Advertisement

Special Trains: ಬೆಂಗಳೂರು -ಮಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು

04:23 AM Dec 22, 2024 | Team Udayavani |

ಮಂಗಳೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯಿಂದ ಯಶವಂತಪುರ – ಮಂಗಳೂರು ಜಂಕ್ಷನ್‌ – ಯಶವಂತಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಓಡಾಟ ನಡೆಸಲಿದೆ.

Advertisement

ನಂ.06505 ಯಶವಂತಪುರ – ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಡಿ.23 ಮತ್ತು 27ರಂದು (ಸೋಮವಾರ- ಶುಕ್ರವಾರ) ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದೆ. 1.03ಕ್ಕೆ ಕುಣಿಗಲ್‌, 2.18ಕ್ಕೆ ಚನ್ನರಾಯಪಟ್ಟಣ, ಮುಂಜಾನೆ 3.50ಕ್ಕೆ ಹಾಸನ, 4.50ಕ್ಕೆ ಸಕಲೇಶಪುರ, 8.25ಕ್ಕೆ ಸುಬ್ರಹ್ಮಣ್ಯ ರೋಡ್‌, 9.23ಕ್ಕೆ ಕಬಕ ಪುತ್ತೂರು, 9.53ಕ್ಕೆ ಬಂಟ್ವಾಳ, 11.10ಕ್ಕೆ ಪಡೀಲ್‌ 11.45 ಮಂಗಳೂರು ಜಂಕ್ಷನ್‌ ತಲುಪಲಿದೆ.

ನಂ.06506 ಮಂಗಳೂರು ಜಂಕ್ಷನ್‌- ಯಶವಂತಪುರ ಎಕ್ಸ್‌ಪ್ರೆಸ್‌ ವಿಶೇಷ ರೈಲು, ಡಿ.24 ಮತ್ತು 28ರಂದು (ಗುರುವಾರ ಮತ್ತು ಶನಿವಾರ) ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊಡಲಿದ್ದು, 1.30ಕ್ಕೆ ಪಡೀಲ್‌, 1.28ಕ್ಕೆ ಬಂಟ್ವಾಳ, 1.58ಕ್ಕೆ ಕಬಕ ಪುತ್ತೂರು, 2.35ಕ್ಕೆ ಸುಬ್ರಹ್ಮಣ್ಯ ರೋಡ್‌, ಸಂಜೆ 5.05ಕ್ಕೆ ಸಕಲೇಶಪುರ, 6 ಗಂಟೆಗೆ ಹಾಸನ, 6.38ಕ್ಕೆ ಚನ್ನರಾಯಪಟ್ಟಣ, 7.43ಕ್ಕೆ ಕುಣಿಗಲ್‌, ರಾತ್ರಿ 10.30ಕ್ಕೆ ಯಶವಂತಪುರ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next