Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ” ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಸೂಪರ್ ಫಾಸ್ಟ್ ವಿಶೇಷ ಎಕ್ಸಪ್ರೆಸ್ ರೈಲ್ ಅನ್ನು ಏಕೆ ರದ್ದು ಮಾಡಿದ್ದಾರೆಂಬುದು ಗೊತ್ತಿಲ್ಲ. ಈ ಕುರಿತು ನೈಋತ್ಯ ರೈಲ್ವೆಯ ವಲಯ ಜಿಎಂ ಜೊತೆ ಮಾತನಾಡುತ್ತೇನೆ. ಪ್ರಯಾಣಿಕರ ಸ್ಪಂದನೆ ಚೆನ್ನಾಗಿದ್ದರೆ ಅದನ್ನು ಬಂದ್ ಮಾಡುವುದಕ್ಕೆ ಬಿಡುವುದಿಲ್ಲ” ಎಂದರು.
ಬೆಳಗಾವಿ ಮತ್ತು ಧಾರವಾಡ ನಡುವಿನ ರೈಲ್ವೆ ಲೈನ್ ಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಂಡು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದರೆ ತಕ್ಷಣ ಕೆಲಸ ಆರಂಭಿಸುತ್ತದೆ. ಅನುಮೋದನೆ ಪಡೆದ ಯಾವುದೇ ಯೋಜನೆಗೆ ಕೇಂದ್ರದಲ್ಲಿ ಹಣಕಾಸಿನ ಕೊರತೆ ಇಲ್ಲ. ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದಾಗಿದೆ. ಭೂಸ್ವಾಧೀನಕ್ಕೂ ದುಡ್ಡು ಕೊಡುವವರಿದ್ದೇವೆ. ರಾಜ್ಯ ಸರ್ಕಾರ ಯೋಜನೆಗೆ ಭೂಸ್ವಾಧೀನ ಮಾಡಿಕೊಟ್ಟರೆ ಬರುವ 3-4 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಬಹುದು ಎಂದು ಹೇಳಿದರು.