Advertisement

ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

09:35 PM Jan 01, 2020 | Lakshmi GovindaRaj |

ಗುಂಡ್ಲುಪೇಟೆ: ಹೊಸ ವರ್ಷದ ಪ್ರಯುಕ್ತ ಬುಧವಾರ ನಾಡಿನ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ಹುಲುಗಿನ ಮುರಡಿ ವೆಂಟಕರಮಣಸ್ವಾಮಿ ಬೆಟ್ಟ ಸೇರಿದಂತೆ ವಿವಿಧ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಪಟ್ಟಣದ ಶ್ರೀರಾಮೇಶ್ವರ ದೇಗುಲ, ವಿಜಯ ನಾರಾಯಣ, ಆಂಜನೇಯ ಸ್ವಾಮಿ, ಬಲಮುರಿ ಗಣಪತಿ ದೇವಸ್ಥಾನ, ಸರ್ವಶಕ್ತಿ ಸಿದ್ಧಿವಿನಾಯಕ ದೇಗುಲ, ಮಹದೇಶ್ವರ ದೇವಸ್ಥಾನ ಹಾಗೂ ಅಯ್ಯಪ್ಪ ದೇವಸ್ಥಾನ ಸೇರಿದಂತೆ ತಾಲೂಕಿನ ಸ್ಕಂದಗಿರಿ ಪಾರ್ವತಾಂಭಾ ದೇವಸ್ಥಾನ, ತ್ರಿಯಂಭಕೇಶ್ವರ ದೇವಸ್ಥಾನ, ಬೆರಟಹಳ್ಳಿ ಅಕ್ಷಯ ಮಹದೇಶ್ವರ ದೇವಸ್ಥಾನ, ಕೆಬ್ಬೆಕಟ್ಟೆ ಶನೇಶ್ವರ ದೇವಸ್ಥಾನ, ದುಂದಾಸನಪುರ ಮಲೆ ಮಹದೇಶ್ವರ ಹಾಗೂ ತಾಳವಾಡಿ ಪಿರ್ಕಾಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನ ದೇವಸ್ಥಾನಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸಿದರು.

ಬೆಟ್ಟಕ್ಕೆ ಭಕ್ತರ ದಂಡು: ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪಟ್ಟಣದ ಸಾರಿಗೆ ಡಿಪೋದಿಂದ 25 ಬಸ್‌ಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ಊಟಿ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದರು. ಬೆರಟಹಳ್ಳಿಯಲ್ಲಿನ ಗ್ರಾಮಸ್ಥರು ಅಕ್ಷಯ ಮಹದೇಶ್ವರ ದೇಗುಲದಲ್ಲಿ ಆರಾಧನೆ ನಡೆಸಿದರು. ಅಲ್ಲದೆ, ಇಂಗಲವಾಡಿ, ಮಲ್ಲಯ್ಯನಪುರ ಮುಂತಾದ ಗ್ರಾಮಗಳ ಮಹದೇಶ್ವರ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಪ್ರವಾಸಿಗರು ಇಳಿಮುಖ: ಬಂಡೀಪುರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಹೊಸ ವರ್ಷದಂದು ಪ್ರವಾಸಿಗರ ಸಂಖ್ಯೆ ತುಸು ಕಡಿಮೆಯಿತ್ತು. ಸುತ್ತಮುತ್ತಲ ರೆಸಾರ್ಟ್‌ಗಳಲ್ಲಿ ಉಳಿದಿದ್ದ ಪ್ರವಾಸಿಗರು ಆಗಮಿಸಿದ್ದರು. ರೆಸಾರ್ಟ್‌ಗಳಲ್ಲಿ ಅಬ್ಬರದ ಸಂಗೀತ ಹಾಗೂ ಧ್ವನಿ ವರ್ಧಕ ಬಳಕೆಗೆ ಕಡಿವಾಣ ಹಾಕಿದ್ದರಿಂದ ಕೆಲವೇ ಪ್ರವಾಸಿಗಳು ಮಾತ್ರ ಸಫಾರಿಗೆ ಆಗಮಿಸಿದ್ದರು. ಇದರ ಪರಿಣಾಮ ಸಫಾರಿಗೆ ತೆರಳಲು ಟಿಕೆಟ್‌ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next