Advertisement

ಮಂಗಳೂರು ಜಂಕ್ಷನ್‌ ವಿಶೇಷ ರೈಲು 

09:52 AM Dec 17, 2018 | Team Udayavani |

ಮಂಗಳೂರು: ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ಪ್ರಯುಕ್ತ ಮುಂಬಯಿ- ಮಂಗಳೂರು ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಬಾಂದ್ರಾ ಟರ್ಮಿನಸ್‌- ಮಂಗಳೂರು ಜಂಕ್ಷನ್‌ ಮಧ್ಯೆ ಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. 

Advertisement

ಬಾಂದ್ರಾ ಟರ್ಮಿನಸ್‌ನಿಂದ ಈ ರೈಲು (ನಂ. 09009) ಡಿ. 25 ಮತ್ತು ಜ. 1 (ಮಂಗಳವಾರ) ರಂದು 23.55ಕ್ಕೆ ಹೊರಟು ಮರು ದಿನ 19.45ಕ್ಕೆ ಮಂಗಳೂರಿಗೆ  ತಲಪುವುದು. 

ಮಂಗಳೂರು ಜಂಕ್ಷನ್‌ ನಿಲ್ದಾಣದಿಂದ ಈ ವಿಶೇಷ ರೈಲು (ನಂ. 09010) ಡಿ. 26 ಮತ್ತು ಜನವರಿ 2 ರಂದು (ಬುಧವಾರ) 23 ಗಂಟೆಗೆ ಹೊರಟು ಮರುದಿನ 19.30ಕ್ಕೆ ಬಾಂದ್ರಾ ಟರ್ಮಿನಸ್‌ ತಲಪುವುದು. 

ಈ ರೈಲಿಗೆ ಬೊರಿವಿಲಿ, ವಸಾಯ್‌ರೋಡ್‌, ಪನ್ವೇಲ್‌, ರೋಹಾ, ಖೇಡ್‌, ಸಂಗಮೇಶ್ವರ ರೋಡ್‌, ರತ್ನಗಿರಿ, ಕುಡಾಲ್‌, ಸಾವಂತವಾಡಿ ರೋಡ್‌, ಮಡಗಾಂವ್‌ ಜಂಕ್ಷನ್‌, ಕಾರವಾರ, ಕುಮಟಾ, ಭಟ್ಕಳ, ಮುಕಾಂಬಿಕಾ ರೋಡ್‌- ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ನಲ್ಲಿ ನಿಲುಗಡೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next