ಅದು 1983ರ ಕಾಲ. ವಿಧಾನ ಸಭೆ ಚುನಾವಣೆ ಕಾವು ಜೋರಾಗಿತ್ತು. ಕಾರ್ಯಕರ್ತರು ಹಾಗೂ ಜನರು ಮನೆಗೆ ಬಂದು ಮುಂದೆ ಮಾಡಿಕೊಂಡು ಪ್ರಚಾರಕ್ಕೆ ಕರೆ ದೊಯ್ಯುತ್ತಿದ್ದರು. ಈಗಿನ ಹಾಗೆ ಯಾವುದೇ ವಾಹನ ಸೌಕರ್ಯವಿರಲಿಲ್ಲ. ಕಾಲ್ನಡಿಗೆ ಯಲ್ಲೇ ಮನೆ-ಮನೆಗೆ ಹಾಗೂ ಬಡಾವಣೆಗಳಿಗೆ ತೆರಳ ಲಾಗುತ್ತಿತ್ತು. ಯಾವುದೇ ಆಡಂಬರದ ಮಾತುಗಳಿರಲಿಲ್ಲ. ವೈಭವದ ಪ್ರಚಾರವಿರಲಿಲ್ಲ. ಮುಖ್ಯವಾಗಿ ಟೀಕೆ- ಟಿಪ್ಪಣಿಗಳಿರಲಿಲ್ಲ…
ಪ್ರಚಾರ ಇಲ್ಲವೇ ಮತಯಾಚನೆಗೆ ಬರುತ್ತಿದ್ದವರು ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುತ್ತಿದ್ದರು. ಮಧ್ಯಾಹ್ನ ಈ ರೊಟ್ಟಿ ಬುತ್ತಿಯನ್ನು ಗಿಡದ ಕೆಳಗಡೆಯೋ ಇಲ್ಲವೇ ದೇವಸ್ಥಾನಗಳಲ್ಲಿ ಕುಳಿತು ಊಟ ಮಾಡುತ್ತಿದ್ದರು. ತಮ್ಮ ಜತೆಗೆ ಇನ್ನಿಬ್ಬರು ಊಟ ಮಾಡುವಷ್ಟು ಬುತ್ತಿ ತರುತ್ತಿದ್ದರು. ಇದನ್ನೆಲ್ಲ ನೋಡಿದಾಗ ಕುಟುಂಬದವರ ಜತೆಗೇ ಯಾವುದೋ ಕಾರ್ಯಕ್ರಮಕ್ಕೆ ಹೋದಂತೆ ಕಾಣು ತ್ತಿತ್ತು. ಊಟವಾದ ಅನಂತರ ಬಾವಿ ಹಾಗೂ ಬೋರವೆಲ್ ನೀರು ನೆಚ್ಚಿಕೊಳ್ಳಲಾಗುತ್ತಿತ್ತು.
ಇನ್ನು ಟಿಕೆಟ್ ನೀಡುವಾಗ ಹೈಕಮಾಂಡ್‌ಗೆ ಯಾವುದೇ ನಿರೀಕ್ಷೆಗಳಿರುತ್ತಿ ರಲಿಲ್ಲ. ನಿಲ್ಲುವ ಅಭ್ಯರ್ಥಿ ಆರ್ಥಿಕ ಸ್ಥಿತಿಗತಿ ಮಾತೇ ಬರುತ್ತಿರಲಿಲ್ಲ. ಕೆಲವು ಪ್ರಮುಖರು ಕ್ಷೇತ್ರಕ್ಕೆ ಬಂದು ಪ್ರಮುಖರ ಸಭೆ ಕರೆದು ಯಾರನ್ನು ನಿಲ್ಲಿಸಿದರೆ ಸೂಕ್ತ ಎಂಬ ಅಭಿಪ್ರಾಯ ಕ್ರೋಡೀಕರಿಸಿ 3 ಹೆಸರು ಗಳನ್ನು ಅಂತಿಮವಾಗಿ ಕಳುಹಿಸಿ ಕೊಡಲಾಗುತ್ತಿತ್ತು. ಯಾರು ಟಿಕೆಟ್ ಸಲುವಾಗಿ ದುಂಬಾಲು ಬೀಳುತ್ತಿರಲಿಲ್ಲ. ಕೊನೆಗೆ ಒಂದು ಹೆಸರನ್ನು ಅಂತಿಮಗೊಳಿಸಿ ತಿಳಿಸಲಾ ಗುತ್ತಿತ್ತು. ಟಿಕೆಟ್ ಘೋಷಣೆಯಾದವರು ಹಾಗೂ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಗ್ಗೂಡಿ ಮತದಾರರ ಬಳಿ ಹೋಗುತ್ತಿ ದ್ದೆವು. ಯಾರಿಗೇ ಟಿಕೆಟ್ ಕೊಟ್ಟರೂ ಮನಸ್ಸು ಸೈ ಎನಿಸು ತ್ತಿತ್ತು. ಟಿಕೆಟ್ ನೀಡುವಾಗ ಆಸ್ತಿ ಮಾನದಂಡವಾಗುತ್ತಿ ರಲಿಲ್ಲ. ಅವನು ಸಾಮಾನ್ಯವಾಗಿರಬೇಕು, ಸಾಮಾಜಿಕ ಕಾಳಜಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗು ವಂತಿರಬೇಕು ಎಂಬುದನ್ನು ಪ್ರಮುಖವಾಗಿ ಪರಿಗಣಿಸಲಾ ಗುತ್ತಿತ್ತು.ಪ್ರಚಾರವಂತೂ ಕಾಲ್ನಡಿಗೆಯಲ್ಲೇ ಇರುತ್ತಿತ್ತು. ಹಿರಿಯ ನಾಯಕರು ಬಂದರೆ ಮಾತ್ರ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗುತ್ತಿತ್ತು. ಪೋಸ್ಟರ್ ಮುದ್ರಿಸೋದು ಎಂದರೆ ದೊಡ್ಡ ಕೆಲಸವಾಗಿತ್ತು. ತಮ್ಮ ಚುನಾವಣ ಪ್ರಚಾರಕ್ಕೆ ಜಾರ್ಜ್ ಫೆರ್ನಾಂಡಿಸ್, ಶರದ್ ಯಾದವ್, ವಿ.ಪಿ.ಸಿಂಗ್, ರಾಮ ವಿಲಾಸ ಪಾಸ್ವಾನ್ ಸಹಿತ ಹಲವರು ಗಣ್ಯರು ಬಂದಿದ್ದರು. ಇನ್ನುಳಿದಂತೆ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ದೇವೇ ಗೌಡ ಹೀಗೆ ಅನೇಕರು ತಮ್ಮ ಪ್ರಚಾರಕ್ಕೆ ಆಗಮಿಸಿದ್ದರು. ಪ್ರಮುಖವಾಗಿ ಪ್ರಚಾರ ಕಾರ್ಯಕ್ರಮ ಮತ್ತು ಮತಯಾಚನೆ ವೇಳೆ ಇಲ್ಲವೇ ಪ್ರಚಾರದ ಯಾರ ಬಗ್ಗೆಯೂ ವೈಯಕ್ತಿಕ ಟೀಕೆ- ಟಿಪ್ಪಣಿಗಳು ಸಮೀಪ ಸುಳಿಯುತ್ತಿರಲಿಲ್ಲ. ಪ್ರಮುಖವಾಗಿ ಮತದಾರರೇ ಕಾರ್ಯಕರ್ತರಾಗುತ್ತಿದ್ದರು. ಒಟ್ಟಾರೆ ಮನೆ ಮಂದಿಯೆಲ್ಲ ಕೂಡಿಕೊಂಡು ಮನೆಯ ಕಾರ್ಯಕ್ರಮ ಎನ್ನುವಂತೆ ಚುನಾವಣ ಪ್ರಚಾರ ನಡೆಯುತ್ತಿತ್ತು. ನಾಲ್ಕೂವರೆ ದಶಕಗಳ ಹಿಂದೆ ಚುನಾವಣೆಗೆ ಹಣ ಎಂದರೆ ಅಪಹಾಸ್ಯಕ್ಕೀಡಾಗುತ್ತಿದ್ದ ಸಂದರ್ಭ. ಪ್ರಮುಖವಾಗಿ ಕೆಲವೆಡೆ ಜನರೇ ಪಟ್ಟಿ ಮಾಡಿ ಒಂದಿಷ್ಟು ಹಣ ಕ್ರೋಡೀಕರಿಸಿ ಕೊಡುತ್ತಿದ್ದರು. ಧಾರ್ಮಿಕ ಕಾರ್ಯ ಕ್ರಮಕ್ಕೆ ಹೇಗೆ ದೇಣಿಗೆ ನೀಡಲಾಗುತ್ತಿತ್ತೋ ಅದೇ ಭಾವನೆ ಚುನಾವಣೆ ಸಮಯದಲ್ಲೂ ಇತ್ತು. ಚುನಾವಣೆ ಹಣದ ಮೇಲಿರದೇ ಸಮಾಜಸೇವೆ ಎಂಬುದು ಪ್ರತೀ ಕ್ಷಣದಲ್ಲೂ ಆವರಿಸಿಕೊಂಡಿತ್ತು.
