Advertisement

ಜರಗನಹಳ್ಳಿ ಶಿವಶಂಕರ್‌ ಹನಿಗವನಗಳಲ್ಲಿ ನೇರ ನುಡಿ

12:30 PM Sep 24, 2018 | |

ಬೆಂಗಳೂರು: ಹನಿಗವನ ರಚಿಸುವವರಲ್ಲಿ ಜರಗನಹಳ್ಳಿ ಶಿವಶಂಕರ್‌ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದ್ದಾರೆ. 

Advertisement

ಕರ್ನಾಟಕ ವಿಕಾಸ ರಂಗ, ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ಕವಿ ಜರಗನಹಳ್ಳಿ ಶಿವಶಂಕರ್‌ ಅವರ 70ನೇ ಹುಟ್ಟಹಬ್ಬದ ಅಂಗವಾಗಿ ಏರ್ಪಡಿಸಿದ್ದ “ಸಾಹಿತ್ಯ ಸಹವಾಸ’ ಹಾಗೂ “ನದಿ ಕವನ ಸಂಕಲನ’,” ಪನ್ನೀರು ಹನಿಗವಿತೆಗಳು’, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶವಶಂಕರ್‌ ಅವರ ಹನಿಗವನದಲ್ಲಿ ನೇರ ನುಡಿ ಹೊಂದಿರುವುದನ್ನು ಕಾಣಬಹುದಾಗಿದ್ದು, ಈ ಕಾರಣದಿಂದಲೇ ಅವರು,ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.

ಹನಿಗವಿತೆಗಳ ಬಗ್ಗೆ ಸರಿಯಾದ ಅಭಿಪ್ರಾಯ ಕನ್ನಡದಲ್ಲಿ ಮೂಡದ ಕಾರಣ ಹನಿಗವಿತೆ ಗಂಭೀರ ಪ್ರಕಾರವಲ್ಲ ಎಂದು ಹಲವರು ಇದರಿಂದ ವಿಮುಖರಾದರು. ಹನಿಗವಿತೆಗಳ ಶಕ್ತಿಯನ್ನು ಅರಿತು ಅದರ ಪ್ರಚಾರ ಹೆಚ್ಚಾಗುವ ಕಾರ್ಯಕ್ರಮಗಳು ಆಗಬೇಕು ಎಂದು ಚಂಪಾ ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಮಾತನಾಡಿ,ನಮ್ಮ ನಡುವೆ ವೈಜ್ಞಾನಿಕ  ಗನಿಗವಿ ಎಂದರೆ, ಅದು ಜರಗನಹಳ್ಳಿ ಶಿವಶಂಕರ್‌ ಮಾತ್ರ. ಅವರ ಸಾಹಿತ್ಯದಲ್ಲಿ ಪ್ರಕೃತಿಗೆ ಹೆಚ್ಚಿನ ಸ್ಥಾನ ನೀಡುವ ಜೊತೆಗೆ, ಪ್ರಕೃತಿಯನ್ನು ಪ್ರತಿಯೊಬ್ಬರು ಓದುವಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಜೇಡ ಬಲೆ ಕಟ್ಟಿರುವ ಮಾದರಿಯಲ್ಲಿಯೇ ಜರಗನಹಳ್ಳಿ ಅವರ ಕವನವೂ ಇರುತ್ತದೆ. ಕೆಲವೇ ಅಕ್ಷರಗಳಲ್ಲಿ ಹಲವು ಅರ್ಥಗಳನ್ನು ನೀಡುವ ಕವನ ಅವರದಾಗಿದೆ ಎಂದ ಅವರು, ಹನಿಗವಿತೆಯಲ್ಲಿ 16 ಪ್ರಕಾರಗಳಿದ್ದು, ಒಂದೊಂದು ಪ್ರಕಾರವೂ ಸಹ ಅನುಭವ ಮತ್ತು ವಿಚಾರ ಸಮೀಕರಿಸುತ್ತದೆ ಎಂದು ತಿಳಿಸಿದರು.

Advertisement

ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಎನ್‌. ರಾಮನಾಥ್‌, ಸಂಘದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ, ಸಂಚಾಲಕರಾದ ಡಾ.ಸಂತೋಷ್‌ ಹಾನಗಲ್‌, ಕೆ.ಎಸ್‌.ಎಂ.ಹುಸೇನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

“ಕ್ರಾಂತಿ’ ಬದಲು “ದಂಗೆ’ ಅಂದ್ರು!: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಬಾಯಿತಪ್ಪಿ ಕ್ರಾಂತಿ ಎನ್ನುವ ಶಬ್ದದ ಬದಲು ದಂಗೆ ಎಂಬ ಪದ ಬಳಕೆ ಮಾಡಿದರು. ಈ ಹಿನ್ನೆಲೆಯಲ್ಲಿ ಕೆಲವರು ಅವರ ವಿರುದ್ಧ ಕೆಲವರು ದಂಗೆ ಎದ್ದರು.

ಇಂತಹ ದ್ವಂದ್ವ, ವಿಪರ್ಯಾಸ ಜಗತ್ತಿನಲ್ಲಿ ನಾವಿದ್ದೇವೆ. ನಾನು ನಾಸ್ತಿಕ. ಆದರೆ ನನ್ನ ಮನೆಯ ಎದುರಿನ ರಸ್ತೆಯಲ್ಲಿ ಕೆಲ ಯುವಕರು ಗಣಪತಿ ಕೂರಿಸಿದ್ದಾರೆ. ಇದರ ನೇತೃತ್ವ ನನ್ನ ಮೊಮ್ಮಗನೇ ವಹಿಸಿದ್ದಾನೆ. ಇದು ಕೂಡ ಒಂದು ರೀತಿಯ ದ್ವಂದ್ವ ಎಂದು ಪ್ರೊ.ಚಂದ್ರಶೇಖರ ಪಾಟೀಲ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next