Advertisement

ಸಾರಿ ಹೇಳುವ ಮಾತು

07:19 PM Nov 17, 2017 | |

ಫ್ಯಾಷನ್‌ ಎನ್ನುವುದು ಒಂದೇ ರೀತಿ ಇರುವುದಿಲ್ಲ. ಅದು ಕಾಲ ಕಾಲಕ್ಕೆ ಬದಲಾಗುತ್ತಲೇ ಇದೆ. ಸದ್ಯದ ಫ್ಯಾಶನ್‌ನಲ್ಲಿರುವ ಡ್ರೆಸ್‌ ಖರೀದಿಸಿ ಧರಿಸುವಷ್ಟರಲ್ಲಿ ಆ ಫ್ಯಾಶನ್ನೂ ಹೊರಟು ಹೋಗಿ ಹೊಸ  ಫ್ಯಾಶನ್‌ ಬಂದಿರುತ್ತದೆ. ನಾವು ಧರಿಸುವ ಉಡುಗೆ-ತೊಡುಗೆಗಳು, ಆಭರಣಗಳು ಎಲ್ಲವೂ ಈಗ ಹಳೆಯ ಫ್ಯಾಷನ್ನಿನಿಂದ ಪ್ರೇರಿತವಾಗಿವೆ. ಇದು ಈಗಿನ ಹೊಸ ಟ್ರೆಂಡ್‌. ಹಳೆಯ ಫ್ಯಾಷನ್‌ ಜತೆಗೆ ಹೊಸ ಫ್ಯಾಶನ್‌ ಮಿಶ್ರಣಗೊಂಡು ಹೊಸತನವನ್ನು ಅಳವಡಿಸಿಕೊಳ್ಳುತ್ತ¤ ಜನರನ್ನು ಮತ್ತಷ್ಟು ಆಕರ್ಷಿಸುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಪ್ಲೆ„ನ್‌ ಸೀರೆಗಳು.

Advertisement

ಹೆಣ್ಣಿಗೆ ಚೆಂದದ ಉಡುಗೆ ಎಂದರೆ ಸೀರೆ. ಸೀರೆ ಎಂದರೆ ಸಾಕು, ಹೆಣ್ಮಕ್ಕಳ ಮುಖ ಊರಗಲವಾಗುತ್ತದೆ. ಸೀರೆಗೆ ನಮ್ಮ ದೇಶದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಇದು ನಮ್ಮ ಸಾಂಪ್ರದಾಯಿಕ ಉಡುಗೆ ಮಾತ್ರವಲ್ಲದೆ, ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ಇಂದು ಹೆಣ್ಣುಮಕ್ಕಳು ಧರಿಸುವ ಸಲ್ವಾರ್‌, ಚೂಡಿದಾರ್‌, ಲಂಗದಾವಣಿ, ಲೆಹಂಗಾ, ಜೀನ್ಸ್‌, ಸ್ಕಟ್‌-ಬ್ಲೌಸ್‌, ಹಾಫ್ ಸಾರಿ- ಹೀಗೆ ವೈವಿಧ್ಯಮಯ ಉಡುಗೆಗಳ ನಡುವೆ ಇಂದಿನವರೆಗೂ ಉಡುಪುಗಳ ಪಟ್ಟದರಸಿಯಾಗಿ ಗೌರವದ ಸ್ಥಾನದಲ್ಲಿ ಮೆರೆಯುತ್ತಿರುವುದು ಸೀರೆಯೇ. ಇಂದಿನ ಹೆಣ್ಮಕ್ಕಳು ಎಷ್ಟೇ ಮಾಡ್‌ ಆದರೂ ಸೀರೆಯನ್ನೂ ಅಷ್ಟೇ ಇಷ್ಟಪಡುತ್ತಾರೆ. ಸೀರೆ ಯಾವತ್ತಿಗೂ “ಔಟ್‌ ಆಫ್ ಫ್ಯಾಷನ್‌’ ಆಗಿಯೇ ಇಲ್ಲ !

