Advertisement
ಪಾನ್ ಲಡ್ಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳೇನು?
- ತೆಂಗಿನ ಕಾಯಿ- ಇದರಲ್ಲಿ ಲಾರಿಕ್ ಆಮ್ಲ ಹಾಗೂ ಮೊನೊಲೌರಿನ್ ಎಂಬ ಅಂಶವಿದ್ದು ಇದು ದೇಹಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳು ವೈರಲ್ ಸೋಂಕಿನ ವಿರುದ್ಧ ಹೋರಾಡುತ್ತವೆ.
- ವೀಳ್ಯದೆಲೆ : ಇದರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಪೂರಕ ಅಂಶಗಳನ್ನು ಒಳಗೊಂಡಿದ್ದು, ಆಯುರ್ವೇದದ ಪ್ರಕಾರ ಇದಕ್ಕೆ ದೇಹದಲ್ಲಿರುವ ವಾತ, ಪಿತ್ತ, ಹಾಗೂ ಕಫ ವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ
- ತುಪ್ಪ
- ಹಾಲು
Related Articles
Advertisement
– ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿಮಾಡಿಕೊಳ್ಳಿ. ಬಿಸಿಯಾದ ತುಪ್ಪಕ್ಕೆ ತೆಂಗಿನ ಕಾಯಿ ತುರಿಯನ್ನು ಸೇರಿಸಿ ಮಂದಬೆಂಕಿಯ ಮೂಲಕ ಹುರಿದುಕೊಳ್ಳಿ ( ತೆಂಗಿನ ಕಾಯಿ ತುರಿಯ ಬಣ್ಣ ಬದಲಾಗುವವರೆಗೆ)
-ಬಿಸಿ ಮಾಡಿದ ತೆಂಗಿನ ಕಾಯಿ ತುರಿಗೆ ರುಬ್ಬಿಕೊಂಡ ವೀಳ್ಯದೆಲೆ ಹಾಗೂ ಹಾಲಿನ ಮಿಶ್ರಣವನ್ನು ಸೇರಿಸಿ ವಿಶ್ರಣ ಹಿಟ್ಟಿನ ರೂಪಕ್ಕೆ ಬರುವವರೆಗೆ ಮಂದಬೆಂಕಿಯಲ್ಲಿ ಬಿಸಿಮಾಡಿ.
-ಬಳಿಕ ಮಿಶ್ರಣವನ್ನು ಸ್ಪಲ್ಪ ಸಮಯದ ವರೆಗೆ ತಣ್ಣಗಾಗಿಲು ಬಿಟ್ಟು, ನಂತರ ಉಂಡೆಯನ್ನಾಗಿ ಮಾಡಿ ತೆಂಗಿನ ತುರಿಯ ಪುಡಿಯೊಂದಿಗೆ ಹೊರಳಿಸಿ.