Advertisement

ಮಳೆ ಹಾನಿ: ನಗರಸಭೆ ಹೇಗೆ ಕೆಲಸ ಮಾಡಿತ್ತು?  

02:15 AM Jun 01, 2018 | Team Udayavani |

ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಲೋಪವಾಗಿದೆಯೇ?
ಇಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ನಗರಸಭೆ ಎಲ್ಲ ಸಿದ್ಧತೆಗಳನ್ನೂ ಮಾಡಿ ಕೊಂಡಿತ್ತು. ಮೂರು ತಂಡಗಳು ಕಾರ್ಯಾಚರಣೆಯಲ್ಲಿವೆೆ. ಮಳೆಯ ಪ್ರಮಾಣ ಹೆಚ್ಚಿದ್ದ ಕಾರಣ ಸ್ವಲ್ಪ ಸಮಸ್ಯೆ ಎದುರಾಯಿತು.

Advertisement

ಚರಂಡಿ ನಿರ್ವಹಣೆ ಅವ್ಯವಸ್ಥೆಯಿಂದ ಸಮಸ್ಯೆಯಾಯಿತೇ?
ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಚರಂಡಿ ನಿರ್ವಹಣೆ ಮಾಡಲಾಗಿತ್ತು. ಕೆಲವೆಡೆಗಳಲ್ಲಿ ಪದೇ ಪದೇ ಹೂಳು ತುಂಬಿ ಸಮಸ್ಯೆಯಾಗಿದೆ. ನಗರಸಭೆ ಸಮಾರೋ ಪಾದಿಯಲ್ಲಿ ಕೆಲಸ ಮಾಡಿದೆ.

ಗಂಭೀರ ಸಮಸ್ಯೆ ಉದ್ಭವಿಸಿದೆಯೇ?
ಅಂತಹ ಗಂಭೀರ ಸಮಸ್ಯೆಯಾಗಿಲ್ಲ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ತೋಡುಗಳ ಸಮೀಪದಲ್ಲಿದ್ದ ಮನೆಗಳಿಗೆ ಹೋಗಿದೆ. ಮಳೆ ಕಡಿಮೆಯಾದ ಅನಂತರ ಸರಿಯಾಗಿದೆ.

ತುರ್ತು ಪರಿಹಾರ ನೀಡಲಾಗಿದೆಯೇ?
ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವುದಕ್ಕೆ ಸಂಬಂಧಿಸಿ ಅರ್ಜಿ ಕೊಟ್ಟರೆ ನಗರಸಭೆಯಿಂದ ಪರಿಹಾರ ಕೊಡುತ್ತೇವೆ. 2-3 ಅರ್ಜಿ ಬಂದಿದೆ. ಇನ್ನು ಮುಂದಕ್ಕೆ ಅರ್ಜಿಗಳು ಬರಬಹುದು.

ಒಳಚರಂಡಿ ಅವ್ಯವಸ್ಥೆ ಇತ್ತೇ?
ಒಳಚರಂಡಿ ಅಂತಹ ಗಂಭೀರ ಸಮಸ್ಯೆ ಇರಲಿಲ್ಲ. ಪಂಪ್‌ ಹಾಳಾದಾಗ ಸ್ವಲ್ಪ ತೊಂದರೆಯಾಗುತ್ತದೆ. ಉಳಿದಂತೆ ಏನೂ ಸಮಸ್ಯೆಯಾಗಿಲ್ಲ.

Advertisement

ಸಹಾಯವಾಣಿ
ಬ್ರಹ್ಮಾವರ:
ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗೆ 24×7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಅದರಂತೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯವರು ಕಚೇರಿ ದೂ: 0820-2560494 ಸಂಪರ್ಕಿಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next