Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ಯಶಸ್ವಿ ಅಧಿವೇಶನ ನಡೆದಿದೆ,ಈ ವರ್ಷ ಒಟ್ಟು 40 ದಿನ ಅಧಿವೇಶನ ಮಡಿಸಿದಂತೆ ಆಗಿದೆ.ಸದನದಲ್ಲಿ 150 ಸ್ಟಾರ್ಡ್ ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಸದನವನ್ನು ಚೆನ್ನಾಗಿ ನಡೆಸುವ ಉದ್ದೇಶದಿಂದ ಭಾಗವಹಿಸಿದ್ದಾರೆ. ಸದನವನ್ನು ಹೆಚ್ಚು ಕಾಲ ನಡೆಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ ಎಂದರು.
Related Articles
ಶಾಸಕರ ಭವನ ಆಗಬೇಕು ಎಂಬ ಅಪೇಕ್ಷೆ ಇದೆ. ಅದರ ಅಗತ್ಯವೂ ಇದೆ. ಬಿಎಸಿಯಲ್ಲೂ ಇದು ಚರ್ಚೆ ಆಗಿದೆ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಲುವ ಭರವಸೆ ನೀಡಿದ್ದಾರೆ ಎಂದರು.
Advertisement
ಕದ್ದುಮುಚ್ಚಿ ಮಸೂದೆ ಮಂಡನೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಸೂದೆ ಮಂಡನೆಯಾಗುವ ಮುಂಚಿನ ದಿನ ನಾನು ಕಾರ್ಯಕಲಾಪದ ನಿರ್ಣಯ ಮಾಡುತ್ತೇನೆ. ನಾನು ಅಜೆಂಡಾ ಸಿದ್ದಪಡಿಸುವಾಗ ಆ ಬಿಲ್ ಕಾಪಿ ಬಂದಿರಲಿಲ್ಲ. ಹೀಗಾಗಿ ನಾನು ಅಜೆಂಡಾದಲ್ಲಿ ಅದನ್ನು ಹಾಕಲಿಲ್ಲ. ಊಹೆ ಮೇರೆಗೆ ಅದನ್ನು ಹಾಕಲು ಸಾಧ್ಯವಿಲ್ಲ. ಮರುದಿನ ಬಿಲ್ ಕಾಪಿ ಬಂದಿದೆ. ಆ ಮೇಲೆ ಪೂರಕ ಅಜೆಂಡಾ ಹಾಕಿದ್ದೇನೆ. ಅದಕ್ಕೆ ನಿಯಮಾವಳಿಯಲ್ಲಿ ಅವಕಾಶ ಇದೆ. ಸದನದಲ್ಲಿ ಕೋರಂ ಆದ ಬಳಿಕ ಸದನದಲ್ಲಿ ಬಿಲ್ ಮಂಡಿಸುವ ಪ್ರಕ್ರಿಯೆ ಮಾಡಿದ್ದೇನೆ. ಆದರೂ ಈ ಆರೋಪ ಬಗ್ಗೆ ಏನು ಹೇಳ ಬೇಕು ಎಂದು ಅರ್ಥ ಆಗುತ್ತಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಮುಂದೂಡುವ ಮುನ್ನ ವಿಪ್ ನ ಕರೆಸಿ ಮಧ್ಯಾಹ್ನ ಮಸೂದೆ ಮಂಡಿಸುತ್ತೇನೆ ಎಂದು ಹೇಳಿದ್ದೆ. ಅಂದು ಪ್ರತಿಪಕ್ಷ ನಾಯಕರು ಸದನದ ಒಳಗೆ ಬರಲು ತಡ ಮಾಡಿದರು. ಆದರೂ ಈ ರೀತಿ ಆರೋಪ ಮಾಡಿದರೆ ಯಾರು ಪ್ರಬುದ್ಧರು ಎಂದು ಪ್ರಶ್ನೆ ಮಾಡಬೇಕು. ಸದನದಲ್ಲಿ ನಿಯಮಾವಳಿ ಪ್ರಕಾರ ಎಲ್ಲವೂ ಪ್ರಕ್ರಿಯೆ ಆಗಿದೆ ಎಂದರು.
ಸಮಯದ ಇತಿಮಿತಿಯಲ್ಲಿ ಎಲ್ಲವೂ ಆಗಬೇಕು. ಹೆಚ್ಚಿನ ಕಲಾಪ ನಡೆದಿದ್ದರೆ ಚರ್ಚೆ ಆಗುತ್ತಿತ್ತು. ಸಮಯ ಹೆಚ್ಚು ಕೊಡಬೇಕಾಗಿತ್ತು.ಸಿದ್ದರಾಮಯ್ಯಗೆ ಚರ್ಚೆಗೆ ಒಂದು ತಾಸು ಕೊಟ್ಟಿದ್ದೇನೆ. ಅತಿವೃಷ್ಟಿ ಬಗ್ಗೆ ಅವರಿಗೆ ಹೆಚ್ಚು ಅವಕಾಶ ಕೊಟ್ಟಿದ್ದೇನೆ. ಸಮಯ ಇದ್ದಿದ್ದರೆ ಇನ್ನೂ ಸಮಯಾವಕಾಶ ಕೊಡುತ್ತಿದ್ದೆ. ಯಡಿಯೂರಪ್ಪ ಅವರು ಹೇಳಿದ ಮಾತನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಅವರ ಸಲಹೆ ಸೂಚನೆಗಳನ್ನು ಜಾರಿಗೊಳಿಸಲು ಯತ್ನಿಸುತ್ತೇನೆ ಎಂದರು.