Advertisement

RS: ಸಂಸದ ಛಡ್ಡಾಗೆ ರಾಜ್ಯಸಭೆಯಲ್ಲಿ ನಾಯಕ ಸ್ಥಾನ ನೀಡಲು ಒಪ್ಪದ ಸಭಾಪತಿ ಧನ್ಕರ್‌

08:03 PM Dec 29, 2023 | Team Udayavani |

ನವದೆಹಲಿ: ರಾಜ್ಯಸಭೆಯಲ್ಲಿ ಪಕ್ಷದ ಹಂಗಾಮಿ ನಾಯಕನ ಸ್ಥಾನಕ್ಕೆ ಸಂಸದ ರಾಘವ್‌ ಛಡ್ಡಾರನ್ನು ನೇಮಿಸುವಂತೆ ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಮಾಡಿದ ಮನವಿಯನ್ನು ಸಭಾಪತಿ ಜಗದೀಪ್‌ ಧನ್ಕರ್‌ ತಿರಸ್ಕರಿಸಿದ್ದಾರೆ.

Advertisement

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆಪ್‌ ನಾಯಕ ಸಂಜಯ್‌ ಸಿಂಗ್‌ ಬದಲಾಗಿ ರಾಘವ್‌ ಛಡ್ಡಾರನ್ನು ನೇಮಿಸುವಂತೆ ಡಿ.14ರಂದು ಕೇಜ್ರಿವಾಲ್‌ ಧನಕ್ಕರ್‌ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ಇದು ಸಂಸತ್ತಿನ ಕಾಯ್ದೆಯಲ್ಲಿ ಮಾನ್ಯತೆ ಪಡೆದ ಪಕ್ಷಗಳು ಮತ್ತು ಗುಂಪುಗಳ ನಾಯಕರು ಹಾಗೂ ಮುಖ್ಯ ಸಚೇತಕರ ಕಾಯ್ದೆ-1998 ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳಲ್ಲಿ ಬರುತ್ತದೆ. ನಿಮ್ಮ ಮನವಿ ಕಾನೂನು ವ್ಯಾಪ್ತಿಗೆ ಒಳಪಡದೇ ಇರುವ ಹಿನ್ನೆಲೆಯಲ್ಲಿ ಅದನ್ನು ಅಂಗೀಕರಿಸಲು ಆಗುವುದಿಲ್ಲ’ ಎಂದು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next