Advertisement

ಕೋವಿಡ್ 19 ವೈರಸ್ ವಿರುದ್ಧ ರೇಣುಕಾಚಾರ್ಯ ವಾರ್‌

12:58 AM Apr 26, 2020 | Hari Prasad |

ಹೊನ್ನಾಳಿ: ರಾಜ್ಯ ರಾಜಕಾರಣದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೆಸರು ಚಿರಪರಿಚಿತ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯೆಂಬ ಹೊನ್ನರಳಿದ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಜನಾನುರಾಗಿ ರಾಜಕಾರಣಿ.

Advertisement

ವಿಶ್ವವನ್ನೇ ಬೆಚ್ಚಿಬೀಳಿಸಿದ ಕೋವಿಡ್ 19 ವೈರಸ್ ದೇಶ, ರಾಜ್ಯದಲ್ಲಿ ನಿಧಾನವಾಗಿ ಹಬ್ಬುತ್ತಿದ್ದಂತೆ ಇದರ ತಡೆಗಾಗಿ ಕೇಂದ್ರ, ರಾಜ್ಯ ಸರಕಾರಗಳು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡವು.

ರೋಗ ತಡೆಗೆ ಲಾಕ್‌ಡೌನ್‌ ಒಂದೇ ಉತ್ತಮ ಪರಿಹಾರ ಎಂಬುದನ್ನು ಮನಗಂಡು ಕೇಂದ್ರ ಸರಕಾರ ಇದನ್ನು ಘೋಷಿಸಿ ಕೋವಿಡ್ 19 ವೈರಸ್ ವಿರುದ್ಧ ಸಮರ ಸಾರಿತು.

ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವ, ಸದ್ಯ ಸಿ.ಎಂ. ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ. ರೇಣುಕಾಚಾರ್ಯ ಸಹ ಕೋವಿಡ್ 19 ವೈರಸ್ ನಿಂದ ತಮ್ಮ ಕ್ಷೇತ್ರದ ಜನರನ್ನು ರಕ್ಷಿಸುವ ಪಣತೊಟ್ಟರು.

ಮಹಾಮಾರಿಯ ಭಯದ ಮಧ್ಯೆಯೂ ಸದಾ ಜನರ ಮಧ್ಯೆ ಇದ್ದು ಕೋವಿಡ್ ತಡೆಗಟ್ಟುವಲ್ಲಿ ಹಾಗೂ ಅದರ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಷೇತ್ರದ ಅವಳಿ ತಾಲೂಕುಗಳ ಜನತೆಯ ಸೇವೆಯೆ ಜರ್ನಾರ್ಧನನ ಸೇವೆಯೆಂದು ನಂಬಿ ಹಗಲಿರುಳು ಶ್ರಮಿಸುವ ಮೂಲಕ ಅಪರೂಪದ ರಾಜಕಾರಣಿ ಎಂದೆನಿಸಿಕೊಂಡರು.

Advertisement

ಇಚ್ಚಾಶಕ್ತಿ ಇದ್ದರೆ ಒಬ್ಬ ಜನಪ್ರತಿನಿಧಿ ಏನೆಲ್ಲಾ ಸಾಧಿಸಿ ತೋರಿಸಬಲ್ಲ ಎಂಬುದಕ್ಕೆ ಇವರು ಸಾಕ್ಷಿ. ಇವರದ್ದು ಕೇವಲ ಮಾತಿನ ಸಾಧನೆಯಲ್ಲ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ಸಮಸ್ಯೆಗೆ ಸ್ಪಂದಿಸುವ ಪರಿ ಇವೆಲ್ಲವುಗಳೊಂದಿಗೆ ಇವರ ಸಾಧನೆಗಳೇ ಮಾತನಾಡಿಕೊಳ್ಳುತ್ತಿವೆ.


ಹೊನ್ನಾಳಿ: ನ್ಯಾಮತಿ ಪಟ್ಟಣದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಶಾ ಕಾರ್ಯಕರ್ತೆಯರು ಊಟ ಮಾಡುತ್ತಿರುವ ಸಂದರ್ಭ ಭೇಟಿ ನೀಡಿದ್ದರು.

ಪಾದಯಾತ್ರೆ: ಕಳೆದ ಒಂದು ತಿಂಗಳಿನಿಂದ ಹಗಲಿರುಳು ಎನ್ನದೆ ಅವಿರತವಾಗಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಎಲ್ಲಾ ಗ್ರಾಮಗಳ ಪ್ರತಿ ಕೇರಿ ಕೇರಿಗಳಲ್ಲಿ ಪಾದಯಾತ್ರೆ ನಡೆಸಿ ಸೋಂಕಿನ ಬಗ್ಗೆ ಸಂಪೂರ್ಣ ಅರಿವು ಮೂಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೇರೆಯರಿಗೆ ಮಾದರಿಯಾಗಿ ತೋರಿಸಿದ್ದಾರೆ.

ಚಾಂದ್ರಮಾನ ಯುಗಾದಿ ಹಬ್ಬದ ಮರು ದಿನದಿಂದ ಇಂದಿನವರಗೆ ಅವಿರತವಾಗಿ ಶ್ರಮ ಹಾಕಿ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯ ಹಮ್ಮಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರ ಸೇವೆ ಮಾಡುತ್ತಿದ್ದಾರೆ.
ಆರಂಭದಲ್ಲಿ ಎರಡೂ ತಾಲೂಕುಗಳ 254 ಮತಗಟ್ಟೆ ಕೇಂದ್ರಗಳಿಗೆ ಸಂಚರಿಸಿ ವಿಶ್ವವ್ಯಾಪಿಯಾಗಿರುವ ಕೋವಿಡ್ 19 ವೈರಸ್ ಸೋಂಕಿನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೆ ದಾರಿ ದಯಮಾಡಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾರೂ ಹೊರ ಬರಬೇಡಿ ಎಂದು ಮನವಿ ಮಾಡಿ ಜಾಗೃತಿ ಮೂಡಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಎರಡು ತಾಲೂಕುಗಳ ಜನತೆ ಮನೆಯೊಳಗೆ ಇದ್ದು ಸಹಕಾರ ನೀಡಿ ಎಂದು ಮನವಿ ಮಾಡಿದರು.


ಹೊನ್ನಾಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಊಟ ಬಡಿಸಿದರು.

ಮನೆ ಮನೆಗೆ ಕರಪತ್ರ ಮಾಸ್ಕ್: ಅನೇಕ ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಕ್ರಿಮಿನಾಶಕ ಸಿಂಪಡಿಸುವುದು, ಇತರ ಕೆಲಸಗಳಲ್ಲಿ ತಾವೇ ಭಾಗವಹಿಸಿ ಜನರಿಗೆ ಮಾದರಿಯಾದರು. ಕೋವಿಡ್ 19 ವೈರಸ್ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸುವಂತಹ ಸಮಗ್ರ ಮಾಹಿತಿ ಹೊಂದಿದ 75 ಸಾವಿರ ಕರಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಸ್ವತಃ ತಾವೇ ಮಾಡಿದರು.

ವೈಜ್ಞಾನಿಕ ಗುಣಮಟ್ಟ ಹೊಂದಿರುವ ಮಾಸ್ಕ್ ಗಳನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ, ಪೊಲೀಸರಿಗೆ, ನಿರ್ಗತಿಕರಿಗೆ, ಗ್ರಾ.ಪಂ ಸಿಬ್ಬಂದಿ ಹಾಗೂ ಸಾಮಾನ್ಯ ಜನರಿಗೆ ವಿತರಿಸುವ ಕಾರ್ಯ ಮುಂದುವರಿಸಿದ್ದಾರೆ.

