Advertisement
ಮಂಗಳೂರು ಕಮಿಷನರೆಟ್ ಸೇರಿದಂತೆ ಎರಡೂ ಜಿಲ್ಲೆಗಳಲ್ಲಿ ಕಳೆದ ವರ್ಷ (2022ರಲ್ಲಿ) 455 ಭೀಕರ ರಸ್ತೆ ಅಪಘಾತ ಗಳು ಸಂಭವಿಸಿ 486 ಮಂದಿ ಪ್ರಾಣ ಕಳೆದು ಕೊಂಡಿದ್ದರು.
Related Articles
Advertisement
ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿ ಕಾರಿ ವ್ಯಾಪ್ತಿಯಲ್ಲಿ 2021ರಲ್ಲಿ 134 ಭೀಕರ ಅಪಘಾತಗಳಲ್ಲಿ 146 ಮಂದಿ, 2020ರಲ್ಲಿ 101 ಭೀಕರ ಪ್ರಕರಣಗಳಲ್ಲಿ 109 ಮಂದಿ, 2019ರಲ್ಲಿ 126 ಭೀಕರ ಪ್ರಕರಣಗಳಲ್ಲಿ 154 ಮಂದಿ ಸಾವನ್ನಪ್ಪಿದ್ದಾರೆ.
ಭೀಕರ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದು ಕೊಂಡವರು ಒಂದೆಡೆಯಾದರೆ, ನಾನಾ ರೀತಿಯ ಇತರ ಸಾವಿರಾರು ಸಂಖ್ಯೆಯ ಅಪಘಾತ ಪ್ರಕರಣ ಗಳಲ್ಲಿ ಮೂಳೆ ಮುರಿತ, ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದವರ ಸಂಖ್ಯೆಯೂ ಸಾವಿರಾರು. ಮುಖ್ಯವಾಗಿ ವಾಹನ ಚಾಲನೆ ಸಂದರ್ಭ ತಮ್ಮ ಪ್ರಾಣದ ಜತೆ ಇತರರ ಜೀವದ ಬಗ್ಗೆಯೂ ಕಾಳಜಿ ವಹಿಸಬೇಕೆಂಬುದು ಸಾರ್ವಜನಿಕರ ಸಲಹೆ.
– ಸಂಚಾರ ನಿಯಮ ಉಲ್ಲಂಘನೆ- ನಿರ್ಲಕ್ಷ್ಯ
– ಅತಿ ವೇಗದ ಚಾಲನೆ
– ರಸ್ತೆಗಳಲ್ಲಿನ ಹೊಂಡ-ಗುಂಡಿಗಳು
– ಅವೈಜ್ಞಾನಿಕ ತಿರುವು
– ಸರ್ವೀಸ್ ರಸ್ತೆಗಳಿಲ್ಲದೇ ಏಕಮುಖ ಸಂಚಾರ
– ಹೆದ್ದಾರಿ, ರಸ್ತೆಗಳ ವಿಸ್ತರಣೆ ವಾಹನ ಚಾಲನೆ ಸಂದರ್ಭ ನಿರ್ಲಕ್ಷ್ಯ, ಅತಿವೇಗದಿಂದಾಗಿ ಅಪಘಾತಗಳಾಗಿ ಪ್ರಾಣಹಾನಿ ಆಗುತ್ತಿವೆ. ಇದಲ್ಲದೆ ಸಂಚಾರ ನಿಯಮಗಳ ಉಲ್ಲಂಘನೆ, ಅವೈಜ್ಞಾನಿಕ ರಸ್ತೆ ತಿರುವುಗಳು, ಹೊಂಡಗಳೂ ಕಾರಣವಾಗುತ್ತವೆ.
– ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು ಪೊಲೀಸ್ ಬಹುತೇಕ ಚತುಷcಕ್ರ ಹಾಗೂ ದ್ವಿಚಕ್ರ ವಾಹನಗಳ ಅಪಘಾತಕ್ಕೆ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಪ್ರಮುಖ ಕಾರಣ. ದ್ವಿಚಕ್ರ ವಾಹನಗಳ ಮಳೆಗಾಲದಲ್ಲಿ ಸ್ಕಿಡ್ ಆಗುತ್ತಿವೆ. ಆಗ ಹೆಲ್ಮೆಟ್ ಧರಿಸದಿದ್ದ ಕಾರಣಕ್ಕೆ ಪ್ರಾಣಹಾನಿ ಯಾಗಿರುವುದೇ ಅಧಿಕ.
– ಹೃಷಿಕೇಶ್ ಭಗವಾನ್ ಸೋನಾವಣೆ, ಪೊಲೀಸ್ ವರಿಷ್ಠಾಧಿಕಾರಿ, ದ.ಕ.