ಬೆಂಗಳೂರು: ” ರೀ ಅಪ್ಪಚ್ಚು ರಂಜನ್ ಅವರೇ, ನೀವು ಪದೇ ಪದೇ ಕೇಳಿದರೆ ಶಾಸಕರ ನಿಧಿಯಿಂದಲೇ ದುಡ್ಡು ಕೊಡಿ ಎಂದು ಹೇಳುತ್ತಾರೆ. ಜಾಸ್ತಿ ಒತ್ತಾಯ ಮಾಡಬೇಡಿ ” ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸರಕಾರವನ್ನು ವ್ಯಂಗ್ಯವಾಡಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಕೊಡಗು ಜಿಲ್ಲೆಯಲ್ಲಿ ಕೇವಲ 22 ಕಡೆ ಮಾತ್ರ ಸಿಸಿಟಿವಿ ಅಳವಡಿಸಲಾಗಿದೆ. ಗಡಿ ಜಿಲ್ಲೆಯಾಗಿರುವುದರಿಂದ ಇಲ್ಲಿ ಹೆಚ್ಚು ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಂಗಳೂರು ನಗರದಲ್ಲಿ ಮಾತ್ರ ಸರಕಾರದ ವತಿಯಿಂದ ಸಿಸಿಟಿವಿ ಅಳವಡಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತದೆ. ಆದರೆ ಜಿಲ್ಲೆಗಳಲ್ಲಿ ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ಖಾಸಗಿಯವರ ದೃಶ್ಯಾವಳಿ ಪಡೆದು ಪರಿಶೀಲನೆ ನಡೆಸುತ್ತೇವೆ ಎಂದರು.
ಇದನ್ನೂ ಓದಿ:ರಸ್ತೆ ಬದಿ ತ್ಯಾಜ್ಯ ಎಸೆತ: ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಇದಕ್ಕೆ ಅಪ್ಪಚ್ಚು ರಂಜನ್ ಆಕ್ಷೇಪ ವ್ಯಕ್ತಪಡಿಸಿದಾಗ, ಸ್ಪೀಕರ್ ಕಾಗೇರಿ ಅಸಹನೆ ವ್ಯಕ್ತಪಡಿಸಿದರು. ಸರಕಾರ ಜಿಲ್ಲೆಗಳಲ್ಲೂ ಸಿಸಿಟಿವಿ ಅಳವಡಿಸಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದರು.