Advertisement

ಸ್ಪೀಕರ್‌ ರೆಡಿಯಾಯ್ತು!

10:54 AM Feb 26, 2018 | Team Udayavani |

“ಧೈರ್ಯಂ’ ಚಿತ್ರದ ನಂತರ ನಿರ್ದೇಶಕ ಶಿವ ತೇಜಸ್‌ ಸದ್ದಿಲ್ಲದೇ “ಲೌಡ್‌ ಸ್ಪೀಕರ್‌’ ಎಂಬ ಸಿನಿಮಾ ಆರಂಭಿಸಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಅದರ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಅಜೇಯ್‌ ರಾವ್‌ ಬಿಡುಗಡೆ ಮಾಡಿದರು. ಈ ಚಿತ್ರವನ್ನು ಡಾ.ಕೆ.ರಾಜು ಅವರು ನಿರ್ಮಿಸುತ್ತಿದ್ದಾರೆ.

Advertisement

ಈ ಹಿಂದೆ “ಧೈರ್ಯಂ’ ಸಿನಿಮಾ ನಿರ್ಮಿಸಿದ ರಾಜು ಅವರಿಗೆ ಇದು ಎರಡನೇ ಚಿತ್ರ. ಸಂಪೂರ್ಣ ಹೊಸಬರೇ ತುಂಬಿಕೊಂಡಿರುವ ಈ ಚಿತ್ರದಲ್ಲಿ ಫೇಸ್‌ಬುಕ್‌, ವಾಟ್ಸಾಪ್‌ ಸೇರಿದಂತೆ ಸೋಶಿಯಲ್‌ ಮೀಡಿಯಾಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಯುವ ಜನತೆ ಯಾವ ರೀತಿ ದಾರಿ ತಪ್ಪುತ್ತದೆ, ಸಂಬಂಧಗಳು ಹೇಗೆ ಮೌಲ್ಯ ಕಳೆದುಕೊಳ್ಳುತ್ತವೆ ಎಂಬ ಅಂಶವನ್ನು ಹೇಳಲಾಗಿದೆಯಂಥೆ.

ಸೀರಿಯಸ್‌ ವಿಷಯನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಲು ಹೊರಟಿರುವ ಶಿವ ತೇಜಸ್‌, ಇದೊಂದು ಕಾಮಿಡಿ ಥ್ರಿಲ್ಲರ್‌ ಸಿನಿಮಾವಂತೆ. ಚಿತ್ರದಲ್ಲಿ ನೀನಾಸಂ ಭಾಸ್ಕರ್‌, ಅಭಿಷೇಕ್‌, ಸುಮಂತ್‌ ಭಟ್‌, ಕಾರ್ತಿಕ್‌ ರಾವ್‌, ಕಾವ್ಯಾ ಶಾ, ಅನುಷಾ, ದಿಶಾ ಪ್ರಮುಖ ಪಾತ್ರ ಮಾಡಿದ್ದಾರೆ. ಜೊತೆಗೆ ರಂಗಾಯಣ ರಘು ದತ್ತಣ್ಣ ನಟಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಶಿಷ್ಯ ಹರ್ಷವರ್ಧನ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.  ಕಿರಣ್‌ ಹಂಪಾಪುರ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next