ಅಧಿಕಾರಿಗಳೊಂದಿಗೆ ಸಭೆ: 15 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ 19 ವೈರಸ್ ಜಾಗೃತಿಗಾಗಿ ಅಧಿಕಾರಿಗಳು ರಜೆ ರಹಿತ ಕೆಲಸ ಕಾರ್ಯ ಮಾಡಬೇಕು ಎಂದು ಸೂಚಿಸಿದ್ದಾರೆ. ಶಾಸಕರ ಸೂಚನೆಯಂತೆ ತಾಲೂಕಿನ ಎಲ್ಲಾ ಅಧಿಕಾರಿ, ನೌಕರರು ಕೋವಿಡ್ 19 ವೈರಸ್ ತಡೆ ಕಾರ್ಯ ಮುಂದುವರಿಸಿದ್ದಾರೆ.

ತಾಲೂಕಿನಾದ್ಯಂತ ಕೋವಿಡ್ 19 ವೈರಸ್ ಬಗ್ಗೆ ಕೈಗೊಂಡ ಜಾಗೃತಿ ಕಾರ್ಯಕ್ರಮಕ್ಕೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌, ಸಂಸದ ಜಿ.ಎಂ. ಸಿದ್ದೇಶ್ವರ ಅವರೆಲ್ಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಶಾಸಕರ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ.


ಹೊನ್ನಾಳಿ: ನ್ಯಾಮತಿ ಪಟ್ಟಣದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬಡವರಿಗೆ ಊಟ ಬಡಿಸಿದರು.

ಕೂಲಿ ಕೆಲಸ: ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಕೂಲಿ ಹೆಚ್ಚಿಸಿ ರೂ.275 ರಂತೆ 2 ತಿಂಗಳ ಕಾಲ ಕೂಲಿ ಕೊಡುವಂತೆ ಸೂಚಿಸಿ 2 ತಾಲೂಕುಗಳ ಆಯ್ದ ಕೆರೆಗಳ ಹೂಳು ತೆಗೆಯುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಸಿಎಂ ಸೂಚನೆ: ಶಾಸಕ ಎಂ.ಪಿ. ರೇಣುಕಾಚಾರ್ಯರ ಶ್ರಮ ಹಾಗೂ ನಿರಂತರ ಕಾರ್ಯಪ್ರವೃತ್ತಿ ಗಮನಿಸಿದ ಸಿಎಂ ಬಿ.ಎಸ್‌. ಯಡಿಯೂರಪ್ಪನವರು ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರವರು ಆರೋಗ್ಯದ ಕಡೆ ಗಮನ ವಹಿಸಿ ವೈರಸ್‌ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಸಲಹೆ, ಸೂಚನೆಗಳನ್ನು ಶಾಸಕರು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ನನ್ನ ಕುಟುಂಬದ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ನನ್ನ ಮತ ಕ್ಷೇತ್ರದ ಜನತೆಯ ಆರೋಗ್ಯ ಭಾಗ್ಯ ನನಗೆ ಮುಖ್ಯ. ಜನ ಸೇವೆಯೇ ಜನಾರ್ಧನನ ಸೇವೆಯೆಂದು ಭಾವಿಸಿ ಕ್ಷೇತ್ರದ ಜನತೆಯ ಹಿತಕ್ಕಾಗಿ ನಿರಂತರವಾಗಿ ಹಗಲಿರುಳೆನ್ನದೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.


ಹೊನ್ನಾಳಿ: ನ್ಯಾಮತಿ ಪಟ್ಟಣದಲ್ಲಿ ಪತ್ರಿಕಾ ಪ್ರತಿನಿಧಿ ಷಣ್ಮುಖಪ್ಪ ಅವರ ಕಾಯಿಲೆ ಸಂಬಂಧ 3 ತಿಂಗಳ ಔಷಧಿಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ವಿತರಿಸಿದರು.

