Advertisement

ತಾಂಡಾಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಚಿಂಚನಸೂರ

04:55 PM Sep 01, 2017 | Team Udayavani |

ಯಾದಗಿರಿ: ಕಳೆದ ನಾಲ್ಕು ವರ್ಷದಲ್ಲಿ ಗುರುಮಠಕಲ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರ ಸಾಗಿವೆ ಎಂದು ಶಾಸಕ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ಗುರುಮಠಕಲ್‌ ಮತಕ್ಷೇತ್ರದ ಯಲಸತ್ತಿ ತಾಂಡಾದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆಗೆ ಶಂಕು
ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ಮೂರು ವರ್ಷದಲ್ಲಿ ಒಟ್ಟು 47 ಕೋಟಿ ರೂ. ವೆಚ್ಚದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭವೃದ್ಧಿಗಾಗಿ ಸರಕಾರ ಖರ್ಚು ಮಾಡಿದೆ ಎಂದರು.

ಕಡೆಚೂರ ಮತ್ತು ಬಾಡಿಯಾಲದಲ್ಲಿ ಮೂರು ಸಾವಿರ ಎರಡು ನೂರು ಎಕರೆ ಕೈಗಾರಿಕೆ ಅಭಿವೃದ್ಧಿಗಾಗಿ ಜಮೀನು ತೆಗೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಸುಮಾರು 60-70 ಕೈಗಾರಿಕೆಗಳು ಬರಲಿದ್ದು, ಇದರಿಂದ ಈ ಭಾಗದ ಜನರಿಗೆ ಉದ್ಯೋಗ ಲಭಿಸಲಿದೆ. ಗುಳೆ ಹೋಗುವುದು ತಪ್ಪಲಿದೆ ಎಂದರು.

ರಾಜ್ಯದಲ್ಲಿ ಉಚಿತವಾಗಿ ಏಳು ಕೆ.ಜಿ ಅಕ್ಕಿ ಬಡವರಿಗಾಗಿ ನೀಡುತ್ತಿದ್ದು, ಹಸಿವು ಮುಕ್ತ ರಾಜ್ಯವನ್ನಾಗಿ
ನಿರ್ಮಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ.
ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಮಲ್ಲಿಕಾ ಖರ್ಗೆ ಅವರ ಆರ್ಶೀವಾದದಿಂದ ಬಜೆಟನಲ್ಲಿ 440
ಕೋಟಿ ರೂ. ಘೋಷಿಸಲಾಗಿದ್ದು, ಇದರಿಂದ ಕೆರೆ ತುಂಬಿಸುವ ಯೋಜನೆ ತರುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾಗೆಲ್ಲ ಈ
ಭಾಗದ ಸರ್ವತೋಮುಖ ಅಭವೃದ್ಧಿಗೆ ಶ್ರಮಿಸಿದೆ. ವಿಶೇಷವಾಗಿ ತಾಂಡಾಗಳ ಅಭವೃದ್ಧಿಗೆ ಶ್ರಮಿಸಿದೆ. ತಾಂಡಾಗಲನ್ನು ಕಂದಾಯ ಗ್ರಾಮಗಳನ್ನಾಗಿಸಿ ಸಮಗ್ರ ಅಭವೃದ್ಧಿಗೆ ಬದ್ಧವಾಗಿದೆ
ಎಂದು ಹೇಳಿದರು. ವೇದಿಕೆ ಮೇಲೆ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ನರೇಂದ್ರ ರಾಠೊಡ, ಸೋಮರಡ್ಡಿ ಕೊಂಕಲ್‌, ಅಶೋಕ ತೋಟ್ಟೂರ್‌, ಬಸವರಾಜ ಸ್ವಾಮಿ, ರವಿ ಯಲಸತ್ತಿ,
ನರಸಪ್ಪ, ರಂಗಣ್ಣ ಗುಜ್ಜಾಲ್‌, ಮರೇಪ್ಪ , ತ್ರಿಪಾಲ್‌, ಮೈನೋದ್ದಿನ್‌, ನರಸಿಂಹಲು, ಖೇಮುಸಿಂಗ್‌,
ರಾಘವೆಂದ್ರ, ನಾಗರಡ್ಡಿ ದೇವಪ್ಪ, ಬನ್ನಪ್ಪ ಮಾಧ್ವಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next