Advertisement
ಏಳೆಂಟು ಬಗೆಯ ದೋಸೆ, ಇಡ್ಲಿ, ರೈಸ್ ಬಾತ್ ಐಟಂಗಳಿಂದಲೇ ಉಮೇಶ್ ದೋಸೆ ಪಾಯಿಂಟ್ ಹೋಟೆಲು ಹೆಸರುವಾಸಿ. ಅದರಲ್ಲೂ ಇಲ್ಲಿ ಸಿಗುವ ತುಪ್ಪದ ದೋಸೆ, ಇಡ್ಲಿ ತಿನ್ನಲು ಪ್ರತಿದಿನವೂ ಸಂಜೆ ವೇಳೆ ಜಾತ್ರೆಗೆ ಬಂದಂತೆ ಜನ ಬರುತ್ತಾರೆ. ತಿಂಡಿಯ ಪ್ಲೇಟ್ ಕೈಲಿ ಹಿಡಿದುಕೊಂಡು ಜೊತೆಗಿದ್ದವರೊಂದಿಗೆ ಖುಷಿಯಿಂದ ಹೇಳುತ್ತಾರೆ: “ಇಡ್ಲಿ ಬಿಸಿಬಿಸಿಯಾಗಿದೆ. ಕೆಂಪುಚಟ್ನಿ, ಸಾಗು ಮತ್ತು ತುಪ್ಪದ ಕಾಂಬಿನೇಷನ್ ಸೂಪರ್… ದೋಸೆಯ ರುಚಿಯಂತೂ ಫಸ್ಟ್‌ಕ್ಲಾಸ್. ನಾಳೆ ಸಂಜೆ ಮತ್ತೆ ಇಲ್ಲಿಗೇ ತಿಂಡಿಗೆ ಬರೋಣ…’
ಈ ಹೋಟೆಲ್ ಮಾಲೀಕರ ಹೆಸರು ಉಮೇಶ್. ಮೂಲತಃ ಬೆಂಗಳೂರಿನವರಾದ ಇವರು, ಈ ಮೊದಲು ಪುಟ್ಟ ಚಾಟ್ ಸೆಂಟರ್ ನಡೆಸುತ್ತಿದ್ದರು. ದಿನ ಕಳೆದಂತೆಲ್ಲ ಚಾಟ್ಸ್ ತಿನ್ನಲು ಬರುವ ಜನರು, “ನೀವೇಕೆ ಫಾಸ್ಟ್‌ಪುಡ್ ಸೆಂಟರ್ ತೆರೆಯಬಾರದು?’ ಎಂದು ಕೇಳುತ್ತಿದ್ದರಂತೆ. ಇಂಥ ಮಾತುಗಳಿಂದ ನಮಗೂ ಹುಮ್ಮಸ್ಸು ಬಂತು. ನಾವೂ ಹೋಟೆಲ್ ಆರಂಭಿಸಬಾರದೇಕೆ ಎಂದು ಯೋಚಿಸಿದೆವು. ಅದಕ್ಕೆ ತಕ್ಕಂತೆ ಶ್ರೀಧರ್, ಪ್ರಭುಗೌಡ ಎಂಬ ಗೆಳೆಯರು ಸಹಾಯಕ್ಕೆ ನಿಂತರು. ಅದರ ಫಲವೇ ಈ ದೋಸಾ ಪಾಯಿಂಟ್ ಅಂದರು ಉಮೇಶ್.
