Advertisement

ಗುಪ್ತಚರ ವಿಭಾಗಕ್ಕೆ ವಿಶೇಷ ನೇಮಕಾತಿ: ಆರಗ ಜ್ಞಾನೇಂದ್ರ

09:49 PM Mar 10, 2022 | Team Udayavani |

ವಿಧಾನಪರಿಷತ್ತು: ಗುಪ್ತಚರ ಇಲಾಖೆಯನ್ನು ಕಾಲಕ್ಕೆ ಮತ್ತು ಅಗತ್ಯತೆಗಳಿಗೆ ತಕ್ಕಂತೆ ಬಲಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ಗುಪ್ತಚರ ವಿಭಾಗಕ್ಕೆ ಪ್ರತ್ಯೇಕ ವಿಶೇಷ ನೇಮಕಾತಿಗಳನ್ನು ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ಸಲೀಂ ಅಹ್ಮದ್‌ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಕಾನೂನು ಸುವ್ಯವಸ್ಥೆ ಮತ್ತಿತರ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ-ಅಧಿಕಾರಿಗಳನ್ನು ಎರವಲು ಸೇವೆ ಮೇಲೆ ಗುಪ್ತಚರ ವಿಭಾಗಕ್ಕೆ ಹಾಕಲಾಗುತ್ತದೆ. ಇಲ್ಲಿ ಸಲ್ಲದವರು, ಅಲ್ಲಿ ಸಲ್ಲುವರಯ್ಯ ಎಂಬ ಸ್ಥಿತಿ ಇದೆ. ಇದು ಬದಲಾಗಬೇಕಿದೆ ಎಂದರು.

ಹಾಗಾಗಿ, ಗುಪ್ತಚರ ಇಲಾಖೆಗೆ ಎರವಲು ಸೇವೆ ಮೇಲೆ ನಿಯೋಜಿಸುವ ಬದಲು ಪ್ರತ್ಯೇಕವಾಗಿ ಗುಪ್ತಚರ ವಿಭಾಗಕ್ಕೆ ವಿಶೇಷ ನೇಮಕಾತಿಗಳನ್ನು ನಡೆಸಲಾಗುವುದು. ಅವರಿಗೆ ಇಂದಿನ ಅಗತ್ಯತೆಗಳಿಗೆ ತಕ್ಕಂತೆ ತರಬೇತಿ ನೀಡಲಾಗುವುದು. ಆಧುನಿಕ ತಂತ್ರಜ್ಞಾನಗಳ ತಿಳುವಳಿಕೆ ಕೊಡಲಾಗುವುದು. ಈ ವಿಶೇಷ ನೇಮಕಾತಿ ಪ್ರಸ್ತಾಪದ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಅಲ್ಲದೇ ರಾಜ್ಯದಲ್ಲಿ ಸದ್ಯ ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ದಾವಣಗೆರೆ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌)ಗಳಿವೆ. ಬಳ್ಳಾರಿಯ ಪ್ರಯೋಗಾಲಯ ಇತ್ತಿಚಿಗೆ ಚಾಲನೆಗೊಂಡಿದೆ. ಈ ಪ್ರಯೋಗಲಾಯಗಳನ್ನು ಬಲಪಡಿಸುವುದರ ಜೊತೆಗೆ ಶಿವಮೊಗ್ಗದಲ್ಲಿ ಹೊಸದಾಗಿ ಎಫ್ಎಸ್‌ಎಲ್‌ ಕೇಂದ್ರ ತೆರೆಯವ ಚಿಂತನೆ ಇಂದು ಗೃಹ ಸಚಿವರು ತಿಳಿಸಿದರು.

ಸಿಇಎನ್‌ ಠಾಣೆಗಳಿಗೆ ಬಲ:
ರಾಜ್ಯದಲ್ಲಿ ಸೈಬರ್‌, ಆನ್‌ಲೈನ್‌ ವಂಚನೆಗಳನ್ನು ತಡೆಯಲು ಹಲವು ಕ್ರಮಗಳನ್ನುನ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಗೆ ಒಂದರಂತೆ ರಾಜ್ಯದಲ್ಲಿ 46 ಸಿಇಎನ್‌ ಪೊಲೀಸ್‌ ಠಾಣೆಗಳಿವೆ. ಸೈಬರ್‌ ಕ್ರೈಂ, ಸಿಇಎನ್‌ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಂಚನೆಗೊಳಗಾದವರು ಖಾತೆಗಳನ್ನು ಫ್ರೀಜ್‌ ಮಾಡಿ 70 ಕೋಟಿ ರೂ. ಉಳಿಸಲಾಗಿದೆ. ಎರಡು ವರ್ಷಗಳಲ್ಲಿ 43 ಪ್ರಕರಣಗಳಲ್ಲಿ 5 ಪ್ರಕರಣಗಳಲ್ಲಿ 18 ಆರೋಪಿಗಳನ್ನು ರಾಜಸ್ಥಾನ, ಹರಿಯಾಣ ಮತ್ತು ತೆಲಂಗಾಣದಲ್ಲಿ ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next