BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್‌ ಜಾರಕಿಹೊಳಿ; ಬಿವೈವಿ ಆಕ್ರೋಶ

ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಜಾರಕಿಹೊಳಿ ಟೀಕೆ, ನಾಲಿಗೆ ಬಿಗಿ ಹಿಡಿದು ಮಾತಾಡಿ: ಬಿಜೆಪಿ ರಾಜ್ಯಾಧ್ಯಕ್ಷ

Team Udayavani, Jan 16, 2025, 7:43 AM IST

Ramesh-BYV

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಹೋರಾಟ ನಡೆಸಿದ್ದ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ವಿರುದ್ಧವೂ ಪತ್ರಿಕಾಗೋಷ್ಠಿಯಲ್ಲಿ ಅಪಸ್ವರವೆತ್ತಿದ್ದಾರೆ.

ಯಡಿಯೂರಪ್ಪ ಬಗ್ಗೆ ಅಪಾರ ಗೌರವವಿದೆ. ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ. ಆದರೆ ಯಾಕಾಗಿ ಎಂಬುದನ್ನು ಸ್ಪಷ್ಟಪಡಿಸಬೇಕು. ಪಕ್ಷವನ್ನು ಬ್ಲಾ ಕ್‌ಮೇಲ್‌ ಮಾಡಬಾರದು. ವಿಜಯೇಂದ್ರ ಬೆನ್ನು ಹತ್ತಿದರೆ ನೀವೂ ಹಾಳಾಗುತ್ತೀರಿ. ಮಗನಾಗಿ ನೋಡಬೇಡಿ, ಸೋತಿರುವ ಅಧ್ಯಕ್ಷ ಎಂಬುದಾಗಿ ನೋಡಿ ಎಂದೂ ಸಲಹೆ ನೀಡಿದರು.

ಯಡಿಯೂರಪ್ಪನವರೇ ನಿಮಗೆ ವಯಸ್ಸಾಗಿದೆ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕಕ್ಕೆ ಸಹಕಾರ ಕೊಡಿ. ಮಗನ ಸ್ಥಾನ
ಭದ್ರಪಡಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದೀರಾ ಅಥವಾ ಪಕ್ಷ ಭದ್ರಗೊಳಿಸಲು ಮಾಡುತ್ತಿದ್ದೀರೋ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.

ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ವರಿಷ್ಠರು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿ ದ್ದೇವೆ. ರಾಜ್ಯದಲ್ಲಿ ವಕ್ಫ್‌ ವಿರುದ್ಧ 3 ಹಂತದ ಹೋರಾಟ ಮುಗಿದಿದೆ. ನಾಲ್ಕನೇ ಹಂತದ ಹೋರಾಟಕ್ಕಾಗಿ ಬೆಂಗಳೂರಿನಲ್ಲಿ ಸೇರಿ ಚರ್ಚಿಸುತ್ತೇವೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರಲು ಕೆಲಸ ಮಾಡುತ್ತಿದ್ದೇವೆ ಎಂದರು.

ನಾಲಿಗೆ ಬಿಗಿ ಹಿಡಿದು ಮಾತಾಡಿ: ಬಿ.ವೈ.ವಿಜಯೇಂದ್ರ
ಕೊಪ್ಪಳ: ಬಿ.ಎಸ್‌.ಯಡಿಯೂರಪ್ಪ ಹಳ್ಳಿಹಳ್ಳಿ ಯಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ. ಹೊಸದಾಗಿ ಪಕ್ಷಕ್ಕೆ ಬಂದಿರುವ ಶಾಸಕ ರಮೇಶ ಜಾರಕಿಹೊಳಿ ಎಚ್ಚರಿಕೆಯಿಂದ ಮಾತನಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ ಬಾಯಿ ಹಿಡಿತದಲ್ಲಿಟ್ಟು ಮಾತನಾಡಬೇಕು. ಸಮಸ್ಯೆ ಇದ್ದರೆ ವರಿಷ್ಠರ ಜತೆ ಮಾತನಾಡಲಿ, ಬಹಿರಂಗ ಹೇಳಿಕೆ ಸರಿಯಲ್ಲ. ಈ ರೀತಿ ಮಾತನಾಡಿದರೆ ಜನರು ಸುಮ್ಮನೆ ಬಿಡೋದಿಲ್ಲ. ಜಾರಕಿಹೊಳಿ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭ ಬಂದಿದೆ. ಅನುದಾನ ಸಿಗದೆ ಶಾಸಕರಿಗೆ ಕ್ಷೇತ್ರದಲ್ಲಿ ಓಡಾಡಲು ಆಗದ ಸ್ಥಿತಿಯಿದೆ ಎಂದರು.

ಟಾಪ್ ನ್ಯೂಸ್

Crickter-Mansoor

Mulki: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್‌ ಸಾವು

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Alankaru

Alankaru: ಅಂತಾರಾಜ್ಯ ಕಳ್ಳನ ಬಂಧನ; ಮಹಜರು ಪ್ರಕ್ರಿಯೆ

1-a-www

Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

BJP FLAG

BJP; ಭಿನ್ನರಿಗೆ ವರಿಷ್ಠರ ಬುಲಾವ್‌: ರೆಡ್ಡಿ,ರಾಮುಲುಗೂ ಆಹ್ವಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP FLAG

BJP; ಭಿನ್ನರಿಗೆ ವರಿಷ್ಠರ ಬುಲಾವ್‌: ರೆಡ್ಡಿ,ರಾಮುಲುಗೂ ಆಹ್ವಾನ

Ramalinga reddy 2

ಶ್ರದ್ಧೆ ಇದ್ದವರಿಗೆ ಮಾತ್ರ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ: ಸಚಿವರಿಗೆ ಮನವಿ

krishna bhaire

ಕಂದಾಯ ಸೈಟ್‌, ಮನೆಗೆ ಬಿ-ಖಾತೆ ರೀತಿ ದಾಖಲೆ

BYV

MUDA Case: ಡಿ.ಕೆ.ಶಿವಕುಮಾರ್‌ ಮುಖದಲ್ಲಿ ಮಂದಹಾಸ: ಬಿ.ವೈ.ವಿಜಯೇಂದ್ರ ವ್ಯಂಗ್ಯ

1-aa-ambe

ಪತ್ರಿಕಾ ವಿತರಕರು ಅಪಘಾತ ವಿಮೆಗೆ ನೋಂದಣಿ ಮಾಡಿ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Crickter-Mansoor

Mulki: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್‌ ಸಾವು

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Alankaru

Alankaru: ಅಂತಾರಾಜ್ಯ ಕಳ್ಳನ ಬಂಧನ; ಮಹಜರು ಪ್ರಕ್ರಿಯೆ

1-a-www

Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.