Advertisement

ಕರ್ನಾಟಕಕ್ಕೆ ವಿಶೇಷ ಕೋರ್ಟ್‌

09:00 AM Mar 12, 2018 | Harsha Rao |

ಹೊಸದಿಲ್ಲಿ: ದೇಶದಲ್ಲಿರುವ 1,765 ಜನಪ್ರತಿನಿಧಿಗಳ ವಿರುದ್ಧ ಇರುವ 3,816 ಕೇಸುಗಳ ವಿಚಾರಣೆಗೆ ಕರ್ನಾಟಕ ಸಹಿತ 11 ರಾಜ್ಯಗಳಲ್ಲಿ ವಿಶೇಷ ಕೋರ್ಟ್‌ ಆರಂಭಿಸಲಾಗಿದೆ. ಹೀಗೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿದೆ. ಇತರ 12 ರಾಜ್ಯಗಳಲ್ಲಿ ವಿಶೇಷ ಕೋರ್ಟ್‌ಗಳ ಆರಂಭಕ್ಕೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವಾಲಯ ಸಲ್ಲಿಕೆ ಮಾಡಿರುವ ಅಫಿದವಿತ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

ಕರ್ನಾಟಕ ಹೊರತುಪಡಿಸಿದ ಇತರ ರಾಜ್ಯಗಳೆಂದರೆ ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ಬಿಹಾರ, ದಿಲ್ಲಿ, ತಮಿಳುನಾಡು, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲ.

ವಿವಿಧ ರಾಜ್ಯಗಳಲ್ಲಿರುವ ಜನಪ್ರತಿನಿಧಿಗಳ ಮೇಲೆ ಯಾವ ರೀತಿಯ ಮೊಕದ್ದಮೆಗಳು ದಾಖಲಾಗಿವೆ ಎಂಬ ಬಗ್ಗೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿದ್ದಾರೆ. ಅದಕ್ಕೆ ಪೂರಕವಾಗಿ ಮಾಹಿತಿ ಬಂದಿದ್ದು, ಅದರ ಖಚಿತತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕಾನೂನು ಖಾತೆ ಸುಪ್ರೀಂಕೋರ್ಟ್‌ಗೆ ಹೇಳಿದೆ. ಜನಪ್ರತಿ ನಿಧಿಗಳ ವಿರುದ್ಧ ದಾಖಲಾಗಿರುವ ಕೇಸುಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ 565 ಕೇಸುಗಳು ದಾಖಲಾಗಿವೆ. ಕೇರಳದಲ್ಲಿ 533 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next