Advertisement

ಅಸಂಘಟಿತ ಕಾರ್ಮಿಕರಿಗೆ ವಿಶೇಷ ಯೋಜನೆ

06:32 AM Mar 04, 2019 | |

ದೇವನಹಳ್ಳಿ: ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ರಾಜ್ಯದ ಮೈತ್ರಿ ಸರ್ಕಾರ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದೆ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

Advertisement

 ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಸಮ್ಮಾನ ದಿನಾಚರಣೆ ಹಾಗೂ ಫ‌ಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದೆ. ಆ ಅವಧಿಯ ಕಾರ್ಯಕ್ರಮಗಳನ್ನು ಮೈತ್ರಿ ಸರ್ಕಾರದಲ್ಲಿ ಮುಂದುವರಿಸಲಾಗಿದೆ. ಕಾರ್ಮಿಕ ಸಮ್ಮಾನ್‌ ಕಾರ್ಯಕ್ರಮವನ್ನು ಸರ್ಕಾರದಿಂದ ಆಯೋಜಿಸಿ, ಅರ್ಹ ಫ‌ಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಕಾರ್ಮಿಕ ಇಲಾಖೆಗೆ ಬದ್ಧತೆ ಅಗತ್ಯ: ಕಾರ್ಮಿಕ ಸಮ್ಮಾನ್‌ ಕಾರ್ಯಕ್ರಮದಡಿ ಒಟ್ಟು 11 ವಿವಿಧ ಉದ್ಯೋಗಗಳು ಬರುವುದರಿಂದ ಕಾರ್ಮಿಕರಿಗೆ ಅನುಕೂಲವಾಗಿದೆ. ಸರ್ಕಾರ ದ ಯೋಜನೆಗಳನ್ನು ಅರ್ಹ ಕಾರ್ಮಿಕರಿಗೆ ತಲುಪಿಸಬೇಕು. ಕಾರ್ಮಿಕರ ಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯ. ದುಡಿಯುವ ಕೈಗಳಿಗೆ ಸಮಾಜ ಸದಾ ಚಿರಋಣಿಯಾಗಿರಬೇಕು.

ಕಾರ್ಮಿಕರು ತಮಗೆ ಇರುವ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ
ಸಾಗಿಸಬೇಕು. ಪ್ರತಿಯೊಬ್ಬರೂ ನೋಂದಣಿ ಮಾಡಿಸಿಕೊಳ್ಳಬೇಕು. ಕಾರ್ಮಿಕರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಕಾರ್ಮಿಕ ಇಲಾಖೆ ಬದ್ಧತೆ ಮತ್ತು ಉತ್ತಮ ಕೆಲಸ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಸೌಲಭ್ಯ ಬಳಸಿಕೊಳ್ಳಿ: ಇಲಾಖೆಯಲ್ಲಿ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಪ್ರತಿ ಕಾರ್ಮಿಕರಲ್ಲೂ ಜಾಗೃತಿ ಮೂಡಿಸುವ ಕಾರ್ಯ ವಾಗಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಲಿಕೆ ಭಾಗ್ಯ, ಅಂತ್ಯಕ್ರಿಯೆ ವೆಚ್ಚ, ಹೆರಿಗೆ ಸೌಲಭ್ಯ, ಮನೆ ಖರೀದಿ , ಮನೆ ಕಟ್ಟಲು ಸಹಾಯ ಧನ, (ಕಾರ್ಮಿಕ ಗೃಹ ಭಾಗ್ಯ), ಶ್ರಮ ಸಾಮರ್ಥ್ಯ, ಕಾರ್ಮಿಕ ಆರೋಗ್ಯ ಭಾಗ್ಯ, ಅಪಘಾತ ಪರಿಹಾರ  ಮದುವೆ ಸಹಾಯ ಧನ, ಕಾರ್ಮಿಕರಿಗೆ ಅನಿಲ ಭಾಗ್ಯ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಪಾಸ್‌ ಸೌಲಭ್ಯ ಹೀಗೆ ಹಲವಾರು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಮೈತ್ರಿ ಸರ್ಕಾರ ಬದ್ಧವಾಗಿದೆ ಎಂದರು. ಎತ್ತಿನಹೊಳೆ ಯೋಜನೆ: ಬಯಲು ಸೀಮೆ ಪ್ರದೇಶದ ಜನ ಶಾಶ್ವತ ನೀರಾವರಿ ಯೋಜನೆಗಳಲ್ಲದೇ ಪರಿತಪಿಸುತ್ತಿದ್ದರು. 10 ವರ್ಷದ ಹಿಂದೆ ಪತ್ರಿಕೆಗಳು ವರದಿ ಮಾಡಿದಂತೆ ನೀರಾವರಿ ಸೌಲಭ್ಯಗಳಿಲ್ಲದೇ ಬರಡು ಭೂಮಿಯಾಗಿ ಬೇರೆ ಜಿಲ್ಲೆಗಳಿಗೆ ಗುಳೆ ಹೋಗುವ ಪರಿಸ್ಥಿತಿಯಿದೆ ಎಂಬ ಮಾಹಿತಿ ಬಂದಿತ್ತು. 7 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಲು ಎತ್ತಿನ ಹೊಳೆ ಯೋಜನೆ ರೂಪಿಸಿ ತ್ವರಿತವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಸಮಸ್ಯೆಗೆ ಸ್ಪಂದನೆ: ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಕಾರ್ಮಿಕರ ಯಾವುದೇ ಸಮಸ್ಯೆ ಇರಲಿ ನೇರವಾಗಿ ನಮ್ಮ ದೂರವಾಣಿ ಸಂಖ್ಯೆಗೆ 9611241188 ಸಂಪರ್ಕಿಸಿದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ನೀಡಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

