Advertisement

ಇಂಗ್ಲಿಷ್‌ ಶಬ್ದ ಮಾತನಾಡಿಸಿ, 55 ಸಾವಿರ ರೂ.ಗೆಲ್ಲಿ!

11:22 PM Nov 01, 2019 | Lakshmi GovindaRaju |

ಹುಬ್ಬಳ್ಳಿ: ಇಲ್ಲಿನ ಈಶ್ವರ ನಗರದ ದಕ್ಷಿಣ ವೈಷ್ಣೋದೇವಿ ಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ.24ರಂದು ಮಧ್ಯಾಹ್ನ 12:30ಕ್ಕೆ ಶ್ರೀ ದೇವಪ್ಪಜ್ಜ ಅವರಿಂದ ಇಂಗ್ಲಿಷ್‌ ಶಬ್ದ ಮಾತನಾಡಿಸುವ ಸ್ಪರ್ಧೆ ನಡೆಯಲಿದೆ.

Advertisement

ದೇವಪ್ಪಜ್ಜ ಅವರಿಂದ ಇಂಗ್ಲಿಷ್‌ ಪದಗಳನ್ನು ಮಾತನಾಡಿಸಿದವರಿಗೆ 55,555 ರೂ. ಬಹುಮಾನ ನೀಡಲಾಗುವುದು. ಪ್ರವೇಶ ಉಚಿತವಾಗಿದ್ದು, ಆಸಕ್ತರು ನ.17ರೊಳಗೆ ಕಾರ್ಯದರ್ಶಿಗಳು, ಕನ್ನಡ ರಾಜ್ಯೋತ್ಸವ ಸಮಿತಿ, ಬಿವೈಕೆ ಸಮಿತಿ ವೈಷ್ಣೋದೇವಿ ಮಂದಿರ, ಈಶ್ವರ ನಗರ ಎಪಿಎಂಸಿ, 580025 ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next