ಸೀರೆಯಲ್ಲೂ ದಿನನಿತ್ಯದ ಬಳಕೆಯ ಪ್ರತಿ ಮನೆಯ ಅಮ್ಮನ ವಾಯಿಲ್‌ ಸೀರೆಯಿಂದ ಹಿಡಿದು, ಅಪ್ಪಟ ಜರಿಯವರೆಗೂ ವೈವಿಧ್ಯಮಯ ಸೀರೆಗಳಿವೆ. ಬೆಲೆಯೂ ಅಷ್ಟೇ, ಕಡಿಮೆ ದರದಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗೂ ಸಾಗುತ್ತದೆ. ಜರಿಯ ಸೀರೆಗಳು, ರೇಷ್ಮೆ ಸೀರೆಗಳು, ಸಿಲ್ಕ್ ಸೀರೆಗಳು, ಶಿಫಾನ್‌ ಸೀರೆಗಳು, ಕಾಟನ್‌ ಸೀರೆಗಳು, ಜೂಟ್‌ ಸೀರೆಗಳು, ಪಾಲಿಸ್ಟರ್‌ ಸೀರೆಗಳು- ಹೀಗೆ ವೈವಿಧ್ಯಮಯ ಜಗತ್ತು. ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಡಿಸಾೖನರ್‌ ಸೀರೆ. ಈಗ ಎಲ್ಲಿ ನೋಡಿದರೂ ಡಿಸಾೖನರ್‌ ವಿನ್ಯಾಸದ ಸೀರೆಗಳದ್ದೇ ಅಬ್ಬರ. ಒಂದು ಮದುವೆ ಸಮಾರಂಭಕ್ಕೆ ಹೋಗಿ ನೋಡಿ, ಯುವತಿಯರಿಂದ ಹಿಡಿದು ಮಧ್ಯವಯಸ್ಸಿನವ‌ರೆಗೂ ಎಲ್ಲ ಹೆಣ್ಣು ಮಕ್ಕಳೂ ಡಿಸೈನರ್‌ ಸೀರೆಯಲ್ಲೇ ಮಿಂಚುತ್ತಿರುತ್ತಾರೆ. ಹಾಗಾಗಿ ಅಲ್ಲಿರುವವರಿಗೆ, ಇವರಲ್ಲಿ “”ಯಾರು ಮದುವೆ ಹೆಣ್ಣು?” ಎಂದು ಪತ್ತೆ ಮಾಡುವುದು ಕಷ್ಟವಾದರೂ ಅಚ್ಚರಿಯಿಲ್ಲ !

ಅಂದ ಹಾಗೆ, ಈ ಅದ್ದೂರಿಯ ನಡುವೆಯೂ ಸಾದಾ-ಸೀದಾ ಸೀರೆ, ಸಿಂಪಲ್‌ ಬ್ಲೌಸ್‌ಗಳನ್ನು ಇಷ್ಟಪಡುವವರೂ ಇದ್ದಾರೆ. ಈಗ ಮದುವೆಗೆಂದೇ ಭಾರಿ ಜರಿಯ, ರೇಷ್ಮೆ ಸೀರೆ ಉಡುವ ಕಾಲವೂ ಇದಲ್ಲ. ಹಗುರವಾದ ರೇಷ್ಮೆ ಮಿಶ್ರಿತ ಕಾಟನ್‌ ಅಥವಾ ಮೃದು ಜಾರ್ಜೆಟ್‌, ನೆಟ್‌ ಸೀರೆ, ಡಿಸೈನರ್‌ ಬ್ಲೌಸ್‌ ಧರಿಸಿ ಪ್ಲೆ„ನ್‌ ಸೀರೆಗಳನ್ನು ತೊಡುವುದು- ಇವೇ ಹೊಸ ಸ್ಟೈಲ್‌! 

ಮರಳಿದ ಸಾದಾ ಸೀರೆ
ಪ್ಲೆ„ನ್‌ ಸೀರೆ ಭಾರತದ ಒಂದು ಹಳೆಯ ಫ್ಯಾಷನ್‌ ಆದರೂ ಇಂದಿಗೂ ಜನರ ಫೆವರಿಟ್‌ ಟ್ರೆಂಡ್‌ ಆಗಿದೆ. ವಿವಿಧ ಮಾದರಿಯ ಸೀರೆಗಳಿದ್ದರೂ ಪ್ಲೆ„ನ್‌ ಸೀರೆ ಇಂದು ಕೇವಲ ಭಾರತೀಯ ಮಹಿಳೆಯರ ಅಚ್ಚುಮೆಚ್ಚಿನ ವಸ್ತ್ರವಾಗಿ ಉಳಿದಿಲ್ಲ, ಬದಲಾಗಿ ಫಾರಿನ್‌ ಜನರು ಸಹ ಹೆಚ್ಚಾಗಿ ಇದನ್ನು ಬಳಕೆ ಮಾಡುತ್ತಾರೆ.

