Advertisement

ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ

04:53 PM May 10, 2018 | |

ಭೇರ್ಯ: ಅಂಗವಿಕಲರು ಮತಗಟ್ಟೆಗೆ ಆಗಮಿಸಿ, ಮತದಾನ ಮಾಡಲು ವಿಶೇಷ ವಾಗಿ ವೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣೆ ತಾಲೂಕು ನೋಡಲ್‌ ಅಧಿಕಾರಿ ಹಾಗೂ ತಾಪಂ ಇಒ ಲಕ್ಷ್ಮೀ ಮೋಹನ್‌ ತಿಳಿಸಿದರು.

Advertisement

ಸಮೀಪದ ನರಚನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮತದಾನ ಜಾಗೃತಿ ಜಾಥಾ ಅಭಿಯಾನ ನಡೆಸಿ ಮಾತನಾಡಿದ ಅವರು, ತಾಲೂಕಿನ 34 ಗ್ರಾಮ ಪಂಚಾಯಿತಿಯಲ್ಲಿ ಸುಮಾರು 2308 ವಿಶೇಷ ಚೇತನ ಮತದಾರರಿದ್ದಾರೆ. ಚುನಾವಣೆ ಆಯೋಗ ವಿಶೇಷ ಚೇತನರಿಗಾಗಿಯೇ ವಿಶೇಷವಾಗಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದೆ ಎಂದರು. 

ನೇರ ಪ್ರವೇಶ: ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 14-20 ವಿಶೇಷಚೇತನ ಮತದಾರರಿದ್ದು, ಇವರಿಗೆ ನಮ್ಮ ಗ್ರಾಮ ಪಂಚಾಯಿತಿಯ ಪಿಡಿಒಗಳು ವಿಶೇಷಚೇತನರ ಮನೆಗೆ ವೀಲ್‌ಚೇರ್‌ ಮೂಲಕ ತೆರಳಿ, ಮತಗಟ್ಟೆಗೆ ಕರೆತಂದು ನೇರ ಪ್ರವೇಶದಿಂದ ಮತದಾನ ಮಾಡಿಸಲಾಗುತ್ತದೆ. ವಿಶೇಷಚೇತನರಿಗೆ ಮತದಾನ ಮಾಡಿದ ಬಳಿಕ ಮಜ್ಜಿಗೆ, ತಂಪು ಪಾನೀಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು. 

ಮಹಿಳೆಯರ ಸರದಿ: ಈ ಬಾರಿಯ ಚುನಾವಣೆಯಲ್ಲಿ 70 ವರ್ಷದ ದಾಟಿದ ಹಿರಿಯ ನಾಗರಿಕರಿಗೆ ತಮ್ಮ ಮತದಾನದ
ಹಕ್ಕನ್ನು ಚಲಾಯಿಸಲು ನೇರ ಪ್ರವೇಶ ನೀಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಸರದಿ ಮಾಡಲಾಗಿದೆ. ಮತದಾರರು ಇದರ ಸದಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಯ ಎಂಟು ಗ್ರಾಮಗಳಲ್ಲಿಯೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘದ ಸದಸ್ಯರೊಂದಿಗೆ ತೆರಳಿ ಕಡ್ಡಾಯ ಮತದಾನ ಮಾಡಿ, ಭ್ರಷ್ಟ ಮುಕ್ತ ಶಾಸಕರನ್ನು ಆಯ್ಕೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಮಿತ್ರ, ಪಿಡಿಒ ಸಂತೋಷ್‌, ತಾಪಂ ಮೇಲ್ವಿಚಾರಕ
ಅಂಕನಹಳ್ಳಿ ಮಂಜುನಾಥ್‌, ಗ್ರಾಪಂ ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next