Related Articles
Advertisement
ಇಲ್ಲಿ 10ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತವೆ. ಬೆಳಗ್ಗೆ 8ರಿಂದ 11ರ ವರೆಗೆ, ಸಂಜೆ 5.30ರಿಂದ ರಾತ್ರಿ 11ರವರೆಗೆ ಈ ಹೋಟೆಲ್ ತೆರೆದಿರುತ್ತದೆ. ಇದೀಗ, ಪರಭಾಷಿಗರು ಕೂಡ ದೋಸಾ ಪಾಯಿಂಟ್‌ಗೆ ಬರಲಾಂಭಿಸಿದ್ದಾರೆ. ಇದೇ ಕಾರಣಕ್ಕೆ, ಚಿಕ್ಕದಾಗಿದ್ದ ಹೋಟೆಲನ್ನು ವಿಸ್ತರಿಸಿ, ಕಾಲ್ನಡಿಗೆ ಅಂತರದಲ್ಲಿ ಹೋಟೆಲಿನ ಮತ್ತೂಂದು ಬ್ರಾÂಂಚ್ ಕೂಡ ಆರಂಭಿಸಲಾಗಿದೆ. ಪ್ರತಿದಿನ ಕನಿಷ್ಠವೆಂದರೂ 600-700 ದೋಸೆಗಳು ಇಲ್ಲಿ ಖರ್ಚಾಗುತ್ತವಂತೆ.
ಸವಿರುಚಿಯ ರಹಸ್ಯ “ಪ್ರತಿಯೊಂದು ತಿನಿಸುಗಳನ್ನು ಮಾಡುವಾಗಲೂ ಎಣ್ಣೆಯ ಬದಲಿಗೆ ಬೆಂಗಳೂರು ಡೈರಿಯ ನಂದಿನಿ ಶುದ್ಧ ತುಪ್ಪವನ್ನೇ ಬಳಸುತ್ತೇವೆ. ಆಹಾರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡಿದ್ದೇವೆ. ಗೋಡಂಬಿ, ದ್ರಾಕ್ಷಿ, ಹಸಿ ಬಟಾಣಿ ಮುಂತಾದ ತರಕಾರಿಗಳನ್ನು ಸಾಕಷ್ಟು ಬಳಸುತ್ತೇವೆ. ಇದೇ ನಮ್ಮಲ್ಲಿ ತಯಾರಾಗುವ ರುಚಿರುಚಿ ತಿನಿಸುಗಳ ಹಿಂದಿರುವ ಗುಟ್ಟು’ ಎನ್ನುತ್ತಾರೆ ಮಾಲೀಕರ ಪತ್ನಿ ದಾಕ್ಷಾಯಿಣಿ ಉಮೇಶ್.
ವರ್ಷದಲ್ಲಿ ಎರಡು ದಿನ ಮಾತ್ರ ರಜೆ…ಉಮೇಶ್ ದೋಸೆ ಪಾಯಿಂಟ್‌ನಲ್ಲಿ ಬಾಣಸಿಗರು ರಜೆ ಹಾಕಿಬಿಟ್ಟರೆ ಎಂಬ ಗೊಂದಲವಿಲ್ಲ. ಪ್ರತಿ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಎರಡು ತಂಡಗಳು ಶಿಫ್ಟ್ ಪ್ರಕಾರ ಕೆಲಸ ಮಾಡುತ್ತವೆ. ಆದ್ದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಗಣೇಶ ಹಬ್ಬ ಮತ್ತು ಹೋಟೆಲ್ ಆ್ಯನಿವರ್ಸರಿಯಂದು ಮಾತ್ರ ಹೋಟೆಲ್‌ಗೆ ರಜೆ ಇರುತ್ತದೆ. ಮನಸೋತ ತಾರೆಗಳು
ದೋಸಾ ಪಾಯಿಂಟ್‌ನ ರುಚಿಗೆ ಮನಸೋತವರಲ್ಲಿ ಜನಸಾಮಾನ್ಯರು ಮಾತ್ರವಲ್ಲ. ಅನೇಕ ಸೆಲೆಬ್ರಿಟಿಗಳೂ ಇದ್ದಾ ರೆ. ಸ್ಯಾಂಡಲ್‌ವುಡ್ ನಟರಾದ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ರಾಜಕಾರಣಿಗಳಾದ ವಿ. ಸೋಮಣ್ಣ, ಜಮೀರ್ ಅಹಮದ್ ಸೇರಿದಂತೆ ಹಲವಾರು ಗಣ್ಯರು ಇಲ್ಲಿನ ದೋಸೆಯ ರುಚಿಗೆ ತಲೆದೂಗಿದ್ದಾರೆ. ಪುಷ್ಪಲತಾ