Advertisement
ಈ ಮಧ್ಯೆ ಹಸಿರು ಪಟಾಕಿ ಜತೆಗೆ ಸಾಮಾನ್ಯ ಪಟಾಕಿಗಳನ್ನು ಅಲ್ಲಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ನಗರ ಪೊಲೀಸರು “ವಿಶೇಷ ಕಾರ್ಯಾಚರಣೆ’ ಆರಂಭಿ ಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಚಾಮರಾಜಪೇಟೆಯ ವಿ.ವಿ.ಪುರಂ ಠಾಣೆ ವ್ಯಾಪ್ತಿಯ ತರಗುಪೇಟೆಯಲ್ಲಿ ಅಕ್ರಮ ಗೋದಾಮಿನಲ್ಲಿ ನಡೆದ ಬೆಂಕಿ ದುರಂತ ಸಂಭವಿಸಿ ಮೂವರು ಮೃತಪಟ್ಟಿದ್ದರು.
Related Articles
Advertisement
ಪೊಲೀಸರಿಂದ ತಪಾಸಣೆ: ಅಕ್ರಮ ಪಟಾಕಿ ಮಳಿಗೆ ಮತ್ತು ಗೋದಾಮುಗಳ ಮೇಲೆ ನಿಗಾವಹಿಸಲು ನಗರ ಪೊಲೀಸ್ ಆಯುಕ್ತರು ಈಗಾಗಲೇ ಆಯಾ ವಿಭಾಗ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಈಹಿನ್ನೆಲೆಯಲ್ಲಿ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಗೋದಾಮುಗಳು ಹಾಗೂ ಮಳಿಗೆಗಳನ್ನು ಆಗಾಗ್ಗೆ ತಪಾಸಣೆ ನಡೆಸಬೇಕು ಎಂದು ಡಿಸಿಪಿಗಳು ಠಾಣಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಬೀಟ್ ಸಿಬ್ಬಂದಿಯೂ ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ಅನುಮಾನ ಬಂದರೆ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಕ್ಯೂಆರ್‌ಕೋಡ್ ಅಥವಾ ಲೋಗೋ: ಕಳೆದ ವರ್ಷ ಹಸಿರು ಪಟಾಕಿ ಗುರುತಿಸಲು ಕ್ಯೂಆರ್ ಕೋಡ್ ಸ್ಕ್ಯಾನಿಂಗ್‌ಗೆ ಅವಕಾಶ ನೀಡಲಾಗಿತ್ತು. ಈ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಸ್ಕ್ಯಾನ್ ಮಾಡಿ ಪರಿಸೀಲಿಸುತ್ತಿದ್ದರು. ಈ ಬಾರಿ ಅದರೊಂದಿಗೆ ಕೌನ್ಸಿಲ್ ಫಾರ್ ಸೈಟಿμಕ್ ಆ್ಯಂಡ್ ಇಂಡಸ್ಟ್ರೀಸ್ ರಿಸರ್ಚ್ ಅಭಿವೃದ್ಧಿ ಪಡಿಸಿದ ಹಸಿರು ಪಟಾಕಿಗಳನ್ನು, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋ ಧನಾ ಸಂಸ್ಥೆ(ನೀರಿ) ದೃಢಪಡಿಸಿರುವ ಹಸಿರು ಪಟಾಕಿ ಎಂಬ ಲೋಗೋ ಇರುತ್ತದೆ. ಇದು ಪೊಲೀಸರಿಗೆ ತಪಾಸಣೆಗೆ ಸುಲಭವಾಗುತ್ತದೆ.
ಮೇಲ್ಭಾಗದ ಬಾಕ್ಸ್‌ಗಳಲ್ಲಿ ಮಾತ್ರವಲ್ಲ, ಒಳಭಾಗದ ಪಟಾಕಿ ಪ್ಯಾಕೆಟ್‌ಗಳಲ್ಲೂ “ನೀರಿ’ ಸಂಸ್ಥೆಯ ಲೋಗೋ ಇರಬೇಕು. ಆಗ ಮಾತ್ರ ಹಸಿರು ಪಟಾಕಿ ಎಂದು ದೃಢಪಡಿಸಲಾಗುತ್ತದೆ. ಒಂದು ವೇಳೆ ನಕಲಿ ಮಾಡಿದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು. ನಗರದಲ್ಲಿ ಅಕ್ರಮ ಪಟಾಕಿ ಗೋದಾಮುಗಳು, ಮಳಿಗೆಗಳ ಮೇಲೆ ಪೊಲೀಸರಿಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ನಕಲಿ ಅಥವಾ ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ. – ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ.
- – ಮೋಹನ್ ಭದ್ರಾವತಿ