Advertisement

ನೋಂದಣಿ ಮಾಡಿಸಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ ಮಾತನಾಡಿ, 2006ರಲ್ಲಿ ಈ ಕಲ್ಯಾಣ ನಿಧಿ ಜಾರಿಗೊಂಡ ಮೇಲೆ ಸರ್ಕಾರ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 7,300 ಕೋಟಿ ರೂ. ಅನುದಾನ ನೀಡಿದೆ .ಬುದ್ಧಿವಂತಿಕೆಯಿಂದ ಸೌಲಭ್ಯಗಳನ್ನು ಬಳಸಿ ಕೊಳ್ಳಬೇಕು. ಶ್ರಮಿಕರಾದ ನೀವು ನೋಂದಣಿ ಮಾಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಮಿಕ ಇಲಾಖೆ ಸಹಾಯ ನಿರ್ದೇಶಕ ಸಂತೋಷ್‌ ಹಿಪ್ಪರಗಿ ಮಾತನಾಡಿ,ದೇಶದಲ್ಲಿ 45 ಕೋಟಿ ಹಾಗೂ ರಾಜ್ಯದಲ್ಲಿ 1.30 ಕೋಟಿ ಕಾರ್ಮಿಕರಿದ್ದಾರೆ. 18 ರಿಂದ 60 ವರ್ಷದೊಳಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿ ಮಾಡಿ ಸಬೇಕು. ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಶತ ಶತಮಾನಗಳಿಂದ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.  ಈ ವೇಳೆ ತಾಪಂ ಅಧ್ಯಕ್ಷೆ ಭಾರತಿ, ಉಪಾ ಧ್ಯಕ್ಷೆ ನಂದಿನಿ, ಸದಸ್ಯ ಕಾರಹಳ್ಳಿ ಶ್ರೀನಿವಾಸ್‌, ಆಲೂರು ದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಕಾರ್ಮಿಕ ಇಲಾಖೆ ಅಧಿಕಾರಿ ನಿರಂಜನ್‌, ದೇವರಾಜ್‌, ಉಪವಿಭಾಗಾಧಿ ಕಾರಿ ಮಂಜುನಾಥ್‌ ಸೇರಿದಂತೆ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಅಸಂಘಟಿತ ಕಾರ್ಮಿಕರು, ಸ್ಥಳೀಯರು ಮುಂತಾದವರು ಭಾಗವಹಿಸಿದ್ದರು.

ವಿವಿಧ ಸೌಲಭ್ಯಗಳ ವಿತರಣೆ: ಕಾರ್ಯ ಕ್ರಮದಲ್ಲಿ ವಿವಿಧ ವೃತ್ತಿಯಲ್ಲಿರುವ ಕಾರ್ಮಿ ಕರಿಗೆ ಸಮ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತ . ಅಸಂಘಟಿತ ಕಾರ್ಮಿಕರಿಗೆ ಅಂತ್ಯಕ್ರಿಯೆ ವೆಚ್ಚ, ಹೆರಿಗೆ ಸೌಲಭ್ಯ, ಮುದುವೆ ಸೌಲಭ್ಯ ಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next