ಮಂಗಳೂರು: ಪ್ಯಾಸೆಂಜರ್ ಸ್ಪೆಷಲ್ ನಂಬರ್‌ನಲ್ಲಿ ಸಂಚರಿಸುತ್ತಿದ್ದ ವಿಶೇಷ ಪ್ಯಾಸೆಂನರ್ ರೈಲುಗಳಿಗೆ ದಕ್ಷಿಣ ರೈಲ್ವೇ ರೆಗ್ಯುಲರ್ ನಂಬರ್‌ಗಳನ್ನು ಅಳವಡಿಸಿದ್ದು, ಜುಲೈ 1ರಿಂದ ಇದು ಅನ್ವಯವಾಗಲಿದೆ. ಇದರ ಪ್ರಕಾರ “0’ಯಿಂದ ಆರಂಭವಾಗುತ್ತಿದ್ದ ರೈಲು ಸಂಖ್ಯೆಗಳು ಬದಲಾಗಲಿದೆ.
ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ರೈಲಿಗೆ 06601ರ ಬದಲಾಗಿ ನಂ.56615 ಮತ್ತು ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ರೈಲಿಗೆ 06602ರ ಬದಲಾಗಿ ನಂ.56616 ಅಳವಡಿಕೆಯಾಗಲಿದೆ.
ಮಂಗಳೂರು ಸೆಂಟ್ರಲ್ – ಕಬಕ ಪುತ್ತೂರು ನಂ.06485 ರೈಲಿಗೆ ನಂ.56625, ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ನಂ.06484 ರೈಲಿಗೆ ನಂ.56626 ನಂಬರ್ ಅಳವಡಿಕೆಯಾಗಲಿದೆ. ಮಂಗಳೂರು ಸೆಂಟ್ರಲ್ – ಕಬಕ ಪುತ್ತೂರು ನಂ.06487 ರೈಲಿಗೆ ನಂ. 56627, ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ನಂ.06486 ರೈಲಿಗೆ ನಂ.56628 ನಂಬರ್ ಅಳವಡಿಕೆಯಾಗಲಿದೆ.
ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ನಂ. 06489 ರೈಲಿಗೆ ನಂ. 56629, ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ನಂ. 06488 ರೈಲಿಗೆ ನಂ. 56630 ನಂಬರ್ ಅಳವಡಿಕೆಯಾಗಲಿದೆ.
ಕಣ್ಣೂರು – ಮಂಗಳೂರು ಸೆಂಟ್ರಲ್ ನಂ. 06477 ರೈಲಿಗೆ ನಂ. 56717 ಮತ್ತು ಮಂಗಳೂರು ಸೆಂಟ್ರಲ್ – ಕಣ್ಣೂರು ನಂ. 06478 ರೈಲಿಗೆ ನಂ. 56718 ನಂಬರ್ ಅಳವಡಿಕೆಯಾಗಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.