ಜನರ ಕ್ಷೇಮ ಕಾಪಾಡೋದು ಕರ್ತವ್ಯ: ಎಂ.ಪಿ.ರೇಣುಕಾಚಾರ್ಯ
ಹೊನ್ನಾಳಿ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ವೈರಸ್‌ ಭೀತಿಗೆ ಮನುಕುಲ ತತ್ತರಿಸಿದ್ದು ಪ್ರತಿಯೊಬ್ಬ ಪ್ರಜೆಯೂ ಜಾಗೃತನಾಗಿರುವುದರೊಂದಿಗೆ ಆರೋಗ್ಯ ಕಾಳಜಿ ವಹಿಸಬೇಕು. ಪ್ರಸ್ತುತ ದಿನದಲ್ಲಿ ವೈಯಕ್ತಿಕ ಹಿತದ ಜತೆ ಇಡೀ ಮನುಕುಲದ ಹಿತ ಕಾಯಬೇಕು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ಸಂಯಮ, ತಾಳ್ಮೆ ವಹಿಸಿ ಕೊರೊನಾ ಮಹಾಮಾರಿ ವಿರುದ್ಧ ಗೆಲ್ಲಬೇಕಿದೆ. ಇದು ಹೊನ್ನಾಳಿ ಶಾಸಕ, ಕ್ರಿಯಾಶೀಲ ರಾಜಕಾರಣಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಮನದಾಳದ ಮಾತುಗಳು.

ಹಿಂದಿನ ಕಾಲದಲ್ಲಿ ಅನೇಕ ರೋಗಗಳು ಅಪ್ಪಳಿಸಿ ಜನ ತಮ್ಮ ಊರನ್ನೇ ಬಿಟ್ಟು ಹೋಗುವಂತೆ ಮಾಡಿದ ವಿಷಯದ ಬಗ್ಗೆ ನಾವು ಕೇಳಿದ್ದೇವೆ. ಅಂದು ಸುಧಾರಿತ ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಈಗ ಇರುವ ವೈದ್ಯಕೀಯ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರೋಗ್ಯ ಕಾಳಜಿ ವಹಿಸಬೇಕು ಎನ್ನುವುದು ಅವರ ಮಾತು.


ಹೊನ್ನಾಳಿ: ಚೀಲೂರಲ್ಲಿ ಶಾಸಕ ಎಂ. ಪಿ. ರೇಣುಕಾಚಾರ್ಯ ಜಾಗೃತಿ ಮೂಡಿಸಿದ ಸಂದರ್ಭ.

ಸರ್ಕಾರದ ಸೂಚನೆಗಳನ್ನು ಪಾಲಿಸುವುದು ಪ್ರಮುಖವಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ 19 ವೈರಸ್ ವಿರುದ್ಧ ಕಾರ್ಯನಿರ್ವಹಿಸುವಂತಹ ಕಾರ್ಯಕರ್ತರಿಗೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ.

ಯಾವುದೇ ಸಂದರ್ಭದಲ್ಲಿ ಧೃತಿಗೆಡದೆ, ಸುಳ್ಳು ಸಂದೇಶಗಳಿಗೆ ಕಿವಿಗೊಡದೆ ವಾಸ್ತವ ಅರಿತು ಕೋವಿಡ್ 19 ವೈರಸ್ ಸೋಂಕನ್ನು ದೂರ ಮಾಡಲು ಶ್ರಮಿಸಬೇಕು ಎಂದು ಮನವಿ ಮಾಡುತ್ತಾರೆ. ಸದಾ ಚಟುವಟಿಕೆಯಿಂದ ಅವಿರತವಾಗಿ ಕೆಲಸ ಮಾಡುವುದರ ನಿಮ್ಮ ಆರೋಗ್ಯದ ಗುಟ್ಟೇನು ಎಂದು ಪ್ರಶ್ನಿಸಿದರೆ, ನಾನು ಸದಾ ಜನರೊಂದಿಗೆ ಇದ್ದರೆ ನೂರಕ್ಕೆ ನೂರರಷ್ಟು ಸಂತೋಷ ಅನುಭವಿಸುತ್ತೇನೆ.

