ಯಾನ್ಸಿ ಫೆರ್ನಾಂಡಿಸ್, ವಂ| ಜೋಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.