Advertisement

ಆನೆಗೊಂದಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ವಿಶೇಷ ನಮನ

12:09 PM Oct 01, 2019 | keerthan |

ಗಂಗಾವತಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ನಿಮಿತ್ತ ತಾಲೂಕಿನ ಆನೆಗೊಂದಿ ಯಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ. ಗಾಂಧೀಜಿಯವರ 150ನೇ ಜನ್ಮದಿನ ಜನಮಾನಸದಲ್ಲಿ ಉಳಿಯುವಂತಾಗಲು ಗ್ರಾಮ ಪಂಚಾಯಿತಿ ವತಿಯಿಂದ ಹಲವು ವಿಧಾಯಕ ಕಾರ್ಯಗಳು ಆಯೋಜನೆ ಮಾಡಲಾಗಿದೆ.

Advertisement

ಇಡೀ ಗ್ರಾಮದಲ್ಲಿ ಮನೆಮನೆಯ ಗೋಡೆಯ ಮೇಲೆ ಗಾಂಧೀಜಿಯವರ ಹೇಳಿಕೆ ಸಹಿತ ಗಾಂಧೀಜಿಯವರ ಭಾವಚಿತ್ರ ಚಿತ್ರಿಸಲಾಗಿದೆ. ದಂಡಿ ಉಪ್ಪಿನ ಸತ್ಯಾಗ್ರಹ, ಆಪ್ರೀಕಾದಲ್ಲಿ ರೈಲ್ವೆ ಸೇರಿ ಸಾರ್ವತ್ರಿಕ ಸ್ಥಳದಲ್ಲಿ ಜನಾಂಗೀಯ ವರ್ಣಭೇದ ನೀತಿಭೇದಭಾವ ವಿರುದ್ದ ಹೋರಾಟ ನಡೆಸಿದ್ದರಿಂದ ಅಲ್ಲಿಯ ಅಧಿಕಾರಿಗಳು ರೈಲಿನಿಂದ ಕೆಳಗೆ ದೂಡಿದ್ದರು.ಇದನ್ನು ಪ್ರತಿಭಟನೆ ನಡೆಸಿದ್ದರು. ಬ್ರಿಟಿಷ್ ಸರಕಾರ ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದರಿಂದ ಇದರ ವಿರುದ್ದ ದಂಡಿಯ ವರೆಗೆ ಪಾದಯಾತ್ರೆ ಮಾಡಿ ವಿರೋಧಿಸಿದರು. ಜಾತಿ ಅಸ್ಪೃಶ್ಯತೆ ವಿರುದ್ದ ಹೋರಾಟ, ದಲಿತರ ದೇವಾಲಯ ಪ್ರವೇಶ ಹೀಗೆ ಹತ್ತು ಹಲವು ಹೋರಾಟ ನಡೆಸಿ ಜಾಗೃತಿ ಮೂಡಿಸಿದ ಚಿತ್ರಗಳನ್ನು ಗ್ರಾಮದ ಪ್ರತಿ ಮನೆಯ ಗೋಡೆ ಮೇಲೆ ಬರೆಸಲಾಗಿದೆ.

ಗಾಂಧೀಜಿಯವರ ಮೆಚ್ಚಿನ ಸ್ವಚ್ಚತಾ ಕುರಿತು ಜಾಗೃತಿ ಮೂಡಿಸಲು ಗ್ರಾ.ಪಂ ಆಡಳಿತ ಮಂಡಳಿಯವರು ರಾಜವಂಶದವರು ಗ್ರಾಮಸ್ಥರು ತಾ.ಪಂ ಸದಸ್ಯರು ಸೇರಿ ಗ್ರಾಮದ ರಸ್ತೆಯಲ್ಲಿ ಕಸಗೂಡಿಸಿದರು. ಗ್ರಾಮದಲ್ಲಿರುವ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಮಹಾತ್ಮ ಗಾಂಧಿಯವರ ಜೀವನ ಆಧರಿಸಿದ ಸಿನೆಮಾ ಪ್ರದರ್ಶನ ಮಾಡಲಾಗಿದೆ.

ಅಕ್ಟೋಬರ್ 02 ರಂದು ಗ್ರಾಮದಲ್ಲಿ ಗಾಂಧೀಜಿಯವರ ಭಾವಚಿತ್ರದ ಮೆರವಣಿಗೆ ವೇಷಭೂಷಣ ಗಳೊಂದಿಗೆ ಗ್ರಾಮದಲ್ಲಿ ಸಂಚಾರ ಮಾಡಿ ವೈಯಕ್ತಿಕ, ಶೌಚಾಲಯ, ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next