ಕಾರ್ಯಕರ್ತರ ಹೋರಾಟಕ್ಕೆ ಎಷ್ಟು ಹೇಳಿದರೂ ಕಡಿಮೆಯೇ. ಯಾವುದನ್ನೂ ನಿರೀಕ್ಷೆ ಮಾಡದೇ ಮನೆ-ಮಠ ಬಿಟ್ಟು ತಿಂಗಳು ಗಟ್ಟಲೇ ಜತೆಗೆ ಇರುತ್ತಿದ್ದರು. ಚುನಾವಣೆ ಮುಗಿದ ಅನಂತರ ಮರಳಿ ಚುನಾವಣೆಗೆ ಬರುವ ಕಾರ್ಯಕರ್ತರ ಪಡೆ ಇದ್ದಿರುವುದು ನಿಜಕ್ಕೂ ಮರೆಯ ಲಾರದ್ದು. ಗೆದ್ದ ಮೇಲೆ ವಿಜಯೋತ್ಸವದಲ್ಲಿ ಕಾಲ್ನಡಿಗೆಯಲ್ಲೇ ಅರ್ಧ ಕ್ಷೇತ್ರದ ಸುತ್ತು ಹಾಕಲಾಗುತ್ತಿತ್ತು. ಒಬ್ಬೊಬ್ಬರು ಹೆಗಲ ಮೇಲೆ ಹೊರಲು ಮುಂದಾಗುತ್ತಿದ್ದರು. ಮತದಾರರಂತೂ ಮನೆ ಮುಂದೆ ರಂಗೋಲಿ ಹಾಕಿ ಸ್ವಾಗತಿಸುತ್ತಿದ್ದರು. ತಾವಂತೂ ಒಬ್ಬರನ್ನೇ ಹೆಚ್ಚಿಗೆ ನೆಚ್ಚಿಕೊಳ್ಳುತ್ತಿರಲಿಲ್ಲ. ಹೀಗಾಗಿ ಇಂತವಹರು ಕಟ್ಟಾ ಬೆಂಬಲಿಗ ಎಂದೆನಿಸಿಕೊಳ್ಳುತ್ತಿರಲಿಲ್ಲ. ನನಗೀಗ 85 ವರ್ಷ. ಚುನಾವಣೆಯ ತಮ್ಮ ಕಾಲ ಹಾಗೂ ಈಗಿನ ಎಲ್ಲ ಆಯಾಮಗಳನ್ನು ಅನುಭವಕ್ಕೆ ಕಂಡು ಕೊಂಡಿದ್ದೇನೆ. ಒಟ್ಟಾರೆ ಆಗಿ ನ ಚುನಾವಣೆಯಲ್ಲಿ ತಣ್ತೀ-ಸಿದ್ಧಾಂತ ಹಾಗೂ ನೈತಿಕ ಮೌಲ್ಯಗಳೇ ಆಸ್ತಿಗಳಾಗಿದ್ದವು.
ಹಣಮಂತರಾವ ಭೈರಾಮಡಗಿ
– ಎಸ್.ಕೆ.ಕಾಂತಾ, ಮಾಜಿ ಸಚಿವರು-ಕಲಬುರಗಿ