Advertisement

ಒಲಂಪಿಕ್‌ನಲ್ಲಿ ಈಜು ಸ್ಪರ್ಧೆಗೆ ವಿಶೇಷ ಮಹತ್ವ: ಮಾಹೆ ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌

01:13 AM Oct 17, 2023 | Team Udayavani |

ಉಡುಪಿ: ಒಲಂಪಿಕ್‌ನಲ್ಲಿ ಈಜು ಸ್ಪರ್ಧೆಗೆ ವಿಶೇಷ ಮಹತ್ವವಿದ್ದು, ಹಲವಾರು ವಿಭಾಗಗಳಲ್ಲಿ ಇದರ ಸ್ಪರ್ಧೆ ನಡೆಯುತ್ತದೆ ಮತ್ತು 8 ವರ್ಷಗಳ ಅವಧಿಯಲ್ಲಿ ಓರ್ವ ಕ್ರೀಡಾಳು ಹಲವಾರು ಪ್ರಶಸ್ತಿಗಳನ್ನು ಗಳಿಸುವ ಅವಕಾಶವಿದೆ ಎಂದು ಮಾಹೆ ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಹೇಳಿದರು.

Advertisement

ಮಾಹೆ, ಎಂಐಟಿ ಈಜುಕೊಳದಲ್ಲಿ ಡಾ| ಟಿ.ಎಂ.ಎ. ಪೈ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಮುಕ್ತ ಈಜು ಪಂದ್ಯಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಜು ಪಂದ್ಯಕೂಟಕ್ಕೆ ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ್‌, ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣಾ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಹ ನಿರ್ದೇಶಕ ಡಾ| ಸ್ಯಾಮ್‌ ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಸಂಯೋಜಕ ಡಾ| ನಾಗರಾಜ್‌ ಕಾಮತ್‌ ಪ್ರಸ್ತಾವನೆಗೈದು, ಡಾ| ಸೆಲ್ವಕುಮಾರ್‌ ಸ್ವಾಗತಿಸಿ, ಕ್ರೀಡಾ ನಿರ್ದೇಶಕ ಡಾ| ಉಪೇಂದ್ರ ವಂದಿಸಿದರು. ಡಾ| ಬಾಲಕೃಷ್ಣ ಮುಧ್ದೋಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next