Advertisement

ಈ ಸೀರೆಗೆ ಸೆರಗಿಲ್ಲ, ಬಾರ್ಡರ್‌ ಇಲ್ಲ, ರವಿಕೆಯೂ ಸೀರೆಯದೇ ರನ್ನಿಂಗ್‌ ಡಿಸೈನ್‌. ಡಿಸಾೖನರ್‌ ಸೀರೆಯಂತೆ ಯಾವುದೇ ಚಮಕಿ ಅಲಂಕಾರವೂ ಇಲ್ಲ. ಜತೆಗೆ ಯಾವುದೇ ಸಿಂಗಾರ ಕಾಣದ, ಚಿತ್ತಾರವಿಲ್ಲದ ಸೀದಾ ಸಾದಾ ಸಿಂಪಲ್‌ ಸೀರೆ ಪ್ಲೆ„ನ್‌ ಸೀರೆ. ಹಳದಿ, ನೀಲಿ, ಹಸಿರು, ಪಿಂಕ್‌, ಆರೇಂಜ್‌, ಕೆಂಪು, ನೇರಳೆ, ಬಿಳಿ ಬಣ್ಣಗಳೊಂದಿಗೆ ಲೆಮನ್‌ ಹಳದಿ, ಲೈಟ್‌ ಪಿಂಕ್‌, ಆಕಾಶ ನೀಲಿ ಬಣ್ಣದವು ತುಸು ಹೆಚ್ಚೇ ಮನಮೋಹಕ! ಯಾವುದೇ ರೀತಿಯ ವ್ಯಕ್ತಿತ್ವಕ್ಕೂ ಸುಂದರವಾಗಿ ಕಾಣುವ ಈ ಪ್ಲೆ„ನ್‌ ಸೀರೆ ಉಡಲಿಕ್ಕೆ ಸುಲಭವಷ್ಟೇ ಅಲ್ಲದೆ ಕಂಫ‌ರ್ಟೆಬಲ್‌ ಕೂಡ. ನಿರ್ವಹಣೆಯೂ ಕಷ್ಟವಲ್ಲ. ಒಟ್ಟಿನಲ್ಲಿ ಪ್ಲೆ„ನ್‌ ಸೀರೆ ಸಿಂಪಲ್‌ ಇರಬಹುದು, ಆದರೆ ಅದರ ಸ್ಟೈಲ್‌ ಮಾತ್ರ ಸೂಪರ್‌.

ಫ್ಯಾಶನೇಬಲ್‌ ಟಚ್‌
ಪ್ಲೆ„ನ್‌ ಸೀರೆಯ ಒಂದು ವಿಶೇಷತೆಯೆಂದರೆ, ಅದು ಯಾವತ್ತೂ ಔಟ್‌ಆಫ್ ಟ್ರೆಂಡ್‌ ಆಗಿಯೇ ಇಲ್ಲ. ಸೀರೆಯ ಡಿಸೈನ್‌ಗಳಲ್ಲಿ ಚೇಂಜಸ್‌ ಬಂದಿರಬಹುದು. ಆದ್ರೆ ಸೀರೆ ಮಾತ್ರ ಯಾವತ್ತೂ ಟ್ರೆಂಡ್‌ನ‌ಲ್ಲಿಯೇ ಇದೆ. ಒಂದು ಕಾಲದಲ್ಲಿ ಪ್ಲೆ„ನ್‌ ಸೀರೆ ಮಹಿಳೆಯರ ಪ್ರಿಯವಾದ ಸೀರೆಗಳಲ್ಲಿ ಒಂದಾಗಿತ್ತು. ನಿಜ ಹೇಳಬೇಕೆಂದರೆ, ಈಗಲೂ ಈ  ಸೀರೆಯ ಮೋಹ ಅವರನ್ನು ಬಿಟ್ಟುಹೋಗಿಲ್ಲ. ಈ ಸರಳ ಪ್ಲೆ„ನ್‌ ಸೀರೆಯನ್ನು ಸ್ಟೈಲಿಶ್‌ ಆಗಿ ಕಾಣಿಸಲು ಸೀರೆಯಲ್ಲಿ ಹಲವಾರು ವರ್ಕ್‌ ಗಳನ್ನು ಮಾಡಲಾಗಿದೆ. ಸೀರೆಯ ಅಂಚಿಗೆ ಲೇಸ್‌, ಗೋಲ್ಡನ್‌ ಲೇಸ್‌, ಸಿಲ್ವರ್‌ ಲೇಸ್‌, ಬಾರ್ಡರ್‌ ಇರುವ ಪಟ್ಟಿಗಳನ್ನೂ ಫಿಕ್ಸ್‌ ಮಾಡಲಾಗಿದೆ. ಜೊತೆಗೆ ಕಸೂತಿ ವಿನ್ಯಾಸ, ಜರಿಯ ಹೆಣಿಗೆ ಹಾಕುವುದು, ಪ್ಯಾಚ್‌ ವರ್ಕ್‌ ಮಾಡುವುದು, ಮಿರರ್‌, ಸ್ಟೋನ್‌ಗಳನ್ನು ಇರಿಸಿ ಫ್ಯಾನಿ ಸೀರೆಯಂತೆ ಅಂದಗೊಳಿಸಲಾಗಿದೆ. ಈ ಪ್ಲೇನ್‌ ಸ್ಟೋನ್‌ವರ್ಕ್‌, ಪ್ಯಾಚ್‌ವರ್ಕ್‌ ನ ಸೀರೆಗಳು ಪಾರ್ಟಿಗಳಿಗೆ ಲುಕ್‌ ನೀಡುತ್ತವೆ. ಹಲವಾರು ಆಯ್ಕೆಗಳೂ ಇವೆ. ಕೆಲವರಿಗೆ ಈ ಸೀರೆ ಉಟ್ಟರೆ “ಮೈಕಾಣಿಸುತ್ತದೆ, ಮುಜುಗರವೆನಿಸುತ್ತದೆ’ ಎಂದಾದರೆ, ಇದರಲ್ಲಿ  ಶಿಫಾನ್‌, ಜಾರ್ಜೆಟ್‌ ಪ್ಲೆ„ನ್‌ನ ಸೀರೆಗಳ ಸೂಕ್ತ ಆಯ್ಕೆಯೂ ಇದೆ.

