Advertisement
ರಾಜೀನಾಮೆ ಪತ್ರಕ್ಕೆ ನನ್ನ ಸಮ್ಮುಖದಲ್ಲೇ ಸ್ವಹಸ್ತಾಕ್ಷರದಲ್ಲೇ ಸಹಿ ಮಾಡಬೇಕು ನೀವು, ಯಾವುದೇ ಒತ್ತಡದಿಂದ ರಾಜೀನಾಮೆ ಕೊಡುತ್ತಿಲ್ಲ ಎಂದು ಇದನ್ನು ಸ್ವೀಕರಿಸುತ್ತೇನೆ ಎಂದು ತಮಾಷೆ ಮಾಡಿದ ಸ್ಪೀಕರ್, ಕುಶಲೋಪರಿ ವಿಚಾರಿಸಿದರು.
ಹೊಸದಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಸಹಿ ಮಾಡಿದೆ ಎಂದರು. ಅಷ್ಟರಲ್ಲೇ ಮತ್ತೊಂದು ಬೇಡಿಕೆ ಇಟ್ಟ ಸ್ಪೀಕರ್, ಮಂಗಳೂರು ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಬಂದರು ಅಭಿವೃದ್ಧಿ, ಮೀನುಗಾರಿಕೆಗೆ ಸಂಬಂಧಿಸಿದ ಒಂದಿಷ್ಟು ನೆರವು ಕೇಂದ್ರದಿಂದ ಬರಬೇಕಾಗುತ್ತದೆ ಎಂದು ಪ್ರಸ್ತಾವಿಸಿದರು. ಪ್ರಧಾನಮಂತ್ರಿಗಳು ಗೌರವ ಇಟ್ಟುಕೊಂಡಿದ್ದಾರೆ. ರಾಜ್ಯಕ್ಕೆ ಏನೇನು ಒಳ್ಳೆಯದು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಉತ್ತರಿಸಿದರು.
Related Articles
Advertisement