Advertisement
ಬಸಳೆ ಚಿಗುರು ತಂಬುಳಿಬೇಕಾಗುವ ಸಾಮಗ್ರಿ: ಒಂದು ಹಿಡಿ ಬಸಳೆ ಚಿಗುರು, ಜೀರಿಗೆ- 1 ಚಮಚ, ಸಣ್ಣ ತುಂಡು ಬೆಲ್ಲ, ಮಜ್ಜಿಗೆ- 3 ಸೌಟು (ಹುಳಿ ಇದ್ದರೆ ಕಡಿಮೆ ಸಾಕು), ಉಪ್ಪು ರುಚಿಗೆ, ಚೂರು ಬೆಣ್ಣೆ, ಹಸಿ ತೆಂಗಿನತುರಿ- 1 ಕಪ್. ಒಗ್ಗರಣೆಗೆ : ಮೆಣಸು, ಸಾಸಿವೆ, ಬೆಣ್ಣೆ ಚೂರು.
ಬೇಕಾಗುವ ಸಾಮಗ್ರಿ: ಬೇವಿನಸೊಪ್ಪು- 1 ಹಿಡಿ, ಜೀರಿಗೆ- 1 ಚಮಚ, ಒಳ್ಳೆ ಮೆಣಸು- 5 ಕಾಳು, ಹಸಿ ತೆಂಗಿನತುರಿ- 2 ಕಪ್, ಮಜ್ಜಿಗೆ- 2 ಸೌಟು, ಬೆಣ್ಣೆ- 1/2 ಚಮಚ, ಒಗ್ಗರಣೆಗೆ : ಒಣಮೆಣಸು, ಸಾಸಿವೆ, ಚೂರು ತುಪ್ಪ.
Related Articles
ಉಪ್ಪಿನಕಾಯಿ ಮಿಡಿ ತಂಬುಳಿ
Advertisement
ಬೇಕಾಗುವ ಸಾಮಗ್ರಿ: ಉಪ್ಪಿನಕಾಯಿ ಮಿಡಿ- 2, ತೆಂಗಿನತುರಿ- 1 ಕಪ್, ಮಜ್ಜಿಗೆ – 2 ಸೌಟು, ಒಗ್ಗರಣೆಗೆ : ಎಣ್ಣೆ , ಮೆಣಸು, ಸಾಸಿವೆ.ತಯಾರಿಸುವ ವಿಧಾನ: ಉಪ್ಪಿನಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ಮತ್ತು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣವನ್ನು ಮಜ್ಜಿಗೆ, ಬೇಕಿದ್ದರೆ ಸ್ವಲ್ಪ ಉಪ್ಪು , ನೀರು ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು. ಮೆಂತೆ ತಂಬುಳಿ
ಬೇಕಾಗುವ ಸಾಮಗ್ರಿ: ಮೆಂತೆ- 1 ಚಮಚ, ಸಣ್ಣ ತುಂಡು ಬೆಲ್ಲ, ಹುಳಿ ಮಜ್ಜಿಗೆ- 1 ಸೌಟು, ರುಚಿಗೆ ಉಪ್ಪು, ಚೂರು ಎಣ್ಣೆ ಅಥವಾ ಬೆಣ್ಣೆ. ತೆಂಗಿನತುರಿ- 1 ಕಪ್, ಕಾಳುಮೆಣಸು- 4 ಕಾಳು. ತಯಾರಿಸುವ ವಿಧಾನ: ಮೆಂತೆಗೆ ಚೂರು ಎಣ್ಣೆ ಅಥವಾ ಬೆಣ್ಣೆ ಹಾಕಿ ಪಟಪಟ ಶಬ್ದ ಕೇಳುವಷ್ಟು ಹುರಿದುಕೊಳ್ಳಬೇಕು. ಹುರಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಮಜ್ಜಿಗೆ ಉಪ್ಪು ಹಾಕಿ ನುಣ್ಣಗೆ ಬೀಸಬೇಕು. ಈ ಮಿಶ್ರಣಕ್ಕೆ ಬೆಲ್ಲ ತಕ್ಕಷ್ಟು ನೀರು ಸೇರಿಸಿ ಮೆಣಸು, ಸಾಸಿವೆ ಒಗ್ಗರಣೆ ಕೊಟ್ಟರೆ ಮೆಂತೆ ತಂಬುಳಿ ತಯಾರು.