ಇದರೊಂದಿಗೆ ಪ್ರತಿ ದಿನ ಬೆಳಿಗ್ಗೆ 5.30ಕ್ಕೆ ಎದ್ದು ಯೋಗ, ಪ್ರಾಣಾಯಾಮ ಮಾಡುತ್ತೇನೆ. ಸಂಜೆ ವಾಯು ವಿಹಾರ ಮಾಡುತ್ತೇನೆ. ನನಗೆ ನನ್ನ ವೈಯಕ್ತಿಕ ಆರೋಗ್ಯಕ್ಕಿಂತ ನನ್ನ ಜನರ ಆರೋಗ್ಯ ಮುಖ್ಯ. ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಮೂರು ಬಾರಿ ಗೆಲ್ಲಿಸಿದ ಜನರ ಕ್ಷೇಮ ಕಾಪಾಡೋದು, ಜನ ಸೇವಕನಾಗಿ ಮತದಾರರ ಋಣ ತೀರಿಸುವುದೇ ನನ್ನ ಕರ್ತವ್ಯ. ಮಾತೇ ಸಾಧನೆಯಾಗಬಾರದು ಸಾಧನೆ ಮಾತಾಗಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶ ಎನ್ನುತ್ತಾರೆ ರೇಣುಕಾಚಾರ್ಯ.


ಹೊನ್ನಾಳಿ: ಕರ್ತವ್ಯ ನಿರ್ವಹಣೆ ವೇಳೆ ಹಲ್ಲೆಗೊಳಗಾದ ಬಿದರಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸಾಂತ್ವನ ಹೇಳಿದರು.

ಹಸಿವು ಇಂಗಿಸಿದರು
ಕಳೆದ 20 ದಿನಗಳಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ, ಪೊಲೀಸರಿಗೆ, ಗೃಹ ರಕ್ಷಕರಿಗೆ, ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ ಮೊಸರನ್ನ, ಚಿತ್ರಾನ್ನ, ಪುಳಿಯೊಗರೆ, ಪೊಂಗಲ್‌, ವಾಂಗೀಬಾತ್‌ ಬಿಸಿಬೇಳೆ ಬಾತ್‌, ಟೊಮೆಟೋ ಬಾತ್‌ ಹೀಗೆ ಪ್ರತಿ ದಿನವೂ ಒಂದೊಂದು ಬಗೆಯ ಅಡುಗೆ ಮಾಡಿಸಿ 3ರಿಂದ 4 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ. ಲಾಕ್‌ಡೌನ್‌ ಮುಗಿಯುವವರೆಗೂ ಈ ಕೈಂಕರ್ಯ ಮುಂದುವರಿಯುತ್ತಿದೆ. ಇದರೊಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸುವ ಕಾರ್ಯ ಮುಂದುವರಿಸಿದ್ದಾರೆ.

ಜನರ ಸಂಕಷ್ಟ ಪರಿಹರಿಸುವುದೇ ಗುರಿ
ರೇಣುಕಾಚಾರ್ಯರು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದು ಪೂರ್ಣಗೊಳ್ಳುವವರೆಗೂ ಬಿಡುವುದಿಲ್ಲ ಅವರು ಒಂದು ರೀತಿ ಉಡ ಇದ್ದ ಹಾಗೆ… ಎಂದು ಜನ ಮಾತನಾಡುತ್ತಾರೆ. ಈ ಬಗ್ಗೆ ತಮ್ಮ ಕೆಲಸ, ಜನರ ಬಗ್ಗೆ ಇರುವ ಕಾಳಜಿಯ ಕುರಿತು ‘ಉದಯವಾಣಿ’ಯೊಂದಿಗೆ ರೇಣುಕಾಚಾರ್ಯ ಮಾತನಾಡಿದ್ದಾರೆ.

ತಮ್ಮ ಆಶೋತ್ತರಗಳನ್ನು ಈಡೇರಿಸುತ್ತಾರೆ ಎಂಬ ಬಲವಾದ ನಂಬಿಕೆ ಮೇಲೆ ಜನ ಚುನಾವಣೆಯಲ್ಲಿ ನಮಗೆ ಮತ ಹಾಕಿ ಆರಿಸಿ ವಿಧಾನಸೌಧಕ್ಕೆ ಕಳುಹಿಸಿರುತ್ತಾರೆ. ಹೀಗಾಗಿ ಜನರಿಗೆ ಸಂಕಷ್ಟ ಬಂದಾಗ ಅವರ ಮನೆ ಬಾಗಿಲಿಗೇ ತೆರಳಿ ಸಮಸ್ಯೆಗಳನ್ನು ಈಡೇರಿಸುವುದೇ ನನ್ನ ಗುರಿ.


