Advertisement

“ಸಖತ್’ತಂಡದಿಂದ ಗಣೇಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್!

07:47 AM Jun 25, 2020 | Lakshmi GovindaRaj |

ಜುಲೈ 2 ರಂದು “ಸಖತ್’ ಸಿನಿಮಾ ಚಿತ್ರತಂಡ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಈ ಮೂಲಕ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ. ನಿರ್ದೇಶಕ ಸುನಿ, ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಜುಡಾ ಸ್ಯಾಂಡಿ ಸಂಗೀತವಿದೆ.

Advertisement

ಈ ಹಿಂದೆ ಈ ಹಿಂದೆ ಚಮಕ್ ” ಹಿಟ್ ಚಿತ್ರ ಕೊಟ್ಟಿದ್ದ ಜೋಡಿ ಈಗ ಮತ್ತೊಂದು ಬಾರಿಗೆ ಒಂದಾಗಿದ್ದು, ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಜಂಟಿ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಅಲ್ಲದೇ ದಕ್ಷಿಣ ಭಾರತದ ಖ್ಯಾತ ನಟಿ ಸುರಭಿ ಈ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸಾಧು ಕೋಕಿಲಾ, ಕುರಿ ಪ್ರತಾಪ್, ರಘುರಾಮ್, ಗಿರಿ ಮತ್ತು ಧರ್ಮಣ್ಣ ಮುಖ್ಯ ತಾರಾಬಳಗದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈಚಳಕ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಗಣೇಶ್ “ಸಖತ್” ಮಾತ್ರವಲ್ಲದೆ “ಕಿಟ್ಟಿ’, “ಗಾಳಿಪಟ 2′ ಹಾಗೂ “ತ್ರಿಬಲ್ ರೈಡಿಂಗ್’ ನಲ್ಲಿ ಸಹ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಪುಷ್ಕರ್ ಫಿಲ್ಮ್ಸ್ ನಿರ್ಮಿಸುತ್ತಿರುವ ಶರಣ್ ಅಭಿನಯದ “ಅವತಾರ ಪುರುಷ” ಚಿತ್ರಕ್ಕೆ ಈಗಾಗಲೇ ಸುನಿ ಆಕ್ಷನ್ ಕಟ್ ಹೇಳಿದ್ದು, ಶೂಟಿಂಗ್‌ನ ಕೊನೆಯ ಹಂತದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next