Advertisement

ಕುಕ್ಕೆಗೆ ಬ್ರಹ್ಮರಥ : ಆನೆಗುಡ್ಡೆಯಲ್ಲಿ ವಿಶೇಷ ಪೂಜೆ

10:06 AM Sep 30, 2019 | Hari Prasad |

ತೆಕ್ಕಟ್ಟೆ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾರ್ಥವಾಗಿ ಕೊಡಮಾಡುವ ಬ್ರಹ್ಮರಥ ಕೋಟೇಶ್ವರದಿಂದ ಸೋಮವಾರದಂದು ತೆರಳಲಿದೆ. ಈ ಹಿನ್ನೆಲೆಯಲ್ಲಿ ರಥದ ದಾನಿಗಳಾದ ಮುತ್ತಪ್ಪ‌ ರೈ ಅವರ ಧರ್ಮಪತ್ನಿ ಅನುರಾಧ ಅವರು ಆದಿತ್ಯವಾರದಂದು ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಥದ ಯಾತ್ರೆಯು ಕೋಟೇಶ್ವರದಿಂದ ನಿರ್ವಿಘ್ನವಾಗಿ ಸುಬ್ರಹ್ಮಣ್ಯಕ್ಕೆ ತಲುಪುವಂತಾಗಲಿ ಎಂದು ಅವರು ವಿಶೇಷವಾಗಿ ದೇವರನ್ನು ಪ್ರಾರ್ಥಿಸಿಕೊಂಡರು.

Advertisement

ರಿಯಾಲಿಟಿ ವೆಂಚರ್ಸ್‌ ಗ್ರೂಪ್‌ ಸಂಸ್ಥೆಯ ಪಾಲುದಾರರಾದ ಎನ್‌. ಮುತ್ತಪ್ಪ ರೈ ಮತ್ತು ಅಜಿತ್‌ ಶೆಟ್ಟಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾರ್ಥವಾಗಿ ಬ್ರಹ್ಮರಥವನ್ನು ಹಸ್ತಾಂತರಿಸಲಿದ್ದಾರೆ. ರಥ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ನೇತೃತ್ವದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಈ ರಥ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next