ಹೊನ್ನಾಳಿ: ಪಟ್ಟಣದಲ್ಲಿ ಪಡಿತರ ಕಿಟ್‌ಗಳನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ವಿತರಿಸಿದರು.

ಕೋವಿಡ್ ಎಂಬ ಮಹಾಮಾರಿ ವಿಶ್ವವ್ಯಾಪಿಯಾಗಿ ಹರಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಯಾಗಿ, ಶಾಸಕನಾಗಿ ನನ್ನ ಕರ್ತವ್ಯ ಬಹು ದೊಡ್ಡದಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ಮಧ್ಯಮ ವರ್ಗದವರಿಗೆ ಇನ್ನಿಲ್ಲದ ತೊಂದರೆಯಾಗಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು ಜನಪ್ರತಿನಿಧಿಗಳಾದ ನಾವು ಇಂತಹ ಸಮಯದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಜನ ನಮಗೆ ಮತ ಹಾಕಿದ್ದಕ್ಕೆ ಸಾರ್ಥಕವಾಗುತ್ತದೆ.

ಸುಮ್ಮನೆ ಕುಳಿತುಕೊಂಡರೆ ಸಮಯ ವ್ಯರ್ಥವಾಗಿ ಹೋಗುತ್ತದೆ. ಸುಮ್ಮನೆ ಕುಳಿತುಕೊಳ್ಳಲು, ಅಧಿಕಾರ ಅನುಭವಿಸಲು ಜನ ನಮ್ಮನ್ನು ಆರಿಸಿ ವಿಧಾನಸೌಧಕ್ಕೆ ಕಳಿಸಿಲ್ಲ. ಜನರ ಸೇವೆ ಮಾಡಲು ನಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವ ಬಲವಾದ ನಂಬಿಕೆ ಮತ್ತು ವಿಶ್ವಾಸ ನಮ್ಮಲ್ಲಿ ಇರಬೇಕು. ಇದನ್ನು ನಾನು ಸದಾ ಮನಸ್ಸಿನಲ್ಲಿಟ್ಟುಕೊಂಡು ನನ್ನ ಕ್ಷೇತ್ರ ಅವಳಿ ತಾಲೂಕುಗಳಾದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ನನ್ನ ಎರಡು ಕಣ್ಣುಗಳಂತೆ ನೋಡಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ.

ಲಾಕ್‌ಡೌನ್‌ ಸಮಯದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂದು ಪ್ರತಿ ನಿತ್ಯ ಮಧ್ಯಾಹ್ನದ ಊಟ ಬಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಪಿಎಲ್‌ ಕಾರ್ಡುದಾರರಿಗೆ ಅಕ್ಕಿ, ಗೋಧಿ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ನನ್ನೊಂದಿಗೆ ಅನೇಕ ದಾನಿಗಳು ಕೈ ಜೋಡಿಸಿದ್ದಾರೆ.


ಹೊನ್ನಾಳಿ: ನ್ಯಾಮತಿ ಪಟ್ಟಣದಲ್ಲಿ ಕೋವಿಡ್ ಜಾಗೃತಿ ಕರಪತ್ರಗಳನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಬಿಡುಗಡೆ ಮಾಡಿದರು.

ಕೋವಿಡ್ 19 ವೈರಸ್‌ ವಿರುದ್ಧ ದಿನ ನಿತ್ಯ ಕಾರ್ಯಪ್ರವೃತ್ತರಾಗಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯರ್ತೆಯರು, ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ, ಸಮಾಜ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಪ್ರತಿ ನಿತ್ಯದ ವಿಷಯವನ್ನು ಎಲ್ಲರಿಗೂ ತಿಳಿಸುವಂತಹ ಕೆಲಸವನ್ನು ಮಾಡುತ್ತಿರುವ ಪತ್ರಕರ್ತರುಗಳ ಕಾರ್ಯಗಳನ್ನು ನೋಡಿದಾಗ ಅವರ ಮುಂದೆ ನಮ್ಮ ಕೆಲಸ ಸಾಮಾನ್ಯ ಎಂದೆನಿಸುತ್ತಿದೆ.

