Advertisement
ಉಳ್ಳಾಲದ ಕಡಲ್ಕೊರೆತ ಪೀಡಿತ ಪ್ರದೇಶಗಳಾದ ಕೋಟೆಪುರ, ಮೊಗವೀರ ಪಟ್ಣ, ಸೀಗ್ರೌಂಡ್, ನ್ಯೂ ಉಚ್ಚಿಲ,ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಮಾಹಿತಿ ನೀಡಿದ ಅವರು ಎಡಿಬಿ ಯೋಜನೆಯ ಮೂಲಕ ಕಡಲ್ಕೊರೆತ ತಡೆಯ ಬ್ರೇಕ್ ವಾಟರ್ ಕಾಮಗಾರಿ ನಡೆದ ಕಾರಣ ಮನೆಗಳಿಗೆ ಹಾನಿ ಉಂಟಾಗುವುದು ಬಹುತೇಕ ಕಡಿಮೆ ಆಗಿದೆ ಎಂದರು.
Related Articles
Advertisement
ಎಡಿಬಿ ಯೋಜನೆಯಡಿ ಉಳ್ಳಾಲ ಮೊಗವೀರಪಟ್ಣದಲ್ಲಿ ನಡೆದ ಶಾಶ್ವತ ಕಾಮಗಾರಿಯ ಸಂದರ್ಭದಲ್ಲಿ ಸಮುದ್ರದ ಮದ್ಯದಲ್ಲಿ ಹಾಕಿರುವ 2 ರೀಫ್ ಮಾದರಿಯ ಮದ್ಯದ ಭೂ ಪ್ರದೇಶ ಕಡಲ್ಕೊರೆತಕ್ಕೆ ಈಡಾಗುತ್ತಿದ್ದು, ತುರ್ತುಕ್ರಮವಾಗಿಇನ್ನೊಂದು ರೀಫ್ ಮಾದರಿಯನ್ನು ಅಳವಡಿಸಿದರೆ ಮೊಗವೀರಪಟ್ಣದ ಸಮಸ್ಯೆ ಪರಿಹಾರವಾಗಲಿದೆ ಎಂದು ಮೊಗವೀರ ಮುಖಂಡರಾದ ಭರತ್ ಉಳ್ಳಾಲ, ಸದಾನಂದ ಬಂಗೇರ, ಮತ್ತು ಸುಧೀರ್ ವಿ. ಅಮೀನ್, ದಯಾನಂದ್ ಅವರು ಯು.ಟಿ. ಖಾದರ್ ಅವರಿಗೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಖಾದರ್ ಮಾತನಾಡಿ, ಹಂತ ಹಂತವಾಗಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ನ್ಯೂ ಉಚ್ಚಿಲ ರಸ್ತೆ ಸಂಪರ್ಕ ಕಡಿತದ ಭೀತಿ
ನ್ಯೂ ಉಚ್ಚಿಲದ ವಾಸ್ಕೊ ರೆಸಾರ್ಟ್ ಮುಂದೆ ಕಡಲು ಪ್ರಕ್ಷುಬ್ಧಗೊಂಡಿದ್ದು,ಉಚ್ಚಿಲ-ಸೋಮೇಶ್ವರ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪ್ರದೇಶದ ಕಡಲ ತೀರದಲ್ಲಿರುವ ಯೋಗೀಶ್ ಅವರ ಮನೆಯು ಕೊಚ್ಚಿ ಹೋಗುವ ಹಂತದಲ್ಲಿದೆ. ನ್ಯೂ ಉಚ್ಚಿಲಕ್ಕೆ ಭೇಟಿ ನೀಡಿದ ಖಾದರ್ ಅವರು ಯೋಗೀಶ್ ಅವರನ್ನ ಭೇಟಿ ನೀಡಿ ಧೈರ್ಯ ತುಂಬಿದರು. ಮನೆ, ಸಂಪರ್ಕ ರಸ್ತೆಗೆ ಹಾನಿಯಾಗಲು ನಾವು ಬಿಡುವುದಿಲ್ಲ ತತ್ ಕ್ಷಣವೇ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಲು ಆದೇಶಿಸಿರುವುದಾಗಿ ಹೇಳಿದರು.
ಖಾಸಗಿ ಜಾಗಕ್ಕೆ ಕಲ್ಲು ಹಾಕಲು ನಿಯಮ ಜಾರಿ
ಕೆಲವರು ಸಮುದ್ರ ತೀರದ ತಮ್ಮ ಜಾಗದ ಮುಂದೆ ಅಲೆಗಳನ್ನು ನಿಯಂತ್ರಿಸಲು ಕಲ್ಲುಗಳನ್ನು ಹಾಕುತ್ತಿದ್ದಾರೆ. ಸಾರ್ವಜನಿಕ ರಸ್ತೆಯ ಜಾಗ ಬಿಟ್ಟು, ಭವಿಷ್ಯದ ಕಾಮಗಾರಿಗೆ ತೊಂದರೆ ಕೊಡದಂತೆ ಖಾಸಗಿಯವರುಅಧಿಕಾರಿ ಗಳಿಂದ ಒಪ್ಪಿಗೆ ತೆಗೆದೇ ಸಮುದ್ರ ತೀರಕ್ಕೆ ಕಲ್ಲುಗಳನ್ನು ಹಾಕುವ ಕಾಮಗಾರಿ ನಡೆಸಬೇಕೆಂಬ ನಿಯಮ ಮಾಡಿರುವುದಾಗಿ ಸ್ಪೀಕರ್ ಖಾದರ್‌ಹೇಳಿದರು. ಮಂಗಳೂರು ಸಹಾಯಕ ಕಮಿಷನರ್ ಹರ್ಷವರ್ಧನ್, ಉಳ್ಳಾಲ ತಾಲೂಕುತಹಶೀಲ್ದಾರ್ ಪುಟ್ಟರಾಜು, ಬಂದರು ಇಲಾಖೆ ಅಧಿಕಾರಿ ರಾಜೇಶ್, ಉಳ್ಳಾಲ ನಗರಸಭಾ ಕಮಿಷನರ್ ವಾಣಿ ವಿ. ಆಳ್ವ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ,ಕಂದಾಯ ಅಧಿಕಾರಿ ಪ್ರಮೋದ್ ಕುಮಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು,ಮುಖಂಡರಾದ ಸುರೇಶ್ ಭಟ್ನಗರ, ರವಿಶಂಕರ್ ಸೋಮೇಶ್ವರ, ಆಯೂಬ್‌ಮಂಚಿಲ, ಮಹಮ್ಮದ್ ಮುಕ್ಕಚ್ಚೇರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.