Advertisement

ಸ್ಪೀಕ್‌ ಫಾರ್‌ ಕಲಾಂ ಭಾಷಣ ಸ್ಪರ್ಧೆ

12:18 PM Nov 11, 2018 | Team Udayavani |

ಬೆಂಗಳೂರು: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಕನಸಿನಂತೆ ಪ್ರಪಂಚದ ಭವಿಷ್ಯವನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ಚಿಂತನೆಗಳನ್ನು ಹಂಚಿಕೊಳ್ಳಲು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ದಿ ಹಿಂದು ಗ್ರೂಪ್‌ ಉತ್ತಮ ಅವಕಾಶವೊಂದನ್ನು ಕಲ್ಪಿಸಿದೆ.

Advertisement

9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “ಸ್ಪೀಕ್‌ ಫಾರ್‌ ಕಲಾಂ’ ಎಂಬ ಭಾಷಣ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು, ಪ್ರಪಂಚದ ಭವಿಷ್ಯ ಬದಲಿಸುವ ನಿಟ್ಟಿನಲ್ಲಿ ತಮ್ಮಲ್ಲಿರುವ ಆಲೋಚನೆಗಳನ್ನು ಬಿಚ್ಚಿಡಬಹುದಾಗಿದ್ದು, ಆಸಕ್ತಿಯುಳ್ಳ ಶಾಲಾ ಕಾಲೇಜುಗಳು ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ದಿ ಹಿಂದು ಗ್ರೂಪ್‌ ಆಯೋಜಿಸುತ್ತಿರುವ ಭಾಷಣ ಸ್ಪರ್ಧೆಯಲ್ಲಿ 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಜ್ಯೂನಿಯರ್‌ ವಿಭಾಗದಲ್ಲಿ ಹಾಗೂ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ನ 2ನೇ ವಾರದಿಂದ ಸ್ಪರ್ಧೆಗಳು ಆರಂಭವಾಗಲಿದ್ದು, ನ.23ರಂದು ಅಂತಿಮ ಸ್ಪರ್ಧೆ ನಡೆಯಲಿದೆ.

ಎರಡೂ ವಿಭಾಗಗಳ ಮೊದಲ ಮೂರು ವಿಜೇತರಿಗೆ ಬೈಜುಸ್‌ ಲರ್ನಿಂಗ್‌ ಅಪ್ಲಿಕೇಷನ್‌ ವತಿಯಿಂದ ಟ್ಯಾಬ್‌ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಸ್ಪರ್ಧೆಗಳಿಗೆ ಬೈಜುಸ್‌, ಕೆಎಂಎಫ್‌ ನಂದಿನಿ, ಎಂಎಸ್‌ಐಎಲ್‌ ವಿದ್ಯಾ ಹಾಗೂ ಲೇಖಕ್‌ ಸಹ ಪ್ರಾಯೋಜಕತ್ವ ವಹಿಸಲಿವೆ. ಮಾಹಿತಿಗೆ 9742345039/8970636149 ಹಾಗೂ ಟ್ರೇಡ್‌ ಎನ್‌ಕ್ವೆ$çರಿಗಳಿಗಾಗಿ 9880416613 (ರಘುನಂದನ್‌), 9845529981 (ಗುರುನಾಥ ರೆಡ್ಡಿ) ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next