Advertisement
ಕವಾಟದ ಗೊಂದಲN 95ರ ಬಳಕೆದಾರರಿಗೆ ಉಸಿರಾಟ ಸರಾಗವಾಗಲೆಂದು ಮಾಸ್ಕ್ ನಲ್ಲಿ ಅಳವಡಿಸಲಾಗಿರುವ ಕವಾಟ ಈ ಆರೋಪಗಳಿಗೆ ಕಾರಣವಾಗಿದೆ. N 95ರಂತಹ ಮಾಸ್ಕ್ ನ ಉದ್ದೇಶವೇ ವೈರಸ್‌ಗಳನ್ನು ತಡೆಯುವುದಾಗಿತ್ತು. ಆದರೆ ಇದರಲ್ಲಿ ವೈರಾಣುಗಳು ತಪ್ಪಿಸಿಕೊಳ್ಳುತ್ತಿವೆ.
ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಅಥವಾ ಫೇಸ್ ಮಾಸ್ಕ್ ಬಳಸುವುದು ಅನಿವಾರ್ಯವಾಗಿದೆ. ಆದರೆ ಗಾಳಿ ಕವಾಟ ಹೊಂದಿರುವಂತಹ ರೆಸ್ಪಿರೇಟರ್ N-95 ಮಾಸ್ಕ್ ಪರಿಣಾಮಕಾರಿಯಲ್ಲ.
ಇದರಲ್ಲಿನ ಕವಾಟವನ್ನು ಫೈಬರ್‌ನಿಂದ ಕೂಡಿರುವ ಪ್ಲಾಸ್ಟಿಕ್ ಡಿಸ್ಕ್ ನ ಸಹಾಯದಿಂದ ತಯಾರಿಸಲಾಗಿದೆ. ಇದನ್ನು ಬದಲಾಯಿಸಬಹುದಾಗಿದೆ. ಕವಾಟ ಯಾಕೆ?
ಗಾಳಿಯನ್ನು ಶುದ್ಧೀಕರಿಸಿ ಆರಾಮದಾಯಕ ಉಸಿರಾಟಕ್ಕೆ ಕವಾಟಗಳು ನೆರವಾಗುತ್ತವೆ. ಇದು ಗಾಳಿಯಲ್ಲಿ ಮಾಲಿನ್ಯ ಹೆಚ್ಚಾದ ಸಂದರ್ಭದಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಮುಖ್ಯವಾಗಿ ಗಣಿಗಳಲ್ಲಿ, ಧೂಳು ಹೆಚ್ಚಿರುವ ಕಡೆಗಳಲ್ಲಿ ಬಳಸಲ್ಪಡುವ ಮಾಸ್ಕ್ ಇದಾಗಿದೆ. ಆದರೆ ಸಾಂಕ್ರಾಮಿಕದ ವೇಳೆ ಇದು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಆರೋಗ್ಯ ಇಲಾಖೆಯ ಆತಂಕ.
Related Articles
ಎನ್-95 ಮಾಸ್ಕ್ ಗಳ ಬದಲಾಗಿ ಮುಖವನ್ನು ಮುಚ್ಚಿಕೊಳ್ಳಲು ಮನೆಯಲ್ಲಿಯೇ ತಯಾರಿಸಿದ ಮುಖಗವಸು ಬಳಸುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು N-95 ಮಾಸ್ಕ್ ತಯಾರಿಕೆಯಲ್ಲಿ ಪಾಲಿಸದೆ ಇರುವುದು ಇದಕ್ಕೆ ಕಾರಣ.
Advertisement
ಕವಾಟ ಏಕೆ ಇರಬಾರದು?ಉಸಿರನ್ನು ಹೊರಗೆ ಬಿಡುವ ವೇಳೆ ಅದು ಶುದ್ಧವಾಗುವುದಿಲ್ಲ. ಕವಾಟು ಕೇವಲ ಉಸಿರು ಒಳಗೆ ತೆಗೆದುಕೊಳ್ಳುವ ವೇಳೆ ಮಾತ್ರ ಗಾಳಿ ಶುದ್ಧೀಕರಿಸಲ್ಪಡುತ್ತದೆ. ಹೀಗಾಗಿ ಕೋವಿಡ್ 19 ವೈರಸ್ ತಡೆಯಲು N-95 ಮಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವುದು ಅಗತ್ಯವೆಂದು ಆರೋಗ್ಯ ಇಲಾಖೆ ಹೇಳಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಈ ಮಾದರಿಯ ಮಾಸ್ಕ್ ಗಳನ್ನು ಧರಿಸಿದರೆ ಸೋಂಕು ಸುಲಭವಾಗಿ ಹರಡಬಹುದಾಗಿದೆ.