Advertisement

ಕೊಂಕಣಕ್ಕೆ 200 ವಿಶೇಷ ರೈಲುಗಳ ಸಂಚಾರ

05:08 PM Aug 12, 2020 | Suhan S |

ಮುಂಬಯಿ, ಆ. 11: ಆಗಸ್ಟ್‌ 22ರಿಂದ ಪ್ರಾರಂಭವಾಗುವ ಗಣೇಶ ಹಬ್ಬಕ್ಕೆ ಜನರು ಪ್ರಯಾಣಿಸಲು ರಾಜ್ಯ ಸರಕಾರ ಅನುಮತಿ ನೀಡಿದ್ದರಿಂದ ಮುಂದಿನ ವಾರದಿಂದ ಮುಂಬಯಿ ಮತ್ತು ಕೊಂಕಣ ನಡುವೆ ಸುಮಾರು 200 ರೈಲುಗಳು ಚಲಿಸುವ ಸಾಧ್ಯತೆಯಿದೆ.

Advertisement

ಸದ್ಯ ಮುಂಬಯಿಂದ ದೇಶದ ವಿವಿಧ ಭಾಗಗಳಿಗೆ ರೈಲು ಸೇವೆ ಚಾಲನೆಯಲ್ಲಿದ್ದರೂ ರಾಜ್ಯದೊಳಗಿನ ಸ್ಥಳಗಳಿಗೆ ಟಿಕೆಟ್‌ ಮಾರಾಟವಾಗುತ್ತಿಲ್ಲ. ರೈಲುಗಳನ್ನು ನಿರ್ವಹಿಸಲು ರಾಜ್ಯ ಸರಕಾರ ಆಗಸ್ಟ್‌ 7ರಂದು ರೈಲ್ವೇಗೆ ಮನವಿ ಮಾಡಿತ್ತು. ಕೊಂಕಣ ರೈಲ್ವೇ ಮತ್ತು ಕೇಂದ್ರ ರೈಲ್ವೇ (ಸಿಆರ್‌) ಸೇವೆಗಳಿಗಾಗಿ ಯೋಜನೆಗಳನ್ನು ರೂಪಿಸಿದ್ದು, ಆದರೆ ಎಷ್ಟು ಕಾರ್ಯ ನಿರ್ವಹಿಸುತ್ತವೆ ಎಂಬ ನಿರ್ಧಾರವು ರೈಲ್ವೇ ಮಂಡಳಿ ಮತ್ತು ಗೃಹ ಸಚಿವಾಲಯವನ್ನು ಅವಲಂಬಿಸಿರುತ್ತದೆ. ಕೊಂಕಣಕ್ಕೆ ರೈಲುಗಳನ್ನು ಓಡಿಸದ ವೆಸ್ಟರ್ನ್ ರೈಲ್ವೇ, ಬೇಡಿಕೆಯನ್ನು ಪೂರೈಸಲು ಕೆಲವು ರೈಲುಗಳನ್ನು ಓಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೊಂಕಣಕ್ಕೆ ರೈಲುಗಳು ಆಗಸ್ಟ್‌ 11 ಮತ್ತು ಸೆಪ್ಟಂಬರ್‌ 6ರ ನಡುವೆ ಚಲಿಸುವ ಸಾಧ್ಯತೆಯಿದ್ದು, ಥಾಣೆ, ಪನ್ವೆಲ್‌, ಚಿಪ್ಲುಣ್‌, ರತ್ನಾಗಿರಿ ಮತ್ತು ಸಾವಂತ್ವಾಡಿ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುವ ಸಾಧ್ಯತೆಯಿದೆ. ನಾವು ತಲಾ 100 ಅಪ್‌ ಮತ್ತು ಡೌನ್‌ ಸೇವೆಗಳನ್ನು ಓಡಿಸುತ್ತೇವೆ. ಮುಂಬಯಿಯಿಂದ ದಿನಕ್ಕೆ ನಾಲ್ಕು ರೈಲುಗಳು ಇರುತ್ತವೆ. ಬೇಡಿಕೆ ತೀರಾ ಕಡಿಮೆ ಎಂದು ನಾವು ನಿರೀಕ್ಷಿಸಿದ್ದರೂ ಸಹ, ಸಾಮಾನ್ಯ ಸೇವೆಗಳನ್ನು ಒಳಗೊಂಡಂತೆ ಕಳೆದ ವರ್ಷವೂ ಇದೇ ರೀತಿಯ ಸಂಖ್ಯೆಯಲ್ಲಿ ರೈಲುಗಳು ಓಡುತ್ತಿತ್ತು. ಆದರೆ ಈ ಬಾರಿ ಮುಂಗಡ ಬುಕ್ಕಿಂಗ್‌ ಹೊಂದಿರುವವರು ಮಾತ್ರ ಪ್ರಯಾಣಿಸಬಹುದು ಎಂದು ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬಯಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಹರ್ಷ್‌ ಕೋಟಕ್‌ ಮಾತನಾಡಿ, ಖಾಸಗಿ ಬಸ್ಸುಗಳು ಶೇ. 50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೇಡಿಕೆ ಕಳಪೆಯಾಗಿದೆ ಎಂದು ಹೇಳಿದ್ದಾರೆ.

ಮುಂಜಾಗೃತೆ ಕ್ರಮ : ಮುಂಬಯಿ-ಕೊಂಕಣ ನಡುವೆ ಓಡಲಿರುವ ಈ 200 ರೈಲುಗಳಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ. ಪ್ರಯಾಣಿಕರು ನಿಲ್ದಾಣದ ಪ್ರವೇಶ ಮತ್ತು ಪ್ರಯಾಣದ ಸಮಯದಲ್ಲಿ ಮುಖಗವಸು ಧರಿಸುವುದು ಮತ್ತು ಥರ್ಮಲ್‌ ಸ್ಕ್ರೀನಿಂಗ್‌ಗಾಗಿ 90 ನಿಮಿಷಗಳ ಮೊದಲು ನಿಲ್ದಾಣವನ್ನು ತಲುಪಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next