ಸದಾ ಜನರ ಬಗ್ಗೆ ಚಿಂತಿಸುವ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರು ಕೋವಿಡ್ 19 ವೈರಸ್ ವಿರುದ್ಧ ಪ್ರಪಂಚದ ಯಾವುದೇ ದೇಶ ತೆಗೆದುಕೊಳ್ಳಲಾರದಂತಹ ಕ್ರಮಗಳನ್ನು ತೆಗೆದುಕೊಂಡಿದ್ದು, ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ನಾವುಗಳು ಕೂಡಾ ಅವರೊಂದಿಗೆ ಕೈ ಜೋಡಿಸಿದರೆ ಒಳ್ಳೆಯ ದಿನಗಳು ಬರುತ್ತವೆ ಎಂಬುದು ರೇಣುಕಾಚಾರ್ಯರ ವಿಶ್ವಾಸದ ನುಡಿ.


ಹೊನ್ನಾಳಿ: ಕುಂದೂರು ಗ್ರಾಮದ ಕೆರೆ ಹೂಳೆತ್ತುವ ಕಾಯಕದಲ್ಲಿ ಕಾರ್ಮಿಕರೊಂದಿಗೆ ಕೈ ಜೋಡಿಸಿದ ಶಾಸಕ ಎಂ. ಪಿ. ರೇಣುಕಾಚಾರ್ಯ.

ದಯವಿಟ್ಟು ಮನೆಯಿಂದ ಹೊರ ಬರಬೇಡಿ
ದೇಶದ ಹೆಮ್ಮೆಯ ಪ್ರಧಾನಿ ಕೋವಿಡ್ 19 ವೈರಸ್ ನಿಯಂತ್ರಣದಲ್ಲಿ ವಿಶ್ವದಲ್ಲಿಯೇ ಮೊದಲನೇ ಸ್ಥಾನ ಪಡೆದಿರುವ ನರೇಂದ್ರಮೋದಿಯವರು ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರ ಸೂಚನೆಯಂತೆ ಎಲ್ಲಾ ನಾಗರಿಕರು ಮೇ.3ರವರೆಗೆ ಮನೆಯಿಂದ ಹೊರ ಬರದಂತೆ ಸಹಕಾರ ನೀಡಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ನನಗೆ ಅನ್ನ ದಾಸೋಹದ ಪರಿಕಲ್ಪನೆ ನನ್ನ ತಾಯಿ ಕಮಲಮ್ಮ ಅವರಿಂದ ಬಳವಳಿಯಾಗಿ ಬಂದಿದೆ. ನಮ್ಮ ಮನೆಗೆ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ನನ್ನ ತಂದೆ ತಾಯಿಯವರ ಆರ್ಶಿವಾರ್ದದಿಂದ ಹಾಗೂ ಕ್ಷೇತ್ರದ ಅವಳಿ ತಾಲೂಕುಗಳ ಮತದಾರರ ಆಶೀರ್ವಾದದಿಂದ ನಿರಂತರವಾಗಿ ನಡೆಸುತ್ತಿದ್ದಾರೆ.
– ರೇಣುಕಾಚಾರ್ಯ, ಶಾಸಕರು


ಹೊನ್ನಾಳಿ: ತಾಲೂಕಿನ ಗ್ರಾಮವೊಂದರಲ್ಲಿ ಮಾಸ್ಕ್ ವಿತರಿಸಿದ ಸಂದರ್ಭ.


ಹೊನ್ನಾಳಿ: ನ್ಯಾಮತಿಯಲ್ಲಿ ಶಾಸಕರು ಊಟ ಬಡಿಸಿದ ಸಂದರ್ಭ.

Advertisement

Udayavani is now on Telegram. Click here to join our channel and stay updated with the latest news.

Next