Advertisement

ಅರಣ್ಯ ಪ್ರದೇಶ ಅಭಿವೃದ್ಧಿಗೆ ವಿಶೇಷ ಯೋಜನೆ

03:26 PM Mar 15, 2021 | Team Udayavani |

ಲಕ್ಷ್ಮೇಶ್ವರ: ಜಿಲ್ಲೆಯ ಕಪ್ಪತ್ತಗುಡ್ಡ ಸೇರಿಅರಣ್ಯಕ್ಕೆ ಬೀಳುವ ಬೆಂಕಿ ತಡೆಯಬೇಕಿದ್ದು,ಇಲ್ಲಿ ಔಷಧಿ ಸಸ್ಯಗಳ ಬೆಳವಣಿಗೆ-ಸಂರಕ್ಷಣೆ,ಅನಧಿಕೃತ ಗಣಿಗಾರಿಕೆಗೆ ಬ್ರೇಕ್‌, ವಿದೇಶಿಪಕ್ಷಿಗಳು ಬರುವ ಶೆಟ್ಟಿಕೆರೆ ಅರಣ್ಯ ಪ್ರದೇಶಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆರೂಪಿಸಲಾಗುವುದು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

Advertisement

ಭಾನುವಾರ ತಾಲೂಕಿನ ಶೆಟ್ಟಿಕೆರೆಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ದ್ರೋಣಕ್ಯಾಮೆರಾ ಮೂಲಕ ವೀಕ್ಷಣೆ ಮಾಡಿ ಮಾತನಾಡಿದ ಅವರು, ಅರಣ್ಯಕ್ಕೆ ಬೆಂಕಿಹಚ್ಚುವ ಕಾರ್ಯದಲ್ಲಿ ಭಾಗಿಯಾದ13 ಜನರ ಮೇಲೆ ಕೇಸ್‌ ದಾಖಲಾಗಿದೆ.ಕುರಿ ಕಾಯುವವರು ಅರಣ್ಯ ಪ್ರದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು.ಅಧಿಕಾರಿಗಳು ಜನರಲ್ಲಿನ ತಪ್ಪು ಅಭಿಪ್ರಾಯ,ನಂಬಿಕೆ ಹೋಗಲಾಡಿಸಿ ಅರಣ್ಯ ಅಭಿವೃದ್ಧಿಬಗ್ಗೆ ಜಾಗೃತಿ, ತಿಳಿವಳಿಕೆ ಮೂಡಿಸಬೇಕು. ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಔಷಧಿ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಬಗ್ಗೆ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಗೆ ಚಳಿಗಾಲದಲ್ಲಿ ವಿದೇಶಿ ಪಕ್ಷಿಗಳು ಬರುತ್ತವೆ. 200 ಎಕರೆವಿಸ್ತಾರವಾದ ಈ ಕೆರೆ ಹೂಳೆತ್ತುವ ಬಗ್ಗೆಶಾಸಕರ ಮೂಲಕ ಸಣ್ಣ ನೀರಾವರಿಇಲಾಖೆ ಸಚಿವರಾದ ಮಹದೇವಸ್ವಾಮಿ ಅವರ ಗಮನ ಸೆಳೆಯುತ್ತೇನೆ. ಕೆರೆಯಸುತ್ತಲಿನ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿಗೆ ಸೂಚಿಸಲಾಗುವುದು. ಈ ಪ್ರದೇಶದಸುತ್ತಮುತ್ತ ನಡೆಯುತ್ತವೆ ಎನ್ನಲಾದ ಅಕ್ರಮಕಲ್ಲು, ಮರಳಿನ ದಂಧೆಗೆ ಬ್ರೇಕ್‌ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.  ಈ ವೇಳೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಶೆಟ್ಟಿಕೆರೆಯನ್ನು ಜಿಲ್ಲೆಯ ಪಾರಂಪರಿಕ ತಾಣವಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.

ಮುಖ್ಯವಾಗಿ ಅರಣ್ಯ ಪ್ರದೇಶ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವಮೊದಲೇ ಪರವಾನಗಿ ಪಡೆದು ಗಣಿಗಾರಿಕೆಮಾಡುತ್ತಿರುವವರ ನಿಯಂತ್ರಣ ಮತ್ತುಅಧಿಕೃತ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ವೇಳೆ ಸೇರಿದ್ದಕಡಕೋಳ, ದೇವಿಹಾಳ ಗ್ರಾಮದ ಜನರು ಕಳೆದ ಅನೇಕ ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಾಬಂದಿದ್ದು, ಸದ್ಯ ನಮ್ಮನ್ನು ಒಕ್ಕಲೆಬ್ಬಿಸುವಕಾರ್ಯ ನಡೆಯುತ್ತಿದೆ. ನಮಗೆನ್ಯಾಯಕೊಡಿಸಬೇಕು ಎಂದಾಗ ಸದ್ಯಕ್ಕೆರೈತರನ್ನು ಒಕ್ಕಲೆಬ್ಬಿಸದಂತೆ ಯಥಾಸ್ಥಿತಿಕಾಯ್ದುಕೊಳ್ಳುವಂತೆ ಮತ್ತು ರೈತರುಹೆಚ್ಚು ವರ್ಷಗಳಿಂದ ಇಲ್ಲಿ ಉಳುಮೆಮಾಡುತ್ತಿದ್ದಾರೆ ಎಂಬ ಬಗ್ಗೆ ಸೂಕ್ತ ದಾಖಲೆ ಸಂಗ್ರಹಿಸುವಂತೆ ಸೂಚಿಸಿದರು.

ಕೋವಿಡ್ ಸೋಂಕು ಪ್ರಕರಣಗಳುಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್‌ನಸಮ್ಮೇಳನದ ಬಗ್ಗೆ ಮತ್ತೂಂದು ಸುತ್ತಿನಮಾತುಕತೆ ನಡೆಸಲಾಗುವುದು. ಸದ್ಯಕ್ಕೆ ಮತ್ತೆಲಾಕ್‌ಡೌನ್‌ ಮಾಡುವ ಬಗ್ಗೆ ಚಿಂತನೆಯಿಲ್ಲಎಂದು ಹೇಳಿದರು. ಶಾಸಕ ರಾಮಣ್ಣಲಮಾಣಿ, ಧಾರವಾಡ ವೃತ್ತದ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಡಿಎಫ್‌ಒ ಸೂರ್ಯಸೇನ್‌, ಉಪಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕವಿಭಾಗದ ಆರ್‌.ಎಸ್‌. ನಾಗಶೆಟ್ಟಿ, ಪರಿಮಳ ವಿ.ಎಚ್‌., ವಲಯ ಅರಣ್ಯಾಧಿಕಾರಿಗಳಾದ ಎ.ಎಚ್‌. ಮುಲ್ಲಾ, ಪ್ರದೀಪ ಪವಾರ, ತಿಪ್ಪಣ್ಣ ಕೊಂಚಿಗೇರಿ, ಮಹೇಶ ಲಮಾಣಿ, ಲಕ್ಷ್ಮಣ ಲಮಾಣಿ, ನಾಗರಾಜ ಲಕ್ಕುಂಡಿ, ಸಿಪಿಐ ವಿಕಾಸ ಲಮಾಣಿ, ಲಕ್ಷ್ಮೇಶ್ವರ ಶಿರಹಟ್ಟಿ, ಪಿಎಸ್‌ಐ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next