Advertisement
‘ಅವನ ಬದುಕಿನ ವರ್ಣರಂಜಿತ ಅಧ್ಯಾಯ ಮುಗಿದಿದೆ. ಅವಕಾಶವಿದ್ದಿದ್ದರೆ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳು ತ್ತಿದ್ದ. ನಿಜಕ್ಕೂ ಅದು ಸಂಭ್ರಮದ ಘಳಿಗೆ. ಆದರೆ ದುರದೃಷ್ಟ ಹೀಗೆ ಬಂದು ಅಪ್ಪಳಿಸುತ್ತದೆ ಎಂದುಕೊಂಡಿರಲಿಲ್ಲ.’
‘ಆತ (ರೌಡಿ ರಂಗ) ಬನ್ನೇರುಘಟ್ಟ ವ್ಯಾಪ್ತಿಯಲ್ಲಿದ್ದ. ಸ್ವಲ್ಪ ಪುಂಡು ಅಷ್ಟೇ. ಸುತ್ತಲೆಲ್ಲ ಒಂದಿಷ್ಟು ಗದ್ದಲ ಮಾಡಿ ಇಬ್ಬರ ಪ್ರಾಣಗಳನ್ನು ಬಲಿ ತೆಗೆದುಕೊಂಡದ್ದ. ಮನುಷ್ಯರೂ ಅದಕ್ಕೆ ರೌಡಿ ರಂಗ ಎಂದು ಹೆಸರಿಟ್ಟಿದ್ದರು. ಬಳಿಕ ಅವನಿಗೆ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಂಯಮದ ಪಾಠ ಕಲಿಸಿ 3 ವರ್ಷದ ಹಿಂದೆ ತಿತಿಮತಿ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದು ತರಲಾಯಿತು. 8 ತಿಂಗಳು ಕ್ರಾಲ್ ನಲ್ಲಿ ಬಂದಿಯಾಗಿ ತರಬೇತಿ ಪಡೆದು ಬದಲಾದ. ಮಾವುತ, ಕಾವಾಡಿಗಳ ಹಾಗೂ ಅರಣ್ಯಾಧಿಕಾರಿಗಳ ಪ್ರಿಯನಾಗಿದ್ದ’ ಎನ್ನುತ್ತಾನೆ ಗೆಳೆಯ.
Related Articles
Advertisement
ವನ್ಯಜೀವಿಗಳ ಪ್ರದೇಶ, ಆನೆಗಳ ಕಾರಿಡಾರ್ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ಇಂಥ ದುರ್ಘಟನೆಗಳಿಗೆ ಕಾರಣವಾಗುತ್ತಿದೆ. ಖಾಸಗಿ ಬಸ್‌ಗಳ ಮಿತಿ ಮೀರಿದ ವೇಗವೂ ವನ್ಯಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಬನ್ನೇರುಘಟ್ಟದಲ್ಲಿ ಪುಂಡಾಟದ ಮೂಲಕ ‘ರೌಡಿ’ ಎನ್ನಿಸಿಕೊಂಡಿದ್ದ ರಂಗ ನಮ್ಮಲ್ಲಿಗೆ ಬಂದ ಬಳಿಕ ಸಂಪೂರ್ಣ ಬದಲಾಗಿದ್ದ. ಅವನ ಸೌಮ್ಯ ಸ್ವಭಾವವನ್ನು ಗಮನಿಸಿ ರಂಗ ಎಂದು ಮರುನಾಮಕರಣ ಮಾಡಿದ್ದೆವು. ನನ್ನ ಕೈತುತ್ತು ಉಣ್ಣುತ್ತಿದ್ದ ಆತ ಇಂದು ಕಣ್ಣೆದುರೇ ಬಿದ್ದು ನರಳಾಡುತ್ತಿದ್ದ. ಆ ಕ್ಷಣದಲ್ಲಿ ದೇವರನ್ನು ಪ್ರಾರ್ಥಿಸುವುದರ ಹೊರತು ಏನೂ ಮಾಡಲಾಗಲಿಲ್ಲ.
– ಅಹಮ್ಮದ್ ಷರೀಫ್, ಮಾವುತ