ಡಿಸಾೖನರ್‌ ಬ್ಲೌಸ್‌ನೊಂದಿಗೆ
ಈಗ ಸೀರೆಗೆ ಕಾಂಟ್ರಾಸ್ಟ್‌ ಬ್ಲೌಸ್‌ ತೊಡುವುದು ಸ್ಟೈಲ್‌ ಅನಿಸಿಬಿಟ್ಟಿದೆ. ಈ ಫ್ಯಾಶನ್‌  ಹೊಸತೇನೂ ಅಲ್ಲ, ಪ್ಲೆ„ನ್‌ ಸೀರೆಯೂ ಹಾಗೇ ಡಿಸೈನರ್‌ ಬ್ಲೌಸ್‌ನಿಂದ ಡಿಮ್ಯಾಂಡ್‌ ಸೃಷ್ಟಿಸಿಕೊಂಡಿದೆ. ಡಿಸೈನರಿ ಬ್ಲೌಸ್‌ಗೆ ಪ್ಲೆ„ನ್‌ ಸೀರೆ ಬ್ಯೂಟಿಫ‌ುಲ್‌ ಕಾಂಬಿನೇಷನ್‌. ಬೀvÕ…, ಜರ್ದೋಸಿ, ಸ್ಟೋನ್‌ಗಳಿಂದ ಅಲಂಕರಿಸಿ ಫ್ಯಾಬ್ರಿಕ್‌ನಿಂದ ತಯಾರಾದ ಆಕರ್ಷಕ ಬ್ಲೌಸ್‌ಗಳು ಈ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬ್ಯಾಕ್‌ಲೆಸ್‌, ಟೈಯಿಂಗ್‌, ಸ್ಲಿವ್‌ಲೆಸ್‌ ಬ್ಲೌಸ್‌ಗಳು ಸಹ ಪ್ಲೇನ್‌ಸಿàರೆಗಳಿಗೆ ಗ್ಲಾಮರಸ್‌ ಲುಕ್‌ ನೀಡುತ್ತವೆ. ಪ್ಲೆ„ನ್‌ ಜಾರ್ಜೆಟ್‌ ಸೀರೆಗೆ ಎಂಬ್ರಾಯಿಡರಿ ಕೆಲಸ ಮಾಡಿದ ರವಿಕೆ ಆಕರ್ಷಕ. ಜತೆಗೆ ಸದ್ಯದ ಫ್ಯಾಶನ್‌ ಟ್ರೆಂಡ್‌ನ‌ಲ್ಲಿರುವ ಕಚ್‌f ಬ್ಲೌಸ್‌ಗಳೂ ರಿಚ್‌ ಲುಕ್‌ ನೀಡುತ್ತವೆ.

ಆಕ್ಸೆಸರೀಸ್‌ 
.ಡಿಸೈನರ್‌ ಸೀರೆಗೆ ಹೋಲಿಸಿದರೆ ಪ್ಲೆ„ನ್‌ ಸೀರೆಗೆ ಆಕ್ಸೆಸರೀಸ್‌ ಎದ್ದು ಕಾಣುತ್ತದೆ. ಮ್ಯಾಚಿಂಗ್‌ ಕೂಡ ಸುಲಭ. 
.ಪ್ಲೆ„ನ್‌ ಸೀರೆಗೆ ಧರಿಸುವ ಆಭರಣ ಎದ್ದು ಕಾಣುವಂತಿರಬೇಕು.
.ತ್ವಚೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೀರೆಗಳನ್ನೇ ಆಯ್ಕೆ ಮಾಡಿಕೊಳ್ಳಿ.
.ಹೈಹೀಲ್ಡ್‌ ಚಪ್ಪಲಿ ಚೆಂದ ಕಾಣಿಸುತ್ತದೆ. 
.ಮ್ಯಾಚಿಂಗ್‌ ಬಿಂದಿ, ಬಳೆ, ಕಿವಿಯೋಲೆ ಗ್ರ್ಯಾಂಡ್‌ ಲುಕ್‌ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next